ರಶ್ಮಿಕ ಮಾಡಿದ ತಪ್ಪಿನಿಂದ ಎಚ್ಚೆತ್ತ ಬಾಲಿವುಡ್, ಕನ್ನಡಿಗರಿಗೆ ಸಿಕ್ಕಿತು ಮೊದಲ ಹಂತದ ಗೆಲುವು. ಆಲಿಯಾ ಭಟ್ ಮಾಡಿದ್ದೇನು ಗೊತ್ತಾ??

3,597

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪರಭಾಷಾ ಚಿತ್ರಗಳ ಹಾವಳಿ ಕನ್ನಡ ಹಾಗೂ ಕರ್ನಾಟಕದಲ್ಲಿ ಜಾಸ್ತಿಯಾಗಿದೆ ಎಂದರೆ ಕಂಡಿತವಾಗಿ ತಪ್ಪಾಗಲಾರದು. ಅದಕ್ಕೆ ಉದಾಹರಣೆಯೆಂಬಂತೆ ಇತ್ತೀಚೆಗಷ್ಟೇ ಬಿಡುಗಡೆಯಾದ ಅಂತಹ ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ನಟನೆಯ ಪುಷ್ಪ ಚಿತ್ರ ಕೂಡ ಹೌದು.

ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಸೇರಿದಂತೆ ಪುಷ್ಪಾ ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದು ಹೋಗಿದ್ದರು. ಈ ಸಂದರ್ಭದಲ್ಲಿ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡುವುದಾಗಿ ಕೂಡ ಹೇಳಿಕೊಂಡಿದ್ದರು. ಆದರೆ ಇದೇ ಡಿಸೆಂಬರ್ 17 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅಂತಹ ಪುಷ್ಪ ಚಿತ್ರ ಕನ್ನಡದಲ್ಲಿ ಬಿಡುಗಡೆ ಆಗಿದೆ ಬೆರಳೆಣಿಕೆ ಚಿತ್ರಮಂದಿರಗಳಲ್ಲಿ ಅದರಲ್ಲೂ ಕೂಡ ಪ್ರದರ್ಶನವನ್ನು ಕ್ಯಾನ್ಸಲ್ ಮಾಡಲಾಗಿದೆ.

ಇದರ ವಿರುದ್ಧವಾಗಿ ಹಲವಾರು ಕನ್ನಡ ಸಂಘಟನೆಗಳು ಪ್ರತಿಭಟನೆ ಕೂಡ ಮಾಡಿದ್ದವು. ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣನ ಅವರನ್ನು ಕೂಡ ಸಾಕಷ್ಟು ಸಂಘ-ಸಂಸ್ಥೆಗಳು ಟೀಕಿಸಿದ್ದವು. ನಿಮಗೆ ತಿಳಿದಿರುವಂತೆ ರಶ್ಮಿಕ ಮಂದಣ್ಣ ನವರು ಒಮ್ಮೆ ಕನ್ನಡ ಚಿತ್ರರಂಗವನ್ನು ಬಿಟ್ಟು ತೆಲುಗು ಚಿತ್ರರಂಗಕ್ಕೆ ಹೋದನಂತರ ಕನ್ನಡತನವನ್ನು ಹಾಗೂ ತಾನು ಕನ್ನಡತಿ ಎಂಬ ವಿಚಾರವನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಹೇಳಬಹುದಾಗಿದೆ.

ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಾರಿ ಕನ್ನಡಿಗರು ಹಾಗೂ ಕನ್ನಡ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕರು ಟ್ರೋಲ್ ಮಾಡಿದ್ದಾರೆ. ಇದರ ಕುರಿತಂತೆ ಎಷ್ಟೇ ಅರಿವನ್ನು ಹೇಳುವ ಪ್ರಯತ್ನ ಮಾಡಿದ್ದರು ಕೂಡ ಅವರು ಬುದ್ಧಿ ಕಲಿತಿರಲಿಲ್ಲ. ಇನ್ನು ಪುಷ್ಪಾ ಚಿತ್ರವನ್ನು ಕನ್ನಡ ಚಿತ್ರಮಂದಿರಗಳಲ್ಲಿ ಕನ್ನಡದಲ್ಲಿ ಪ್ರದರ್ಶನ ಮಾಡದ್ದಕ್ಕಾಗಿ ಕನ್ನಡ ಸಂಘಟನೆಗಳು ಬ್ಯಾನ್ ಕೂಡ ಹೇರಿದ್ದವು. ಇನ್ನು ಈ ಕಾರ್ಯಕ್ಕೆ ಈಗ ಪ್ರತಿಫಲ ಸಿಕ್ಕಿದೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರದ ಮೊದಲನೆ ಭಾಗ ಶಿವ ಚಿತ್ರದ ಕುರಿತಂತೆ ಫಸ್ಟ್ ಲುಕ್ ಪೋಸ್ಟರ್ ಗಳು ಈಗಾಗಲೆ ಬಿಡುಗಡೆಯಾಗಿದ್ದು. ಚಿತ್ರದ ಕುರಿತಂತೆ ಈಗಾಗಲೇ ಎಲ್ಲರಲ್ಲೂ ನಿರೀಕ್ಷೆಗಳು ಜಾಸ್ತಿಯಾಗಿದೆ. ಇತ್ತೀಚೆಗಷ್ಟೇ ಕನ್ನಡಕ್ಕೆ ಅವಮರ್ಯಾದೆ ಮಾಡಲು ಹೊರಟಿದ್ದ ಪುಷ್ಪ ಚಿತ್ರತಂಡಕ್ಕೆ ಕನ್ನಡಿಗರು ಬುದ್ಧಿ ಕಲಿಸಿದ್ದನ್ನು ನೋಡಿ ಈಗ ಬಾಲಿವುಡ್ ಕೂಡ ಬುದ್ಧಿ ಕಲಿತಂತಿದೆ.

ಹೌದು ಗೆಳೆಯರೇ ರಣಬೀರ್ ಕಪೂರ್ ಅಲಿಯಾ ಭಟ್ ನಾಯಕ ಹಾಗೂ ನಾಯಕಿಯಾಗಿ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರದ ಪೋಸ್ಟರನ್ನು ಈಗ ಕನ್ನಡದಲ್ಲಿ ಕೂಡ ಬಿಡುಗಡೆ ಮಾಡಿದ್ದಾರೆ. ಇನ್ನು ಈ ಚಿತ್ರ ಕನ್ನಡದಲ್ಲಿ ಕೂಡ ಬಿಡುಗಡೆಯಾಗಲಿದೆ ಎಂಬುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಇನ್ನು ಕನ್ನಡಿಗರ ಕನ್ನಡ ಕುರಿತಂತೆ ಅರಿವು ಮೂಡಿಸುವ ಹೋರಾಟದ ಫಲವಾಗಿ ಆಲಿಯಾ ಭಟ್ ಕೂಡ ಬುದ್ಧಿ ಕಲಿತಿದ್ದಾರೆ ಎಂದು ಹೇಳಬಹುದು.

ಬ್ರಹ್ಮಾಸ್ತ್ರ ಚಿತ್ರದ ಕನ್ನಡ ಪೋಸ್ಟರನ್ನು ಕನ್ನಡದಲ್ಲಿ ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ ಮಹಾಯೋಧನೊಬ್ಬನ ಉದಯವಾಗಲಿದೆ ಎಂದು ಬರೆದು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ನಟಿ ಆಲಿಯಾ ಭಟ್ ರವರು ಪೋಸ್ಟ್ ಮಾಡಿದ್ದಾರೆ. ಮುಂದಿನ ಎಲ್ಲಾ ಪರಭಾಷಾ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಲಿ ಎಂಬ ಕನ್ನಡಿಗರ ಪ್ರಯತ್ನ ಹಾಗೂ ಆಸೆಗೆ ಮುಂದೆ ಬರುವ ಎಲ್ಲಾ ಚಿತ್ರಗಳು ಕೂಡ ಸಾಕ್ಷಿಯಾಗಲಿವೆ ಎಂದು ಹೇಳಲಾಗುತ್ತಿದೆ. ರಣಬೀರ್ ಕಪೂರ್ ಆಲಿಯಾ ಭಟ್ ಅಮಿತಾಬಚ್ಚನ್ ಅಕ್ಕಿನೇನಿ ನಾಗಾರ್ಜುನ ಮೌನಿ ರಾಯ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಕನ್ನಡಿಗರ ಈ ಹೋರಾಟದ ಬಿಸಿಗೆ ಬಾಲಿವುಡ್ ಕೂಡ ಕರಗಿರುವುದು ಉತ್ತಮ ಬೆಳವಣಿಗೆಯಾಗಿದೆ