ಕಾರುಗಳ ಮೇಲೆ ಕಾರುಗಳನ್ನು ಖರೀದಿ ಮಾಡುತ್ತಿರುವ ಡಿ ಬಾಸ್, ಬೆಳ್ಳಂ ಬೆಳಗ್ಗೆ ಮನೆಗೆ ಬಂಡ ಹೊಸ ಕಾರಿನ ಬೆಲೆ ಎಷ್ಟು ಗೊತ್ತೇ??

195

ನಮಸ್ಕಾರ ಸ್ನೇಹಿತರೇ ಕನ್ನಡ ಅತ್ಯಂತ ಹೆಚ್ಚು ಇಷ್ಟಪಡುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಒಬ್ಬರು. ಕನ್ನಡ ಚಿತ್ರರಂಗದ ಲೆಜೆಂಡರಿ ನಟನ ಮಗನಾಗಿದ್ದರೂ ಕೂಡ ಚಿತ್ರರಂಗದಲ್ಲಿ ಬೆಳೆದು ನಿಂತಿದ್ದು ಕೇವಲ ತಮ್ಮ ಪರಿಶ್ರಮ ಹಾಗೂ ಪ್ರತಿಭೆ ಮೂಲಕವೇ ಮಾತ್ರ. ಇಂದಿನ ಕಾಲದ ಎಷ್ಟೋ ಯುವ ನಟರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸ್ಪೂರ್ತಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದರೆ ಖಂಡಿತವಾಗಿಯೂ ಅತಿಶಯೋಕ್ತಿಯಲ್ಲ. ಇನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ದುಬಾರಿ ಕಾರು ಹಾಗೂ ಬೈಕುಗಳು ಎಂದರೆ ಎಲ್ಲಿಲ್ಲದ ಪ್ರೀತಿ.

ಆಗಾಗ ಡಿಬಾಸ್ ರವರು ಹೊಸ ಹೊಸ ಕಾರುಗಳನ್ನು ಖರೀದಿಸುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇವರ ಬಳಿ ಬಿಎಂಡಬ್ಲ್ಯೂ ಬೆಂಜ್ ಆಡಿ ಲ್ಯಾಂಬೋರ್ಗಿನಿ ಹೀಗೆ ದುಬಾರಿ ಬೆಲೆಯ ಕಾರುಗಳ ಕಲೆಕ್ಷನ್ ಗಳು ಇವೆ. ಈಗ ಈ ಕಲೆಕ್ಷನ್ ಗೆ ಹೊಸ ಕಾರೊಂದು ಸೇರ್ಪಡೆಯಾಗಿದ್ದು ಅಭಿಮಾನಿಗಳು ಈ ಕಾರಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಂದರಲ್ಲಿ ಶೇರ್ ಮಾಡಿ ವೈರಲ್ ಮಾಡಿದ್ದಾರೆ. ಹಾಗಿದ್ದರೆ ಆ ಕಾರ್ ಯಾವುದು ಮತ್ತು ಆ ಕಾರಿಗೆ ಇರುವ ಬೆಲೆ ಎಷ್ಟು ಎಂಬುದನ್ನು ನಾವು ನಿಮಗೆ ಇಂದಿನ ಲೇಖನಿಯಲ್ಲಿ ಹೇಳುತ್ತೇವೆ.

ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಂಡುಕೊಂಡಿರುವ ಹೊಸ ಕಾರು ಯಾವುದೆಂದರೆ ಟೊಯೋಟಾ ವೆಲ್ ಫೈರ್ ಎಕ್ಸಿಕ್ಯುಟೀವ್ ಲಾಂಜ್. ಈ ಕಾರಿಗೆ ಬರೋಬ್ಬರಿ 1 ಕೋಟಿ 10 ಲಕ್ಷ ರೂಪಾಯಿ ಬೆಲೆ. ಇನ್ನು ಈ ಕಾರಿನಲ್ಲಿ ಒಟ್ಟು ಎಂಟು ಏರ್ ಬ್ಯಾಗ್ ಗಳಿವೆ. ಸುರಕ್ಷತೆಯನ್ನು ಈ ಕಾರಿನಲ್ಲಿ ಪ್ರಮುಖವಾಗಿ ಅಳವಡಿಸಲಾಗಿದೆ. ಏಳು ಜನರು ಆರಾಮವಾಗಿ ಸಂಚರಿಸ ಬಲ್ಲಂತಹ ಈ ಕಾರು ಬಟನ್ ಗಳಿಂದ ನಿಯಂತ್ರಿತವಾಗಿದೆ. ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಕಾರ್ ಖಂಡಿತವಾಗಿಯೂ ಡಿ ಬಾಸ್ ರವರಿಗೆ ಕಂಫರ್ಟ್ ನೀಡೋದು ಗ್ಯಾರಂಟಿ.