ಒಂದಲ್ಲ ಎರಡಲ್ಲ 16 ವರ್ಷಗಳಿಂದ ನಟನೆ ಮಾಡುತ್ತಿರುವ ಲಕ್ಷ್ಮಿ ರೈ ರವರ ನಿಜವಾದ ವಯಸ್ಸೆಷ್ಟು ಗೊತ್ತಾ?? ಇಷ್ಟು ಚಿಕ್ಕವರಾ??

923

ನಮಸ್ಕಾರ ಸ್ನೇಹಿತರೇ ನಾವು ಇಂದು ಮಾತನಾಡಲು ಹೊರಟಿರುವುದು ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಕೂಡ ನಟಿಸಿರುವ ಸ್ಟಾರ್ ನಟಿಯೊಬ್ಬರ ಕುರಿತಂತೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಪ್ರತಿಭಾನ್ವಿತ ನಟಿ ಲಕ್ಷ್ಮಿ ರೈ ಅವರ ಕುರಿತಂತೆ. ನಟಿ ಲಕ್ಷ್ಮಿ ರೈ ರವರು ಕನ್ನಡ ತಮಿಳು ತೆಲುಗು ಹಾಗೂ ಮಲಯಾಳಂ ನಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ.

ಇನ್ನು ಲಕ್ಷ್ಮಿ ರವರು ಕರ್ನಾಟಕ ಮೂಲದ ನಟಿ ಎಂದು ಹೇಳುವುದಕ್ಕೆ ನಮಗೆ ಹೆಮ್ಮೆ ಆಗುತ್ತದೆ. ಲಕ್ಷ್ಮಿ ರೈ ರವರು ಕಳೆದ 16 ವರ್ಷಗಳಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಲಕ್ಷ್ಮಿ ರವರು ರಿಯಲ್ ಸ್ಟಾರ್ ಉಪೇಂದ್ರ ರವರ ಕಲ್ಪನಾ ಚಿತ್ರದಲ್ಲಿ ನಟಿಸಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಪ್ರಮುಖವಾಗಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ಲಕ್ಷ್ಮಿ ರೈ ರವರು ಕಾಣಿಸಿಕೊಂಡಿದ್ದಾರೆ. ಯಾವುದೇ ರೀತಿಯ ಪಾತ್ರವನ್ನಾದರೂ ಕೂಡ ಲಕ್ಷ್ಮಿ ರೈ ರವರು ನಿರ್ವಹಿಸಬಲ್ಲರು ಎಂಬುದಾಗಿ ಈಗಾಗಲೇ ಹಲವಾರು ಪಾತ್ರಗಳ ಮೂಲಕ ಸಾಬೀತುಪಡಿಸಿದ್ದಾರೆ.

2005 ರಲ್ಲಿ ತಮಿಳು ಚಿತ್ರದ ಮೂಲಕ ನಡೆಸುವ ಮೂಲಕ ನಟನಾ ವೃತ್ತಿ ಗೆ ಪಾದಾರ್ಪಣೆ ಮಾಡಿರುತ್ತಾರೆ. ಇನ್ನು ಇವರು ಕನ್ನಡ ಶಾರ್ಟ್ ಫಿಲಂ ನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇನ್ನು ನಟಿ ಲಕ್ಷ್ಮಿ ರೈ ರವರ ವಯಸ್ಸಿನ ಕುರಿತಂತೆ ಅವರ ಅಭಿಮಾನಿಗಳು ಹಾಗೂ ಸಿನಿಮಾ ರಸಿಕರು ಸದಾ ಗೊಂದಲದಲ್ಲಿರುತ್ತಾರೆ. ಲಕ್ಷ್ಮಿ ರೈ ರವರು ಕೂಡ 15 ನೇ ವಯಸ್ಸಿಗೇ ಚಿತ್ರರಂಗಕ್ಕೆ ಕಾಲಿಟ್ಟು ಈಗಾಗಲೇ ಚಿತ್ರರಂಗದಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಅಂದರೆ ಲಕ್ಷ್ಮಿರೈ ರವರಿಗೆ ಈಗಾಗಲೇ 31 ವರ್ಷ ವಯಸ್ಸಾಗಿದೆ. ಲಕ್ಷ್ಮಿ ರವರ ಸೌಂದರ್ಯವನ್ನು ನೋಡಿದರೆ ಅವರಿಗೆ 31 ವರ್ಷ ಆಗಿದೆ ಎನ್ನುವುದನ್ನು ನಂಬಲು ಕೂಡ ಸಾಧ್ಯವಾಗುವುದಿಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.