ಬ್ರಹ್ಮಚಾರಿ ದತ್ತಣ್ಣ ಮದುವೆಯಾಗದೆ ಉಳಿದಿದ್ದು ಯಾಕೆ ಗೊತ್ತಾ?? ದತ್ತಣ್ಣ ಅವರ ಹಿಸ್ಟರಿ ಕೇಳಿದರೆ ನಿಜಕ್ಕೂ ಬೆರಗಾಗುತ್ತೀರಿ.

1,447

ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗದಲ್ಲಿ ಕೇವಲ ನಾಯಕ ನಟ ಹಾಗೂ ನಟಿಯರಿಗೆ ಮಾತ್ರವಲ್ಲದೆ ಪೋಷಕ ನಟ ಹಾಗೂ ನಟಿಯರಿಗೆ ಕೂಡ ಪ್ರೇಕ್ಷಕರಿಂದ ಮೆಚ್ಚುಗೆಗಳು ಸಮಾನವಾಗಿ ಸ್ವೀಕರಿಸಲ್ಪಡುತ್ತದೆ. ಹೌದು ಗೆಳೆಯರೇ ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಇದೇ ಮಾದರಿಯ ನಟರೊಬ್ಬರ ಕುರಿತಂತೆ.

ನಾವು ಮಾತನಾಡಲು ಹೊರಟಿರುವುದು ಕನ್ನಡದ ರಾಷ್ಟ್ರ ಪ್ರಶಸ್ತಿ ವಿಜೇತ ಪೋಷಕನಟ ದತ್ತಣ್ಣನವರ ಕುರಿತಂತೆ. ದತ್ತಣ್ಣನವರ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ ಏನೆಂದರೆ ಅವರು ವಾಯುದಳದಲ್ಲಿ ಇಪ್ಪತ್ತು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಂತರ ಚಿತ್ರರಂಗಕ್ಕೆ ಎಂಟ್ರಿ ನೀಡಿದವರು. ಲೇಟಾಗಿ ಎಂಟ್ರಿ ನೀಡಿದರೂ ಕೂಡ ಚಿತ್ರರಂಗದಲ್ಲಿ ಇನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಪೋಷಕ ನಟರಾಗಿ ನಟಿಸಿದ್ದಾರೆ. ದತ್ತಣ್ಣ ಮೂಲತಹ ಚಿತ್ರದುರ್ಗದವರು. ಹರಿಹರ ಹಾಗು ವೆಂಕಮ್ಮನವರ ಸುಪುತ್ರನಾಗಿ 1942 ರಂದು ಜನಿಸುತ್ತಾರೆ. ಚಿಕ್ಕವಯಸ್ಸಿನಿಂದಲೂ ಕೂಡ ದತ್ತಣ್ಣನವರ ಓದುವುದರಲ್ಲಿ ಸದಾ ಮುಂದು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ತುಡಿತ ಅವರಲ್ಲಿ ಬಾಲ್ಯದಿಂದಲೂ ಕೂಡ ಗಟ್ಟಿಯಾಗಿ ನೆಲೆಯೂರಿತ್ತು.

ಇನ್ನು ದತ್ತಣ್ಣ ಸೈನಿಕ ಸೇರಿದ ಕಹಾನಿ ಕೂಡ ರೋಚಕವಾದದ್ದು. 1962 ಸಮಯದಲ್ಲಿ ಭಾರತ ಚೀನಾ ನಡುವಿನ ಸಮರದಲ್ಲಿ ಅಂತಿಮ ಪದವಿಯಲ್ಲಿ ಇದ್ದಂತಹ ವಿದ್ಯಾರ್ಥಿಗಳನ್ನು ನೇರವಾಗಿ ಸೈನ್ಯಕ್ಕೆ ಸೇರಿಕೊಳ್ಳಲು ಅಂದಿನ ಪ್ರಧಾನಿ ನೆಹರುರವರು ಹೇಳುತ್ತಾರೆ. ಈ ಸಂದರ್ಭದಲ್ಲಿ ದತ್ತಣ್ಣನವರ ರಾಷ್ಟ್ರಪತಿ ವಿವಿ ಗಿರಿ ಅವರಿಂದಲೇ ಪ್ರಮಾಣಪತ್ರವನ್ನು ಸ್ವೀಕರಿಸಿ ಸೈನ್ಯಕ್ಕೆ ಸೇರುತ್ತಾರೆ. ಬೆಂಗಳೂರಿನಲ್ಲಿ ಐಎಎಸ್ ವಿಜ್ಞಾನದ ಸ್ನಾತಕೋತ್ತರ ಪದವಿಯನ್ನು ಪೂರೈಸಿ ಭೂತಳದಲ್ಲಿ 20ವರ್ಷಗಳ ಕಾಲ ಸೇವೆಯನ್ನು ವಿಂಗ್ ಕಮಾಂಡರ್ ಆಗಿ ಸಲ್ಲಿಸುತ್ತಾರೆ.

ನಟನೆಗೂ ದತ್ತಣ್ಣನವರ ಯಾವುದೇ ಸಂಬಂಧವಿರಲಿಲ್ಲ ಆದರೂ ಕೂಡ ರಂಗಭೂಮಿಯಿಂದ ಆಗಿ ನಟನೆಗೆ ಸೇರುವಂತಾಯಿತು. 1982 ರಲ್ಲಿ ದೆಹಲಿಯ ಎಚ್ಎಎಲ್ ನಲ್ಲಿ ಇರಬೇಕಾದರೆ ಬಿವಿ ಕಾರಂತರವರ ನಹಿ ನಹಿ ರಕ್ಷತಿ ಎಂಬ ನಾಟಕದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುತ್ತಾರೆ. ಇದರಿಂದ ಮೊದಲ್ಗೊಂಡು ಹಲವಾರು ನಾಟಕಗಳಲ್ಲಿ ಪಾತ್ರವನ್ನು ನಿರ್ವಹಿಸುತ್ತಾರೆ ನಮ್ಮ ದತ್ತಣ್ಣ.

ಮೊದಮೊದಲಿಗೆ ಹಲವಾರು ನಾಟಕಗಳಲ್ಲಿ ಕಿರುಚಿತ್ರಗಳಲ್ಲಿ ದತ್ತಣ್ಣನವರ ನಟಿಸಿ ಕೊಳ್ಳುತ್ತ ಬಂದರು. ನಂತರ ಟಿ ಎಸ್ ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬಂದತಹ ಆಸ್ಫೋಟ ಚಿತ್ರದಲ್ಲಿ ನಟಿಸುವ ಮೂಲಕ ರಾಜ್ಯಪ್ರಶಸ್ತಿಯನ್ನು ಗಳಿಸಿದ್ದಾರೆ. ಇದರಿಂದಾಗಿ ದತ್ತಣ್ಣನವರ ನಟನೆ ವೃತ್ತಿ ಎನ್ನುವುದು ಪ್ರಾರಂಭವಾಗುತ್ತದೆ. ಇದಾದ ನಂತರ ರಾಷ್ಟ್ರಪ್ರಶಸ್ತಿ ರಾಜ್ಯಪ್ರಶಸ್ತಿಗೆ ಒಂದಾದಮೇಲೊಂದರಂತೆ ಪ್ರಶಸ್ತಿಗಳ ಸರಮಾಲೆಯನ್ನೇ ತಮ್ಮ ಕುತ್ತಿಗೆಗೆ ಶೋಭಿಸಿಕೊಂಡರು. ಇನ್ನು ಭಾರತ ಸ್ಟೋರ್ ಎನ್ನುವ ಚಿತ್ರಕ್ಕೆ ದತ್ತಣ್ಣನವರ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.

ಇಷ್ಟೊಂದು ಪ್ರಶಸ್ತಿ ಸರಮಾಲೆಯನ್ನು ಪಡೆದುಕೊಂಡಿರುವ ದತ್ತಣ್ಣನವರ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಅಕ್ಷಯ್ ಕುಮಾರ್ ನಟನೆಯ ಮಂಗಳಯಾನ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಯಾಕೆ ಮದುವೆ ಆಗಿಲ್ಲ ಎಂದು ದತ್ತಣ್ಣನವರನ್ನು ಕೇಳಿದರೆ, ಮದುವೆ ಆಗೋದಕ್ಕೆ ಉತ್ತಮ ಕಾರಣ ಸಿಕ್ಕಿಲ್ಲ ಎಂಬುದಾಗಿ ಹಾಸ್ಯಾಸ್ಪದವಾದ ಉತ್ತರವನ್ನು ನೀಡಿದ್ದಾರೆ ದತ್ತಣ್ಣನವರು. ಏನೇ ಆಗಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಹೊರ ದತ್ತಣ್ಣನವರ ಪ್ರತಿಭೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ದತ್ತಣ್ಣನವರ ನಟನೆಯ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.