ತಾಯಿ ಜೊತೆಗೆ ಇನ್ಸ್ಟಾಗ್ರಾಂ ರೀಲ್ಸ್ ವಿಡಿಯೋ ಮಾಡಿದ ನಿವೇದಿತಾ ಗೌಡ; ವಿಡಿಯೋ ಫುಲ್ ವೈರಲ್. ಹೇಗಿದೆ ಗೊತ್ತೇ??

1,851

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸಾಮಾಜಿಕ ಜಾಲತಾಣಗಳು ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸೆಲೆಬ್ರಿಟಿಗಳನ್ನು ಹುಟ್ಟುಹಾಕಿದೆ. ಪ್ರತಿಭೆ ಇದ್ದರೆ ಯಾವ ಪ್ಲಾಟ್ಫಾರ್ಮ್ ನಲ್ಲೂ ಕೂಡ ತಮ್ಮ ಬೆಳವಣಿಗೆಗೆ ಬಳಸಿಕೊಳ್ಳಬಹುದು ಎಂಬುದನ್ನು ಸೋಷಿಯಲ್ ಮೀಡಿಯಾದ ಸೆಲೆಬ್ರಿಟಿಗಳು ಈಗಾಗಲೇ ಸಾಧಿಸಿ ತೋರಿಸಿದ್ದಾರೆ. ಇನ್ನು ಇದನ್ನು ಕನ್ನಡದಲ್ಲಿ ಕೂಡ ಈಗಾಗಲೇ ಹಲವಾರು ಜನರ ಸದುಪಯೋಗಪಡಿಸಿಕೊಂಡು ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳ ಆಗಿ ಮಿಂಚುತ್ತಿದ್ದಾರೆ.

ಅವುಗಳಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ನಿವೇದಿತಾ ಗೌಡ ರವರ ಕುರಿತಂತೆ. ಹೌದು ಗೆಳೆಯರೆ ನಿವೇದಿತ ಗೌಡ ರವರು ಕೂಡ ಇದೇ ರೀತಿಯ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ನಲ್ಲಿ ವೀಡಿಯೋಗಳನ್ನು ಪೋಸ್ಟ್ ಮಾಡಿಕೊಂಡು ಸ್ಟಾರ್ ಆದವರು. ಇಲ್ಲಿ ಅವರು ಪಡೆದುಕೊಂಡ ಜನಪ್ರಿಯತೆಯ ಆಧಾರದ ಮೇರೆಗೆ ಅವರಿಗೆ ಬಿಗ್ ಬಾಸ್ ನಲ್ಲಿ ಅವಕಾಶ ನೀಡಲಾಯಿತು. ಬಿಗ್ ಬಾಸ್ ನಲ್ಲಿ ನಿವೇದಿತಾ ಗೌಡ ರವರು ಕಾಣಿಸಿಕೊಂಡ ಮೇಲೆ ಅವರ ಜನಪ್ರಿಯತೆಯನ್ನು ವುದು ಎಲ್ಲೆಗೂ ಮೀರಿ ಹೆಚ್ಚಾಯಿತು. ಇನ್ನು ಈಗ ಅವರು ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ರವರನ್ನು ಮದುವೆಯಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಆಕ್ಟಿವ್ ಆಗಿರುವ ನಿವೇದಿತ ಗೌಡರವರು ಇನ್ಸ್ಟಾಗ್ರಾಮ್ ನಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಕೆಲವು ಸ್ಟಾರ್ ನಟರಿಗೂ ಕೂಡ ಇಷ್ಟು ಅಭಿಮಾನಿಗಳು ಇರುವುದಿಲ್ಲ. ಇನ್ನು ನಿವೇದಿತ ಗೌಡ ರವರು ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ತಾಯಿಯೊಂದಿಗೆ ವಿಡಿಯೋವನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ಇನ್ನು ಇತ್ತೀಚಿಗಷ್ಟೇ ಪೋಸ್ಟ್ ಮಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಕಾಮೆಂಟ್ ನಲ್ಲಿ ಅಭಿಮಾನಿಗಳು ತಮ್ಮ ಮಗಳಿಗೆ ಇಬ್ಬರಿಗೂ ಕೂಡ ಅಭಿನಂದನೆಗಳನ್ನು ಕೂಡ ತಿಳಿಸಿದ್ದಾರೆ. ಈ ವಿಡಿಯೋವನ್ನು ನೋಡಿದ ನಂತರ ನಿಮಗೇನನ್ನಿಸಿತು ಎಂಬುದನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಿ.