ಬ್ಯಾಕ್ ಟು ಬ್ಯಾಕ್ ಗುಡ್ ನ್ಯೂಸ್ ಹಂಚಿಕೊಂಡ ನಿಖಿಲ್ ಕುಮಾರ್ ದಂಪತಿಗಳು ಹಾರೈಸಿದ ಅಭಿಮಾನಿಗಳು. ಏನು ಗೊತ್ತೇ??

94

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಯುವರಾಜ ನಿಖಿಲ್ ಕುಮಾರ್ ರವರು ರೇವತಿ ಅವರನ್ನು ಕಾಲದಲ್ಲಿ ಮದುವೆಯಾದ ನಂತರ ಬಿಡದಿಯ ರಾಮನಗರದ ಫಾರ್ಮ್ ಹೌಸ್ ಗೆ ಹೋಗಿ ಅವರೊಂದಿಗೆ ಜೀವನ ನಡೆಸುತ್ತಿದ್ದರು. ಇನ್ನು ಇದೇ ಸಂದರ್ಭದಲ್ಲಿ ಗಂಡ-ಹೆಂಡತಿ ಇಬ್ಬರೂ ಕೂಡ ಯಾವುದೇ ಕೆಲಸಗಳು ಇಲ್ಲದ ಕಾರಣದಿಂದಾಗಿ ಕೃಷಿ ಕಾರ್ಯವನ್ನು ಒಟ್ಟಾಗಿ ಮಾಡುತ್ತಿದ್ದರು. ರೇವತಿ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಆದಕಾರಣ ಬಿಡದಿಯಲ್ಲಿ ಪರಿಸರಸ್ನೇಹಿ ಮನೆಯೊಂದನ್ನು ಕೂಡ ಕಟ್ಟಲು ಆರಂಭಿಸಿದರು.

ಕೆಲವು ತಿಂಗಳ ಹಿಂದಷ್ಟೇ ರೇವತಿ ಅವರ ಜನ್ಮದಿನದ ಸಂದರ್ಭದಲ್ಲಿ ಮಗುವಿಗೆ ತಂದೆ ಆಗುತ್ತೇನೆಂದು ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು. ನಂತರ ಮಡದಿಯ ಆಸೆಯಂತೆ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಕೂಡ ನೆರವೇರಿಸಿದ್ದರು. ನಂತರ ಮನೆಗೆ ನಿಜವಾದ ಯುವರಾಜನ ಆಗಮನ ಕೂಡ ಆಯ್ತು. ನಿಖಿಲ್ ಕುಮಾರ್ ರವರು ತಂದೆಯಾದಂತಹ ಸಂತೋಷ ಇನ್ನಿಲ್ಲದಂತೆ ಅನುಭವಿಸಿದ್ದರು. ಇನ್ನು ಮದುವೆಯಾದ ಮೇಲೆ ಆಗಾಗ ತಮ್ಮ ಮಡದಿ ರೇವತಿ ಅವರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಕವಿ ಕೂಡ ಆಗಿದ್ದರು. ಇನ್ನು ಇತ್ತೀಚಿಗೆ ತಮ್ಮ ಮಡದಿಯೊಂದಿಗೆ ನೃತ್ಯ ಮಾಡಿ ಸಂತೋಷದಿಂದ ಗುಡ್ ನ್ಯೂಸ್ ಒಂದನ್ನು ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳು ಹಾರೈಸಿದ್ದಾರೆ.

ಹೌದು ನಿಖಿಲ್ ಕುಮಾರ್ ತಮ್ಮ ಪತ್ನಿ ರೇವತಿ ಅವರೊಂದಿಗೆ ನೃತ್ಯ ಮಾಡಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ ಇದೇ ಡಿಸೆಂಬರ್ 24ರಂದು ಅವರ ನಟನೆಯ ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ತಪ್ಪದೆ ವೀಕ್ಷಿಸಿ ಎಂಬುದಾಗಿ ಪ್ರೇಕ್ಷಕರಲ್ಲಿ ಕೇಳಿಕೊಂಡಿದ್ದಾರೆ. ಇನ್ನು ಅಭಿಮಾನಿಗಳೆಲ್ಲರೂ ಹೊಸ ಚಿತ್ರದ ಬಿಡುಗಡೆಗೆ ಶುಭಹಾರೈಸಿದ್ದಾರೆ. ಇನ್ನು ಜೀವನದಲ್ಲಿ ಸಿನಿಮಾ ನನ್ನ ಮುಖ್ಯ ಐಡೆಂಟಿಟಿ ಎಂಬುದಾಗಿ ನಿಖಿಲ್ ಕುಮಾರ್ ರವರು ಮೊದಲಿಂದಲೂ ಹೇಳಿಕೊಂಡು ಬರುತ್ತಿದ್ದರು. ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ರೈಡರ್ ಚಿತ್ರದ ಯಶಸ್ಸಿಗಾಗಿ ನಿಖಿಲ್ ಕುಮಾರ್ ಅವರು ಎದುರುನೋಡುತ್ತಿದ್ದಾರೆ.