ನಗದು ಹಣ ಹಾಗೂ ಗೃಹಪಯೋಗಿ ವಸ್ತುಗಳನ್ನು ನೀಡಲಾಗುತ್ತದೆ ಎಂದು ತಿಳಿದ ತಕ್ಷಣ ಈ ಅಣ್ಣ ತಂಗಿ ಏನು ಮಾಡಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸಹೋದರ ಹಾಗೂ ಸಹೋದರಿಯರ ಸಂಬಂಧ ಎನ್ನುವುದು ಸಾಕಷ್ಟು ಪವಿತ್ರವಾದಂತಹ ಸಂಬಂಧ ಆದರೆ ಉತ್ತರಪ್ರದೇಶದಲ್ಲಿ ನಡೆದಿರುವ ಘಟನೆಯನ್ನು ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಮೂಗಿನಮೇಲೆ ಬೆರಳಿಡುವುದು ಗ್ಯಾರಂಟಿ. ಹೌದು ಗೆಳೆಯರೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಗಳ ಯೋಜನೆ ಅಡಿಯಲ್ಲಿ ಸಾಮೂಹಿಕ ವಿವಾಹವನ್ನು ಉಚಿತವಾಗಿ ಮಾಡಲಾಗುತ್ತದೆ. ಹಿಂದುಳಿದ ಜನರಿಗಾಗಿ ಇಂತಹ ಉಚಿತ ಮದುವೆಗಳನ್ನು ಮಾಡಿ ಅವರಿಗೆ ಸಾಕಷ್ಟು ಹಣ ಹಾಗೂ ಉಡುಗೊರೆಗಳನ್ನು ನೀಡಲಾಗುತ್ತದೆ.
ಇದು ಪ್ರತಿವರ್ಷ ಕೂಡ ಉತ್ತರಪ್ರದೇಶದಲ್ಲಿ ನಡೆಯುವಂತಹ ಸರ್ಕಾರಿ ಪ್ರೋತ್ಸಾಹಿತ ಕಾರ್ಯಕ್ರಮವಾಗಿದೆ. ಇಂತಹ ಅರ್ಥಗರ್ಭಿತವಾದ ಅಂತಹ ಕಾರ್ಯಕ್ರಮದಲ್ಲಿ ಇಬ್ಬರು ಅಣ್ಣ ತಂಗಿ ಮಾಡಿರುವ ಕೆಲಸ ನೋಡಿ ಈಗ ಎಲ್ಲರೂ ಕೂಡ ಸಿಟ್ಟಿಗೆ ಒಳಗಾಗಿದ್ದಾರೆ. ಹೌದು ಗೆಳೆಯರೇ ಅಣ್ಣ-ತಂಗಿ ಸಂಬಂಧ ಎನ್ನುವುದು ಸಾಕಷ್ಟು ಪವಿತ್ರವಾಗಿದೆ ಎಂಬುದು ಕೇವಲ ಈಗ ಮಾತಿನಲ್ಲಿ ಮಾತ್ರ ಹಾಡುವಂತೆ ಆಗಿದೆ. ಉತ್ತರ ಪ್ರದೇಶದ ಫಿರೋಜಾಬಾದ್ ನ ತುಂಡ್ಲಾದಲ್ಲಿ ನಡೆದಿರುವ ಈ ಸಾಮೂಹಿಕ ವಿವಾಹದಲ್ಲಿ ಅಣ್ಣ ತಂಗಿ ಇಬ್ಬರು ಕೂಡ ಮದುವೆಯಾಗಿದ್ದಾರೆ.

ಅಲ್ಲಿ ನೀಡುವ ಗೃಹಪಯೋಗಿ ಉಡುಗೊರೆಗಳಿಗೆ ಮತ್ತು 20000 ಹಣಕ್ಕಾಗಿ ಅಣ್ಣ ತಂಗಿ ಇಬ್ಬರೂ ಕೂಡ ಗುಂಪಿನೊಳಗೆ ಗೋವಿಂದ ಎನ್ನುವಂತೆ ಮದುವೆಯಾಗಿದ್ದಾರೆ. ಇದು ತಿಳಿದು ಬಂದು ಈಗಾಗಲೇ ಅಧಿಕಾರಿಗಳು ಅವರ ಮದುವೆಗೆ ನೀಡಿರುವ ಹಣವನ್ನು ಹಾಗೂ ಉಡುಗೊರೆಗಳನ್ನು ವಾಪಸ್ ಪಡೆದುಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಪ್ರತಿ ಜೋಡಿಯ ಮದುವೆಗಾಗಿ ಕೂಡ ಮೂವತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಇಂತಹ ಒಳ್ಳೆಯ ಯೋಜನೆಗಳನ್ನು ಜನರ ದುರುಪಯೋಗ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ. ಈ ಮದುವೆಯ ವಿಡಿಯೋ ಹಾಗೂ ಫೋಟೋಗಳು ಬಿಡುಗಡೆಯಾದ ನಂತರ ಸ್ಥಳೀಯರು ಗುರುತಿಸಿ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಇವರಿಬ್ಬರು ಅಣ್ಣ-ತಂಗಿಯರು ಎಂಬುದಾಗಿ ಮಾಹಿತಿ ನೀಡಿ ನಿಜಾಂಶವನ್ನು ಹೊರಬರುವಂತೆ ಮಾಡಿದ್ದಾರೆ.