ಬದಲಾಗುತ್ತಿದೆ ಭಾರತದ ಅದೃಷ್ಟ, ಸಿಕ್ಕಿತು ಮತ್ತೊಂದು ಬಾರಿ ಚಿನ್ನದ ನಿಕ್ಷೇಪ, ಎಷ್ಟು ಕೋಟಿ ಟನ್ ಅದಿರು ಚಿನ್ನ ಸಿಕ್ಕಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಚಿನ್ನಕ್ಕೆ ಜೀವಕ್ಕಿರುವ ಬೆಲೆ ಎನ್ನುವ ಮಾತಿದೆ. ಹೌದು ಚಿನ್ನವನ್ನು ಬೇಡ ಎನ್ನುವವರೇ ಇಲ್ಲ, ಭಾರತದಲ್ಲಿ ಮಹಿಳೆಯರಂತೂ ಪುರಾತನ ಕಾಲದಿಂದಲೂ ಚಿನ್ನ ಪ್ರಿಯರು. ಚಿನ್ನವನ್ನು ಆಭರಣವಾಗಿ ತೊಡುವುದಕ್ಕೆ ಕೆಲವರು ಖರೀಧಿಸಿದರೆ, ಇನ್ನೂ ಕೆಲವರು ಅದನ್ನು ಆಪದ್ಭಾಂತವ ಅಂತ ಉಳಿಸಿಡುತ್ತಾರೆ, ಚಿನ್ನವನ್ನು ಇನ್ವೆಸ್ಟ್ ಮಡುವವರು ಇನ್ನೂ ಕೆಲವು ಮಂದಿ. ಹಾಗಾಗಿ ಚಿನ್ನ ಎನ್ನುವುದು ನಮಗೆ ಆಪದ್ಭಾಂಧವನೂ ಹೌದು, ಭಾವನೆಯೋ ಹೌದು, ವ್ಯಾಪಾರ ಕೂಡ.
ಇನ್ನು ನಮ್ಮಲ್ಲಿ ಮೊದಲ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು ಕೋಲಾರದ ಚಿನ್ನದ ಗಣಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಲ್ಲಿಂದ ಅದೆಷ್ಟು ಸಾವಿರ ಕೋಟಿ ಟನ್ ಚಿನ್ನವನ್ನು ತೆಗೆದಿದ್ದಾರೆ ಎಂಬುದಕ್ಕೆ ಲೆಕ್ಕವಿಲ್ಲ. ಬಳಿಕ ನಮ್ಮದೇಶದಲ್ಲಿ ಇನ್ಣೂ ಇತರ ರಾಜ್ಯಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿತ್ತು. ಆ ರಾಜ್ಯಗಳು ಯಾವವು ಎಂದರೆ ಜಾರ್ಖಂಡ್, ಉತ್ತರ ಪ್ರದೇಶ್ ಹಾಗೂ ರಾಜಸ್ಥಾನ. ಆದರೆ ಇದ್ಯಾವುದೂ ಕೋಲಾರದ ಚಿನ್ನದ ಗಣಿಯಷ್ಟು ಪ್ರಸಿದ್ಧಿ ಪಡೆಯಲಿಲ್ಲ ಎನ್ನುವುದೂ ಗಮನಿಸಬೇಕಾದ ಸಂಗತಿ.

ಚಿನ್ನದ ನಿಕ್ಷೇಪ ಇರುವ ರಾಜ್ಯಗಳ ಪಟ್ಟಿಯಲ್ಲಿ ಇನ್ನೊಂದು ಹೊಸ ರಾಜ್ಯ ಸೇರ್ಪಡೆಯಾಗುತ್ತಿದೆ. ಹೌದು ನಮ್ಮ ದೇಶದಲ್ಲಿ ಮತ್ತೊಂದು ಕಡೆ ಚಿನ್ನದ ಅದಿರಿನ ನಿಕ್ಷೇಪ ಪತ್ತೆಯಾಗಿದೆ. ಅದುವೇ ಬಿಹಾರ. ಬಡ ರಾಜ್ಯ ಎನಿಸಿಕೊಂಡಿರುವ ಬಿಹಾರದಲಿ ೨೦ ಕೋಟಿ ಟನ್ ಚಿನ್ನದ ಅದಿರಿನ ನಿಕ್ಷೇಪ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಇನ್ನು ಹೇಗೆ, ಯಾವಾಗ ಇಲ್ಲಿ ಗಣಿ ಶುರುಮಾಡುತ್ತಾರೆ ಎನ್ನುವ ಬಗ್ಗೆ ಮಾಹಿತಿಯಿಲ್ಲ, ಕಾದು ನೋಡಬೇಕು. ಹಾಗಾಗಿ ಈ ರಾಜ್ಯ ಇನ್ನು ಬಡತಾ ರೇಖೆಯಿಂದ ಆಚೆ ಬರಬಹುದು ಎನ್ನುವುದು ಹಲವರ ಅಭಿಮತ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ.