ಸೌಂದರ್ಯದ ಮೂಲಕ ಪಡ್ಡೆ ಹುಡುಗರ ಮನ ಗೆದ್ದಿದ್ದ ನಟಿಗೆ ಯಾವ ಪರಿಸ್ಥಿತಿ ಬಂದಿದೆ ನೋಡಿ ಬೇಜಾರಾಗುತ್ತದೆ ಕಣ್ರಿ. ಈಗಬಾರದಿತ್ತು ಎಂದ ಫ್ಯಾನ್ಸ್.

3,311

ನಮಸ್ಕಾರ ಸ್ನೇಹಿತರೇ ನಾವು ಪ್ರೇಕ್ಷಕರು ಸಿನಿಮಾ ನಟ ಹಾಗೂ ನಟಿಯರ ಜೀವನ ಸಾಕಷ್ಟು ಐಷಾರಾಮಿಯಾಗಿ ಆಡಂಬರದಿಂದ ಯಾವುದೇ ಕಷ್ಟಗಳಿಲ್ಲದ ಕೂಡಿರುತ್ತದೆ ಎಂಬುದಾಗಿ ಅಂದುಕೊಂಡಿರುತ್ತೇವೆ. ಆದರೆ ವಾಸ್ತವ ಎನ್ನುವುದು ಬೇರೆಯದೇ ಆಗಿರುತ್ತದೆ. ಆದರೆ ಅದು ನಮಗೆ ಕಾಣುತ್ತಿರುವುದಿಲ್ಲ. ಹೀಗಾಗಿ ನಾವು ಅದೇ ಕಲ್ಪನೆಯಲ್ಲಿ ಬಾಳುತ್ತಿರುತ್ತೇವೆ. ಹೌದು ಗೆಳೆಯರೇ ಇಂದು ನಾವು ಮಾತನಾಡಲು ಹೊರಟಿರುವುದು ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರ ಕುರಿತಂತೆ. ಹೌದು ಗೆಳೆಯರೆ ಈ ನಟಿ 2004 ರಲ್ಲಿ ಹಂಸ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು.

ನಂತರ 2006 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಮೋಹಿನಿ 9886788888 ಚಿತ್ರದಲ್ಲಿ ಕೂಡ ನಟಿಸುವ ಮೂಲಕ ಸುದ್ದಿಗೆ ಬಂದಿದ್ದರು. ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಮಿರ್ಚಿ ಚಿತ್ರದಲ್ಲಿ ಕೂಡ ವಿಶೇಷ ಸಾಂಗ್ ಗೆ ಸ್ಟೆಪ್ ಹಾಕಿದ್ದರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ತೆಲುಗು ಚಿತ್ರವಾಗಿರುವ ಈಗ ಚಿತ್ರದಲ್ಲಿ ಕೂಡ ಸ್ಪೆಷಲ್ ಪಾತ್ರವನ್ನು ನಿರ್ವಹಿಸಿದ್ದರು. ಆದರೆ 2018 ರಲ್ಲಿ ಬಿಡುಗಡೆಯಾದ ಅಂತಹ ಪಂತಂ ಚಿತ್ರದಲ್ಲಿ ಕೊನೆಯ ಬಾರಿಗೆ ನಟಿಸಿದ್ದರು. ಅದಾದ ನಂತರ ಅವರು ಯಾವುದೇ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಮುಖ್ಯ ಕಾರಣವಾಗಿರುವುದು ಅವರಿಗೆ ಸ್ತನಕ್ಯಾನ್ಸರ್ ಬಂದೊದಗಿದೆ. ಹೌದು ಕೇಳಲು ಬೇಸರವಾದರೂ ಕೂಡ ನಿಜಾಂಶ ಇದೇ.

ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ನಟಿ ಹಂಸ ನಂದಿನಿ ಅವರ ಕುರಿತಂತೆ. ಹಲವಾರು ದಿನಗಳಾದರೂ ಕೂಡ ಇವರ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕದೆ ಸೋಶಿಯಲ್ ಮೀಡಿಯಾ ದಿಂದ ದೂರ ಉಳಿದಿದ್ದರು. ಇದನ್ನು ಪ್ರಶ್ನಿಸಿದ ಅಭಿಮಾನಿಗಳಿಗೆ ಒಂದೇ ಪೋಸ್ಟ್ ಮೂಲಕ ಉತ್ತರ ನೀಡಿದ್ದಾರೆ ಹಂಸ ನಂದಿನಿ. ಹೌದು ಹಂಸ ನಂದಿನಿ ಅವರು ತಲೆಕೂದಲು ಇಲ್ಲದಂತಹ ಫೋಟೋವನ್ನು ಪೋಸ್ಟ್ ಮಾಡುವುದರ ಮುಖಾಂತರ ನನಗೆ ಸ್ತನ ಕ್ಯಾನ್ಸರ್ ಇದೆ ಎಂಬುದಾಗಿ ಹಂಚಿಕೊಂಡಿದ್ದಾರೆ. ಇನ್ನು ಈಗಾಗಲೇ 9 ಬಾರಿ ಕಿಮೊತೆರಪಿ ಮಾಡಿದ್ದಾರಂತೆ. ಇನ್ನು ಏಳು ಬಾರಿ ಕಿಮೊತೆರಪಿ ಮಾಡಬೇಕಾಗಿದೆ ಅಂತೆ. ಈಗ ಅವರ ಒಂದು ಸ್ಥಾನಕ್ಕೆ ಮಾತ್ರ ಕ್ಯಾನ್ಸರ್ ಇದ್ದು ಇನ್ನೊಂದು ಸ್ತರಕ್ಕೆ ಕೂಡ ಆ ಕ್ಯಾನ್ಸರ್ ಹರಡಬಹುದಾದ ಅಂತಹ ಶೇಕಡ 70% ಚಾನ್ಸ್ ಇದೆಯಂತೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹಂಸ ನಂದಿನಿ ಅವರಿಗೆ ನಮ್ಮೆಲ್ಲರ ಶುಭಹಾರೈಕೆ ಅಗತ್ಯವಿದೆ. ಅವರು ಆದಷ್ಟು ಬೇಗ ಗುಣವಾಗಿ ಬರಲಿ ಎಂದು ಹಾರೈಸೋಣ.