ಬಿಗ್ ನ್ಯೂಸ್: ರೋಹಿತ್ ಶರ್ಮ ಹಾಕಿದ ಶರತ್ತಿನಿಂದ ನಾಯಕತ್ವ ಕಳೆದುಕೊಂಡ ಕೊಹ್ಲಿ, ಕೊನೆಗೂ ಬಯಲಾಯ್ತು ಅಸಲಿ ಕಾರಣ. ಏನು ಗೊತ್ತೇ??

952

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಬದಲಾವಣೆಗಳು ಯಾವುದೇ ಮುನ್ಸೂಚನೆ ಇಲ್ಲದೆ ನಡೆದು ಹೋಗಿವೆ. ಇದು ಈಗಾಗಲೇ ಸಾಕಷ್ಟು ಚರ್ಚೆಗೂ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದಿಂದ ನಾಯಕನ ಸ್ಥಾನಕ್ಕೆ ಬಿಸಿಸಿಐ ಕೊಕ್ ನೀಡಿದ್ದು ಸಾಕಷ್ಟು ದೊಡ್ಡಮಟ್ಟದ ಅಸಮಾಧಾನಕ್ಕೆ ಕಾರಣವಾಗಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ವರ್ಷಗಳಿಂದ ಭಾರತದ ಮೂರು ಫಾರ್ಮಟ್ ಗಳಲ್ಲಿ ವಿರಾಟ್ ಕೊಹ್ಲಿ ಅವರು ನಾಯಕನಾಗಿ ಸಾಕಷ್ಟು ದೊಡ್ಡ ಮಟ್ಟದ ಸಾಧನೆಯನ್ನು ಮಾಡಿ ಯಶಸ್ವಿ ನಾಯಕನಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ ರವರು ಒಬ್ಬ ಆಟಗಾರನಾಗಿ ಕೂಡ ಇನ್ನೂ ಹೆಚ್ಚು ಯಶಸ್ವಿಯಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮ ಹೆಸರನ್ನು ಹೊಂದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ರವರು ಇತ್ತೀಚಿಗಷ್ಟೇ ದುಬೈನಲ್ಲಿ ನಡೆದಿರುವ t20 ವರ್ಲ್ಡ್ ಕಪ್ ನಂತರ ಭಾರತೀಯ ಕ್ರಿಕೆಟ್ ತಂಡದ ಟಿ20 ಕಪ್ತಾನ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂಬುದಾಗಿ ಹೇಳಿದ್ದರು.

ಭಾರತೀಯ ಕ್ರಿಕೆಟ್ ತಂಡ t20 ವರ್ಲ್ಡ್ ಕಪ್ ನಲ್ಲಿ ನಾಕೌಟ್ ಹಂತಕ್ಕೆ ತೇರ್ಗಡೆ ಆಗಲೂ ಯಶಸ್ವಿ ಆಗದಿದ್ದ ಕಾರಣ ಇದು ಕೂಡಾ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ನಿರಾಸೆಯನ್ನು ಮೂಡಿಸಿತ್ತು. ಅದರ ಜೊತೆಗೆ ವಿರಾಟ್ ಕೊಹ್ಲಿ ಅವರು ಕೂಡ ಕಪ್ತಾನನ ಸ್ಥಾನದಿಂದ ಕೆಳಗಿಳಿದರು. ಇದು ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಬೇಸರವನ್ನು ಮೂಡಿಸಿತ್ತು. ಆದರೆ ಈಗ ಅದರ ಜೊತೆಗೆ ಹೊಸ ವಿಚಾರವನ್ನು ಕೂಡ ಅಭಿಮಾನಿಗಳಿಗೆ ಇನ್ನಿಲ್ಲದಂತೆ ಕಾಡುತ್ತಿದೆ.

ಅದೇನೆಂದರೆ ವಿರಾಟ್ ಕೊಹ್ಲಿ ಅವರನ್ನು ಅವರ ಇಚ್ಛೆಯನ್ನು ಕೇಳಿದೆ ಅವರ ಇಚ್ಛೆಯ ವಿರುದ್ಧವಾಗಿ ಏಕದಿನ ಕಪ್ತಾನನ ಸ್ಥಾನದಿಂದ ಕೆಳಗಿಳಿಸಿ ರೋಹಿತ್ ಶರ್ಮ ರವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಇದಕ್ಕೆ ರೋಹಿತ್ ಶರ್ಮಾ ರವರು ವಿಧಿಸಿರುವ ಶರತ್ತೆ ಕಾರಣ ಎಂಬುದಾಗಿ ಕೂಡ ಬಿಸಿಸಿಐ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.

ಹೌದು ಗೆಳೆಯರೇ ರೋಹಿತ್ ಶರ್ಮಾ ರವರಿಗೆ ಈ ಹಿಂದೆ ಟಿ20 ಕಪ್ತಾನ ಸ್ಥಾನಕ್ಕೆ ಆಯ್ಕೆ ಮಾಡಿದಾಗ ಅವರು ನನಗೆ ಏಕದಿನ ತಂಡದ ಕಪ್ತಾನ ಸ್ಥಾನವನ್ನು ನೀಡಿದರೆ ಮಾತ್ರ ನಾನು ಟಿ-ಟ್ವೆಂಟಿ ತಂಡದ ಕಪ್ತಾನನಾಗಿ ಮುಂದುವರೆಯುತ್ತೇನೆ ಎಂಬುದಾಗಿ ಬಿಸಿಸಿಐ ಸೆಲೆಕ್ಷನ್ ಕಮಿಟಿಯವರ ಎದುರು ಹೇಳಿದ್ದರು. ಆದರೆ ಈ ವಿಚಾರವನ್ನು ರೋಹಿತ್ ಶರ್ಮಾ ರವರು ಹೇಳಿದ್ದು ಸಾಕಷ್ಟು ಹಿಂದಿನ ಸಮಯದಲ್ಲಿ. ಇನ್ನು ಈಗ ತಂಡದ ಕಪ್ತಾನನಾಗಿ ಆಯ್ಕೆ ಮಾಡಿದ್ದಾಗ ರೋಹಿತ್ ಶರ್ಮಾ ರವರಿಗೆ ತಿಳಿದಿರಲಿಲ್ಲ.

ರೋಹಿತ್ ಶರ್ಮ ರವರನ್ನು ಏಕದಿನ ಕಪ್ತಾನ ಸ್ಥಾನಕ್ಕೆ ಆಯ್ಕೆ ಮಾಡಿದಾಗ ಅವರು ಮುಂಬೈನಲ್ಲಿ ಕೆ ಎಲ್ ರಾಹುಲ್ ರಿಷಬ್ ಪಂತ್ ಅಜಿಂಕ್ಯ ರಹಾನೆ ರವರ ಜೊತೆಗೆ ಬ್ಯಾಟಿಂಗ್ ಪ್ರಾಕ್ಟಿಸ್ ಮಾಡುತ್ತಿದ್ದರಂತೆ. ಇನ್ನು ನಾಯಕನಾಗಿ ರೋಹಿತ್ ಶರ್ಮಾ ರವರು ಏಕದಿನದಲ್ಲಿ 10 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಟಿ-ಟ್ವೆಂಟಿಯಲ್ಲಿ 22 ಪಂದ್ಯಗಳಲ್ಲಿ 18 ಪಂದ್ಯಗಳನ್ನು ಗೆದ್ದಿದ್ದಾರೆ. ಐಪಿಎಲ್ ನಲ್ಲಿ ಕೂಡ ನಾಲ್ಕು ಬಾರಿ ಕಪ್ ಗೆದ್ದಿದ್ದಾರೆ. ಇನ್ನು ರೋಹಿತ್ ಶರ್ಮಾ ರವರು ನಾಯಕನಾಗಿ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ತಮ್ಮ ಅಧಿಕಾರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇನ್ನಷ್ಟು ದೊಡ್ಡಮಟ್ಟದ ಸಾಧನೆಗಳನ್ನು ಸಾಧಿಸಲಿ ಎಂದು ಹಾರೈಸೋಣ.