ಹನಿಮೂನ್ ನಿಂದ ಬಂದ ತಕ್ಷಣ ಕತ್ರಿನಾ ವಿಕ್ಕಿಯನ್ನು ಸುತ್ತುವರೆದ ಫ್ಯಾನ್ಸ್ ಕೇಳಿದ ಪ್ರಶ್ನೆಯೇನು ಗೊತ್ತೆ?? ಪಾಪ ಹೀಗಾ ಕೇಳೋದು??

472

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಇದೇ ಡಿಸೆಂಬರ್ 9ರಂದು ನಡೆದಂತಹ ಮದುವೆ ಸಾಕಷ್ಟು ಅಚ್ಚರಿಗಳಿಗೆ ಕಾರಣವಾಯಿತು ಎಂದರೆ ನಿಜವಾಗಿಯೂ ತಪ್ಪಿಲ್ಲ. ಯಾಕೆಂದರೆ ಯಾರು ಕೂಡ ಈ ಮದುವೆ ನಡೆಯಬಹುದು ಎಂಬುದಾಗಿ ದೃಢವಾಗಿ ಇರಲಿಲ್ಲ. ನಾವು ಮಾತನಾಡುತ್ತಿರುವುದು ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆ ಕುರಿತಂತೆ. ಹೌದು ಗೆಳೆಯರೇ ಇವರಿಬ್ಬರ ಮದುವೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಗಾಳಿಸುದ್ದಿಗಳು ಓಡಾಡಿಕೊಂಡಿದ್ದವು. ಆದರೆ ಎಲ್ಲಿಯೂ ಕೂಡ ಇವರಿಬ್ಬರು ಮದುವೆ ಕುರಿತಂತೆ ಒಂದು ಚಿಕ್ಕ ಮಾತನ್ನು ಕೂಡ ಆಡಿರಲಿಲ್ಲ.

ಅನಿರೀಕ್ಷಿತವಾಗಿ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಇವರಿಬ್ಬರು ಮದುವೆಯಾಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಮೇಲಷ್ಟೇ ಇವರಿಬ್ಬರಿಗೆ ಮದುವೆಯಾಗುತ್ತಿದೆ ಎಂಬುದಾಗಿ ತಿಳಿದಿದ್ದು. ಯಾವ ಕಾರಣಕ್ಕಾಗಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಸೀಕ್ರೆಟ್ ಆಗಿ ಯಾಕೆ ಮದುವೆಯಾದರು ಎಂಬುದು ಇಂದಿಗೂ ಕೂಡ ತಿಳಿಯುತ್ತಿಲ್ಲ. ಡಿಸೆಂಬರ್ 9ರಂದು ಮದುವೆ ಮುಗಿಸಿಕೊಂಡು ಮಾಲ್ಡೀವ್ಸ್ ಗೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಇಬ್ಬರು ಕೂಡ ಹನಿಮೂನ್ ಆಚರಿಸಲು ಹಾರಿದ್ದಾರೆ.

ಹನಿಮೂನ್ ಮುಗಿಸಿಕೊಂಡು ಈಗಾಗಲೇ ಮುಂಬೈ ಏರ್ಪೋರ್ಟ್ಗೆ ಕೂಡ ಬಂದಿದ್ದಾಗಿದೆ. ಇನ್ನು ಹನಿಮೂನ್ ನಿಂದ ಬಂದ ತಕ್ಷಣ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಅವರನ್ನು ಸುತ್ತುವರಿದ ಅಭಿಮಾನಿಗಳು ಕೇಳಿದ ಪ್ರಶ್ನೆಯನ್ನು ಕೇಳಿ ನೀವು ಕೂಡ ಹೈರಾಣಾಗುವುದು ಗ್ಯಾರಂಟಿ. ಹನಿಮೂನ್ ನಂತರ ಮೊದಲ ಬಾರಿಗೆ ಸಿಕ್ಕಿರುವ ನವದಂಪತಿಗಳು ಆಗಿರುವ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಜೋಡಿಗೆ ಅಭಿಮಾನಿಗಳು ವಿಕ್ಕಿ ಕೌಶಲ್ ರವರ ಕುರಿ ಚಿತ್ರದ ಡೈಲಾಗ್ ಆಗಿರುವ ಹೌ ಇಸ್ ದ ಜೋಷ್ ಎಂಬುದಾಗಿ ಕೇಳಿದ್ದಾರೆ. ಒಂದು ವೇಳೆ ನೀವು ಈ ಸಂದರ್ಭದಲ್ಲಿ ಇದ್ದಿದ್ದರೆ ಏನೆಂದು ಕೇಳುತ್ತಿದ್ದೀರಿ ಎಂಬುದನ್ನು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.