ಅಶ್ವಿನಿ ಪುನೀತ್ ಅವರಿಗಾಗಿ ಅವರ ಅಕ್ಕ ಹಾಗೂ ಭಾವ ಮಾಡಿರುವ ಕೆಲಸ ನೋಡಿ ಶಿವಣ್ಣ ಕಣ್ಣೀರು, ಏನು ಮಾಡಿದ್ದಾರೆ ಗೊತ್ತೇ??

137

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನಪ್ರಿಯತೆ ಎಷ್ಟಿತ್ತು ಎಂಬುದನ್ನು ನೀವು ಈಗಾಗಲೇ ಹಲವಾರು ಸಿನಿಮಾ ಕಾರ್ಯಕ್ರಮಗಳಲ್ಲಿ ಕೂಡ ನೋಡಿದ್ದೀರಿ. ಅಪ್ಪು ಅವರನ್ನು ಕಳೆದುಕೊಂಡಾಗ ಅವರನ್ನು ನೋಡಲು ಬಂದಂತಹ 25 ಲಕ್ಷಕ್ಕೂ ಅಧಿಕ ಜನರಲ್ಲಿ ಕೂಡ ಕನ್ನಡಿಗರಲ್ಲಿ ಎಷ್ಟು ಪ್ರೀತಿಯನ್ನು ಸಂಪಾದಿಸಿದ್ದಾರೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವು. ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳೇ ನಮ್ಮನೆ ದೇವ್ರು ಎಂಬುದಾಗಿ ಅಣ್ಣಾವ್ರು ಮೊದಲಬಾರಿ ಕರೆದಿದ್ದರು. ಅಭಿಮಾನಿಗಳಿಗೆ ಗೌರವ ಕೊಡುವ ರೀತಿಯನ್ನು ಪ್ರತಿಯೊಬ್ಬ ನಟರು ಕೂಡ ದೊಡ್ಡ ಮನೆಯಿಂದ ಕಲಿಯಬೇಕಾಗಿತ್ತು.

ಅಣ್ಣಾವ್ರ ಮಕ್ಕಳಾಗಿರುವ ಪುನೀತ್ ಶಿವಣ್ಣ ರಾಘಣ್ಣ ಕೂಡ ಅಭಿಮಾನಿಗಳನ್ನು ದೇವರು ಎಂಬುದಾಗಿ ಗೌರವ ಕೊಡುತ್ತ ಬಂದಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರ ವಿಚಾರಕ್ಕೆ ಬಂದರೆ ಅಭಿಮಾನಿಗಳು ಏನೇ ನೀಡಿದರು ಯಾವಾಗಲೇ ಫೋಟೋ ಕೇಳಿದರು ನಗುನಗುತ್ತಲೇ ಪ್ರೀತಿಯಿಂದ ಸ್ವೀಕರಿಸುತ್ತಿದ್ದರು. ಮನೆಯವರಿಗೂ ಕೂಡ ಅಭಿಮಾನಿಗಳಿಗೆ ಮನಸ್ಸಿಗೆ ಬೇಸರವಾಗದಂತೆ ನಡೆದುಕೊಳ್ಳುವಂತೆ ಹೇಳುತ್ತಿದ್ದರು. ಇನ್ನು ಈಗ ಪುನೀತ್ ರವರು ಇಲ್ಲದ ಮನೆಯನ್ನು ಸಂಭಾಳಿಸುತ್ತಿರುವುದು ಅವರ ಪತ್ನಿ ಅಶ್ವಿನ್. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯಾದ್ಯಂತ ಪುನೀತ್ ರವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ.

ಇದೇ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆದಿರುವ ಕಾರ್ಯಕ್ರಮಕ್ಕೆ ಪುನೀತ್ ರವರ ಕುಟುಂಬದಿಂದ ಅವರ ಅಕ್ಕ ಹಾಗೂ ಭಾವ ಹೋಗಿ ಭಾಗವಹಿಸಿದ್ದಾರೆ. ಮತ್ತು ದೇವಸ್ಥಾನದಲ್ಲಿ ಅಶ್ವಿನಿ ಅವರಿಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿಕೊಂಡು ಬಂದಿದ್ದಾರೆ. ಇದನ್ನು ಕೇಳಿರುವ ಅಶ್ವಿನಿ ಅವರು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ. ಇನ್ನು ಅಶ್ವಿನಿ ಅವರು ಈಗಾಗಲೇ ಪಿ ಆರ್ ಕೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಈ ಸಂಸ್ಥೆಯಲ್ಲಿ ವಿವಿಧ ವಿಭಾಗದಲ್ಲಿ 50ಕ್ಕಿಂತ ಅಧಿಕ ಜನರು ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಪುನೀತ್ ರವರ ಕನಸಾಗಿರುವ ಗಂಧದ ಗುಡಿಯ ಕೆಲಸವನ್ನು ಕೈಗೆತ್ತಿಕೊಂಡಿದ್ದು ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಈ ಡಾಕ್ಯುಮೆಂಟರಿ ಬಿಡುಗಡೆಯಾಗಲಿದೆ.