ಹೀರೋ ಮಾಡ್ತೀನಿ ಬನ್ನಿ ಎಂದು ಯುವಕರನ್ನು ಕರೆಸಿಕೊಂಡು ಈ ದೊಡ್ಡ ನಿರ್ಮಾಪಕಿ ಮಾಡುತ್ತಿದ್ದ ಕೆಲಸವೇನು ಗೊತ್ತೇ?? ಇಂಗು ಇರ್ತಾರ??

31,732

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಸಿನಿಮಾ ಎಂದರೆ ದೇವಸ್ಥಾನ ಅಲ್ಲಿ ಕಲಾವಿದರು ಕಲಾ ಸೇವೆಯನ್ನು ಮಾಡಲು ಬರುತ್ತಾರೆ ಎಂಬುದಾಗಿ ಹಲವಾರು ಪವಿತ್ರವಾದ ಭಾವನೆಗಳು ಜನರಲ್ಲಿ ಕೂಡ ಇದ್ದವು ಹಾಗೂ ಕಲಾವಿದರಲ್ಲಿ ಕೂಡ ಇದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಎನ್ನುವುದು ಕೇವಲ ವ್ಯಾಪಾರದ ಸ್ಥಳ ಎಂಬುದಾಗಿ ಬದಲಾಗಿಬಿಟ್ಟಿದೆ.

ಆದರೆ ಇತ್ತೀಚಿಗೆ ವ್ಯಾಪಾರಕ್ಕಿಂತ ಹೆಚ್ಚಾಗಿ ಸಿನಿಮಾದ ಹಿಂದೆ ಕಾಣದ ನಾನಾ ಮುಖಗಳು ಇವೆ ಎಂಬುದು ಬೆಳಕಿಗೆ ಬಂದಿದೆ. ಇನ್ನು ಇತ್ತೀಚಿಗಷ್ಟೇ ಒಬ್ಬ ನಿರ್ಮಾಪಕಿ ಹೀರೋ ಮಾಡುತ್ತೇನೆ ಎಂದು ನಾಯಕನಟರ ಜೊತೆಗೆ ಮಾಡುತ್ತಿದ್ದ ಕೆಲಸಗಳು ಬೆಳಕಿಗೆ ಬಂದಿದೆ. ಹಾಗಿದ್ದರೆ ಆ ನಿರ್ಮಾಪಕಿ ಯಾರು ಮತ್ತು ಆಕೆ ಮಾಡುತ್ತಿದ್ದ ಕೆಲಸಗಳೇನು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ. ಹೌದು ಗೆಳೆಯರೇ ಈಕೆ ತಾನು ನಿರ್ಮಾಪಕಿ ಎಂದು ಅದೆಷ್ಟೋ ಜನ ನಟರಿಗೆ ತಾನು ಹೀರೋ ಮಾಡಿಸುತ್ತೇನೆ ಎಂದು ಪಂಗನಾಮ ಹಾಕಿದ್ದಾಳೆ.

ಈ ಮೋಸ ಹೋದವರ ಲಿಸ್ಟಿನಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ಮಹೇಶ್ ಬಾಬು ರವರ ಸಹೋದರಿ ಕೂಡ ಇದ್ದಾರೆ. ಇನ್ನು ಈಗಾಗಲೇ ಈಕೆಯನ್ನು ಪೊಲೀಸರು ಬಂಧಿಸಿದ್ದು ಈಕೆ ಹೆಸರು ಶಿಲ್ಪ ಚೌಧರಿ. ನಿರ್ಮಾಪಕಿ ಎಂದು ತೆಲುಗು ಚಿತ್ರರಂಗದಲ್ಲಿ ಓಡಾಡಿಕೊಂಡಿದ್ದ ಶಿಲ್ಪ ಚೌಧರಿ ಈಗಾಗಲೇ ಹಲವಾರು ದೊಡ್ಡ ದೊಡ್ಡ ಕುಳಗಳಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಸದ್ಯ ಈಗ ಶಿಲ್ಪ ಚೌದರಿ ಪೊಲೀಸರ ಅತಿಥಿಯಾಗಿದ್ದು ಈಕೆಯ ಕಾರಣದಿಂದಾಗಿ ಮೋಸ ಹೋದಂತಹ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇನ್ನು ಶಿಲ್ಪಾ ಚೌಧರಿಯವರು ಮಾಡುತ್ತಿದ್ದ ಮೋಸದ ಪ್ಲಾನ್ಗಳು ಕೂಡ ಸಾಕಷ್ಟು ಇಂಟರೆಸ್ಟಿಂಗ್ ಆಗಿದೆ. ಹೌದು ಗೆಳೆಯರೇ ಸಿನಿಮಾದವರು ನಡೆಸುತ್ತಿದ್ದ ದೊಡ್ಡದೊಡ್ಡ ಪಾರ್ಟಿಗಳಿಗೆ ತಾನು ನಿರ್ಮಾಪಕಿ ಎಂದು ಹೇಳಿಕೊಂಡು ಶಿಲ್ಪ ಚೌಧರಿಯವರು ಹೋಗುತ್ತಿದ್ದರು. ಅಲ್ಲಿ ಹೋದ ನಂತರ ಪ್ರತಿಯೊಬ್ಬರ ಬಳಿ ತಾನು ಸಿನಿಮಾ ನಿರ್ಮಾಪಕಿ ಹಾಗೂ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುವವಳು ಎಂದು ಪರಿಚಯ ಮಾಡಿಕೊಳ್ಳುತ್ತಿದ್ದಳು.

ಇನ್ನು ತಾನು ಬಡ್ಡಿಗೆ ಹಣ ನೀಡುತ್ತೇನೆ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂಬುದಾಗಿ ಪುಂಗಿಯನ್ನು ಓದುತ್ತಿದ್ದಳು. ಇನ್ನು ಇದಕ್ಕೆ ಶಿಲ್ಪಾ ಚೌಧರಿಗೆ ಗಂಡನ ಸಾತ್ ಕೂಡ ಇತ್ತು. ಇವಳ ಮಾತನ್ನು ನಂಬಿ ತೆಲುಗು ಚಿತ್ರರಂಗದ ಪ್ರಿನ್ಸ್ ಮಹೇಶ್ ಬಾಬುರವರ ತಂಗಿ ಪ್ರಿಯದರ್ಶನಿ ಕೂಡ 3.90 ಕೋಟಿ ರೂಪಾಯಿಯನ್ನು ರಿಯಲ್ ಎಸ್ಟೇಟ್ ಗಾಗಿ ನೀಡಿ ಮೋಸ ಹೋಗಿ ನಂತರ ಪೊಲೀಸ್ ದೂರನ್ನು ಕೂಡ ದಾಖಲಿಸಿ ಈಗ ಶಿಲ್ಪ ಚೌಧರಿ ಪೊಲೀಸರ ಅತಿಥಿಯಾಗಿದ್ದಾಳೆ. ಇನ್ನು ಮಹೇಶ್ ಬಾಬುರವರ ತಂಗಿ ಪ್ರಿಯದರ್ಶನಿ ಅವರ ಪ್ರಕರಣ ಹೊರಬರುತ್ತಿದ್ದಂತೆ ಶಿಲ್ಪಾ ಚೌಧರಿಗೆ ಹಣವನ್ನು ನೀಡಿರುವ ಹಲವರು ಎಚ್ಚೆತ್ತುಕೊಂಡಿದ್ದಾರೆ.

ಇದರ ಬೆನ್ನಲ್ಲೆ ತೆಲುಗು ಚಿತ್ರರಂಗದ ಯುವ ನಟ ಹರ್ಷ ಕನುಮೇಲಿ ನನ್ನ ಬಳಿ ಕೂಡ ಶಿಲ್ಪ ಚೌಧರಿ ಮೂರು ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಹಣವನ್ನು ವಾಪಸು ಕೇಳಿದ್ದಕ್ಕಾಗಿ ಬೌನ್ಸರ್ ಗಳನ್ನು ಬಿಟ್ಟು ಹೆದರಿಸಿದ್ದಾರೆ ಎಂಬುದಾಗಿ ದೂರು ನೀಡಿದ್ದಾರೆ. ಸದ್ಯಕ್ಕೆ ಶಿಲ್ಪ ಚೌದರಿ ಹಾಗೂ ಅವಳ ಗಂಡನನ್ನು ಇಬ್ಬರನ್ನು ಕೂಡ ಕಸ್ಟಡಿಗೆ ತೆಗೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ಯಾರೆಲ್ಲ ಈಕೆಯಿಂದ ಮೋಸ ಹೋಗಿದ್ದಾರೆ ಎಂಬುದಾಗಿ ತಿಳಿದು ಬರಬೇಕಷ್ಟೆ. ಇಂದಿನ ಕಾಲದಲ್ಲಿ ಕೂಡ ಚಿತ್ರರಂಗದಲ್ಲಿ ಈ ತರಹ ಮೋಸ ಹೋಗುವವರು ಇದ್ದಾರೆ ಎಂದರೆ ಕಂಡಿತವಾಗಿ ನಂಬಲು ಸಾಧ್ಯವಾಗುತ್ತಿಲ್ಲ.