ಕೇವಲ ನಾಲ್ಕು ದಿನದ ಹನಿಮೂನ್ ಗಾಗಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಖರ್ಚು ಮಾಡಿದ ಹಣವೆಷ್ಟು ಗೊತ್ತೆ?? ಯಪ್ಪಾ ಇಷ್ಟೊಂದಾ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಈಗಾಗಲೇ ಮದುವೆ ಸೀಸನ್ ಪ್ರಾರಂಭವಾಗಿದ್ದು ಇದಕ್ಕೆ ಈಗ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಕೂಡ ಸೇರಿದ್ದಾರೆ. ಯಾವುದೇ ಸುಳಿವನ್ನೂ ನೀಡದೆ ರಾಜಸ್ಥಾನದ ಕೋಟೆಯಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಡಿಸೆಂಬರ್ 9ರಂದು ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರು ಅದ್ದೂರಿಯಾಗಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಮದುವೆ ಆಗುವವರೆಗೂ ಕೂಡ ಎಲ್ಲಿಯೂ ಇವರಿಬ್ಬರು ಒಂದಾಗಿ ಕಾಣಿಸಿಕೊಂಡಿರಲಿಲ್ಲ.
ಹೀಗಾಗಿ ಮದುವೆ ಆಗುವ ತನಕವೂ ಕೂಡ ಯಾರೂ ಕೂಡ ಇವರಿಬ್ಬರ ಮದುವೆ ಆಗಿದೆ ಅಥವಾ ಆಗುತ್ತದೆ ಎಂಬುದಾಗಿ ನಂಬಿರಲಿಲ್ಲ. ಇನ್ನು ಚಿತ್ರೀಕರಣದಿಂದ ರಜಾ ಪಡೆದುಕೊಂಡು ಮದುವೆಗಾಗಿ ಸಮಯವನ್ನು ಕಳೆದಿದ್ದಾರೆ. ಇನ್ನು ಮದುವೆಯಾದ ತಕ್ಷಣವೇ ಇವರಿಬ್ಬರು ಮಾಲ್ಡೀವ್ಸ್ ನಲ್ಲಿ ಹನಿಮೂನ್ ಕೂಡ ಆಚರಿಸಿದ್ದಾರೆ. ಸಾಮಾನ್ಯರ ಹನಿಮೂನ್ ಎಂದರೆ ಸಾಕಷ್ಟು ಖರ್ಚಾಗುತ್ತದೆ ಇನ್ನೂ ಇವರಿಬ್ಬರು ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಜೋಡಿಗಳು ಇವರ ಖರ್ಚಿನ ಬಗ್ಗೆ ಕೇಳ್ಬೇಕಾ. ಹಾಗಿದ್ದರೆ ಇವರ ನಾಲ್ಕು ದಿನದ ಹನಿಮೂನ್ ಗೆ ಎಷ್ಟು ಖರ್ಚಾಗಿದೆ ಎಂಬುದರ ವಿವರ ನಿಮಗೆ ನೀಡಲಿದ್ದೇವೆ.

ಹೌದು ಗೆಳೆಯರೇ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮಾಲ್ಡೀವ್ಸ್ ನ ದ್ವೀಪದಲ್ಲಿ ತಮ್ಮ ನಾಲ್ಕು ದಿನದ ಹನಿಮೂನ್ ಅನ್ನು ಕಳೆದಿದ್ದಾರೆ. ಸಾಕಷ್ಟು ರೋಮ್ಯಾಂಟಿಕ್ ಹನಿಮೂನ್ ಅನ್ನು ಆಚರಿಸಿಕೊಂಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಮಾಲ್ಡೀವ್ಸ್ ನಲ್ಲಿ ನೀರಿನ ಮೇಲಿರುವ ದ್ವೀಪದ ಮಾದರಿಯ ಮನೆಗಳಲ್ಲಿ ಈ ಹಿಂದೆ ಕಾಜಲ್ ಅಗರವಾಲ್ ಅವರು ತಮ್ಮ ಗಂಡನೊಂದಿಗೆ ಹನಿಮೂನ್ ಆಚರಿಸಿಕೊಂಡಿದ್ದರು. ಇನ್ನು ಅದೇ ರೂಮ್ ಕೆಳಗಡೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಕೂಡ ನಾಲ್ಕು ದಿನಗಳ ಕಾಲ ಜೊತೆಯಾಗಿ ಸಮಯವನ್ನು ಕಳೆದಿದ್ದರು. ಇನ್ನು ಕೇವಲ ನಾಲ್ಕು ದಿನದ ಹನಿಮೂನ್ ಗಾಗಿ ಇಬ್ಬರು ನವದಂಪತಿಗಳು ಖರ್ಚು ಮಾಡಿದ್ದು ಬರೋಬ್ಬರಿ 6 ಕೋಟಿ ರೂಪಾಯಿ. ಕೇವಲ ನಾಲ್ಕು ದಿನಗಳಿಗಾಗಿ ಆರು ಕೋಟಿ ರೂಪಾಯಿ ಖರ್ಚು ಮಾಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.