ಸುದೀಪ್ ಎಂದರೆ ತಮಾಷೆಯಲ್ಲ, ಸ್ನೇಹ ಎಂದು ಕೂಡ ನೋಡುವಿಲ್ಲ, ಆದರೆ ಆ ಒಂದು ಪ್ರಶ್ನೆ ಮಾತ್ರ ಕೇಳುವುದಿಲ್ಲ ಎಂದ ರಾಜಮೌಳಿ ಏನಂತೆ ಗೊತ್ತೆ??

619

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ರಾಜಮೌಳಿ ಅವರು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಅವರು ನಿರ್ದೇಶಿಸಿರುವ ಬಾಹುಬಲಿ1 ಹಾಗೂ ಎರಡು ಮತ್ತು ಈಗ ಚಿತ್ರಗಳು ಉತ್ತಮ ನಿದರ್ಶನ ಎಂದರು ಕೂಡ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ಆರ್ ಆರ್ ಆರ್ ಚಿತ್ರದ ಪ್ರಮೋಷನ್ ಗಾಗಿ ಜೂನಿಯರ್ ಎನ್ಟಿಆರ್ ಆಲಿಯಾ ಭಟ್ ಹಾಗೂ ರಾಮಚರಣ್ ರವರೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು ರಾಜಮೌಳಿಯವರು.

ಇದೇ ಜನವರಿ 7ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿರುವ ಆರ್ ಆರ್ ಆರ್ ಚಿತ್ರದ ಕನ್ನಡ ಅವತರಣಿಕೆಯ ಪ್ರಮೋಷನ್ ಅನ್ನು ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡುವ ಮೂಲಕ ನಡೆಸಲಾಯಿತು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರ ಗುಣಗಾನವನ್ನು ಮಾಡಿದ್ದಾರೆ ರಾಜಮೌಳಿಯವರು. ಈ ಹಿಂದೆಯಷ್ಟೇ ಸುದೀಪ್ ಇಲ್ಲದಿದ್ದರೆ ಈಗ ಚಿತ್ರ ನಡೆಯುತ್ತಲೇ ಇರುತ್ತಿರಲಿಲ್ಲ ಅವರ ನಟನೆ ಎನ್ನುವುದು ಅಸಾಧಾರಣವಾದುದು ಎಂಬುದಾಗಿ ಗುಣಗಾನವನ್ನು ಮಾಡಿದರು. ಇನ್ನು ಮೊನ್ನೆಯಷ್ಟೇ ಬೆಂಗಳೂರಿಗೆ ಬಂದಾಗ ಕಿಚ್ಚ ಸುದೀಪ್ ರವರು ಬಾಹುಬಲಿ ಚಿತ್ರವಾಗಲಿ ಯಾವುದೇ ಚಿತ್ರವಾಗಲಿ ಹಣಕ್ಕಾಗಿ ಮಾಡುವುದಿಲ್ಲ ಪಾತ್ರದ ಪ್ರಾಮುಖ್ಯತೆಯನ್ನು ನೋಡಿ ಮಾಡುತ್ತಾರೆ ಎಂಬುದಾಗಿ ಹೇಳುತ್ತಾರೆ.

ಹಣದ ವಿಷಯದಲ್ಲಿ ಅವರು ಏನನ್ನು ಹೇಳುವುದೇ ಇಲ್ಲ ಅವರಿಗೆ ಪಾತ್ರದ ಪ್ರಾಮುಖ್ಯತೆ ಮುಖ್ಯ ಎಂಬುದಾಗಿ ಸುದೀಪ್ ರವರಿಗೆ ಹೊಗಳಿದ್ದಾರೆ ನಿರ್ದೇಶಕ ರಾಜಮೌಳಿ ಅವರು. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ನೂರಾರು ಕೋಟಿ ಬಜೆಟ್ ನಲ್ಲಿ ಮೂಡಿಬಂದಿದ್ದು ಬಿಡುಗಡೆಯಾಗಲು ದಿನಗಣನೆ ಬಾಕಿ ಉಳಿದಿದೆ. ಇನ್ನು ಬಾಹುಬಲಿ ಸಂದರ್ಭದಲ್ಲಿ ಕನ್ನಡದಲ್ಲಿ ಬಿಡುಗಡೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಕನ್ನಡಿಗರು ಬೇಸರ ಮಾಡಿಕೊಂಡಿದ್ದರು. ಅದಕ್ಕಾಗಿ ಈ ಬಾರಿ ಮುತುವರ್ಜಿ ವಹಿಸಿಕೊಂಡು ಕನ್ನಡದಲ್ಲಿ ಆರ್ ಆರ್ ಆರ್ ಚಿತ್ರವನ್ನು ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ ಎಂಬುದಾಗಿ ಕೂಡ ಹೇಳಿದ್ದಾರೆ.