ಬಿಡುಗಡೆಗೂ ಮುನ್ನವೇ ರಾಜಮೌಳಿಗೆ ಬಿಗ್ ಶಾಕ್, ಬಹುನಿರೀಕ್ಷಿತ RRR ಸಿನೆಮಾದ ನಷ್ಟದಲ್ಲಿ ಮುಳುಗಲಿದೆಯೇ??

921

ನಮಸ್ಕಾರ ಸ್ನೇಹಿತರೇ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುಕೋಟಿ ವೆಚ್ಚದ ಮಲ್ಟಿ ಸ್ಟಾರರ್ ಆರ್.ಆರ್.ಆರ್. ಸಿನಿಮಾಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ಹೌದು ಇಡೀ ಭಾರತೀಯ ಚಿತ್ರರಂಗ ಕೋವಿಡ್ 19 ಪರಿಣಾಮ ಅಪಾರ ನಷ್ಟವನ್ನು ಅನುಭವಿಸಿದೆ.

ಇತ್ತೀಚೆಗೆ ಕೆಲವು ತಿಂಗಳ ನಂತರ ಎಲ್ಲವೂ ಸಹಜ ಸ್ಥಿತಿಯತ್ತ ಮರುಕಳಿಸಿ ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು ಎಲ್ಲಾ ಕ್ಷೇತ್ರಗಳಿಗೂ ಮಾರ್ಗಸೂಚಿ ಅನ್ವಯ ವಿನಾಯಿತಿ ನೀಡಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಅದರಂತೆ ಮನರಂಜನಾ ಕ್ಷೇತ್ರ ಸಿನಿಮಾರಂಗಕ್ಕೂ ಕೂಡ ವಿನಾಯಿತಿ ನೀಡಿ ಚಿತ್ರ ಪ್ರದರ್ಶನ, ಚಿತ್ರೀಕರಣಕ್ಕೆ ಸಂಪೂರ್ಣ ವಿನಾಯಿತಿ ನೀಡಿದೆ. ಇದರ ಬೆನ್ನಲ್ಲೇ ಚಿತ್ರೀಕರಣ ಮುಗಿಸಿಕೊಂಡು ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಅನೇಕ ಸ್ಟಾರ್ ಸಿನಿಮಾಗಳು ಸಿದ್ದಗೊಂಡಿದ್ದವು.

ಅದರಂತೆ ಇದೀಗ ಸಿನಿಮಾಗಳು ಕೂಡ ಬಿಡುಗಡೆಗೆ ಸಿದ್ದವಾಗಿವೆ. ಇದರ ನಡುವೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಸಿನಿಮಾ ರೆಗ್ಯೂಲೇಶನ್ ಆಕ್ಟ್ ಅಡಿಯಲ್ಲಿ ಒಂದಷ್ಟು ತಿದ್ದುಪಡಿ ಮಾಡಿ ಹೊಸ ನೀತಿ ನಿಯಮಗಳನ್ನು ಜಾರಿಗೆ ತಂದಿದೆ. ಈ ನೂತನ ನಿಯಮದ ಪ್ರಕಾರ ಸಿನಿಮಾ ಟಿಕೆಟ್ ಗಳನ್ನು ನೇರವಾಗಿ ಸರ್ಕಾರದ ಅಧಿಕೃತ ವೆಬ್ ಸೈಟ್ ಮೂಲಕ ಮಾತ್ರ ಟಿಕೆಟ್ ಬುಕ್ ಮಾಡಬೇಕಾಗಿರುತ್ತದೆ.

ಜೊತೆಗೆ ಟಿಕೆಟ್ ದರವನ್ನು ಸರ್ಕಾರವೇ ನಿಗದಿ ಮಾಡಲಿದ್ದು, ಪ್ರದರ್ಶನದ ಮಿತಿಗಳನ್ನು ಸರ್ಕಾರವೇ ನಿರ್ಧಾರ ಮಾಡಲಿದೆ. ದಿನವೊಂದಕ್ಕೆ ನಾಲ್ಕು ಪ್ರದರ್ಶನಕ್ಕೆ ಮಾತ್ರ ಅವಕಾಶ ಇರುತ್ತದೆ. ಈ ನಿಯಮ ಜಾರಿಗೆ ತರಲು ಈಗಾಗಲೇ ಆಂಧ್ರ ಪ್ರದೇಶ ಸರ್ಕಾರ ವಿಧಾನಸಭೆಯಲ್ಲಿ ಸರ್ವ ಪಕ್ಷಗಳ ಒಪ್ಪಿಗೆಯನ್ನ ಕೂಡ ಪಡೆದುಕೊಂಡಿದೆ. ಆದರೆ ಈ ಸಿನಿಮಾ ರೆಗ್ಯೂಲೇಶನ್ ಆಕ್ಟ್ ತಿದ್ದುಪಡಿಯಲ್ಲಿ ಜಾರಿಗೆ ತಂದಿರುವ ಈ ನಿಯಮಗಳಿಂದಾಗಿ ಚಿತ್ರ ನಿರ್ಮಾಪಕರು, ಥಿಯೇಟರ್ ಮಾಲೀಕರು, ವಿತರಕರಿಗೆ ಭಾರಿ ನಷ್ಟವಾಗಲಿದೆ ಎಂದು ತೆಲುಗು ಚಲನಚಿತ್ರರಂಗ ಅಸಮಾಧಾನ ವ್ಯಕ್ತಪಡಿಸಿದೆ.

ಅದರಂತೆ ಈ ನಿಯಮಕ್ಕೆ ಮೊದಲು ಹೊಡೆತ ತಿನ್ನುವುದು ‌ ಇತ್ತೀಚೆಗೆ ಬಿಡುಗಡೆ ಗೆ ಸಿದ್ದವಾಗಿರುವ ರಾಮ್ ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್.ಟಿ.ಆರ್. ಅಭಿನಯದ ರೌದ್ರಂ ರಣಂ ರುಧಿರಂ ಸಿನಿಮಾಗೆ. ಡಿವಿವಿ ಎಂಟರ್ ಪ್ರೈಸಸ್ ಅಡಿಯಲ್ಲಿ ದಾನಯ್ಯ ಅವರು ಬರೋಬ್ಬರಿ ನಾಲ್ಕು ನೂರು ಕೋಟಿ ವೆಚ್ಚದಲ್ಲಿ ಈ ಆರ್.ಆರ್.ಆರ್.ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹೀಗಿರುವಾಗ ಟಿಕೆಟ್ ಬೆಲೆಯನ್ನ ಸರ್ಕಾರವೇ ಗರಿಷ್ಟ ಮಟ್ಟಕ್ಕೆ ನಿಗದಿ ಮಾಡಿದರೆ ಇದರಿಂದ ನಷ್ಟ ಆಗುವುದು ನಿರ್ಮಾಪಕರಿಗೆ ಎಂದು ದಾನಯ್ಯ ಅವರು ಕೂಡ ಈ ನೂತನ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಆರ್.ಆರ್.ಆರ್. ಸಿನಿಮಾ ಮುಂದಿನ ವರ್ಷ 2022.ರ ಜನವರಿ 7 ರಂದು ಜಗತ್ತಿನಾದ್ಯಂತ ರಿಲೀಸ್ ಆಗಲಿದೆ.