ಅಭಿಮಾನಿಗಳಿಗೆ ನಿರಾಸೆ, ಕೇವಲ ನಾಲ್ಕೇ ದಿನಕ್ಕೆ ಹನಿಮೂನ್ ಮುಗಿಸಿ ವಾಪಸ್ ಬಂದ ಕತ್ರಿನಾ ಕೈಫ್ ಹಾಗೂ ವಿಕ್ಕಿ, ಕಾರಣವೇನು ಗೊತ್ತೇ??

909

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದ ಲವ್ ಬರ್ಡ್ಸ್ ಗಳಾಗಿರುವ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಇವರು ಮದುವೆಯಾಗುತ್ತಾರೆ ಎಂಬ ಒಂದು ಚಿಕ್ಕ ಸುಳಿವನ್ನು ಕೂಡ ಇವರಿಬ್ಬರು ನೀಡಿರಲಿಲ್ಲ. ಇನ್ನು ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಇಷ್ಟೊಂದು ಸೀಕ್ರೆಟಾಗಿ ಮದುವೆಯಾಗಿರುವುದು ಯಾಕೆ ಎಂಬ ಉತ್ತರವನ್ನು ಕೂಡ ಇಂದಿಗೂ ನೀಡಿಲ್ಲ.

ಇನ್ನು ಕೆಲವೊಂದು ಮೂಲಗಳ ಪ್ರಕಾರ ಇವರ ಮದುವೆ ವಿಡಿಯೋವನ್ನು ಜನಪ್ರಿಯ ಓಟಿಟಿ ಮಾಧ್ಯಮಕ್ಕೆ 100 ಕೋಟಿ ಮೊತ್ತಕ್ಕೆ ಮಾರಿದ್ದಾರೆ ಎಂಬ ಮಾತುಗಳು ಕೂಡಾ ಗುಸುಗುಸು ಕೇಳಿ ಬರುತ್ತಿವೆ. ಇನ್ನು ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ನಡುವೆ ಪ್ರೇಮ ಸಂಬಂಧ ಯಾವಾಗಿಂದ ಪ್ರಾರಂಭವಾಯಿತು ಎಂಬ ಕುರಿತಂತೆ ಕೂಡ ಇವರಿಬ್ಬರು ಎಲ್ಲರೂ ಕೂಡ ಹೇಳಿಕೊಂಡಿಲ್ಲ‌. ಇದೇ ಮಾದರಿಯ ಹಲವಾರು ಪ್ರಶ್ನೆಗಳಿಗೆ ಇವರಿಬ್ಬರಿಂದಲೂ ಕೂಡ ಉತ್ತರಗಳು ಇನ್ನಷ್ಟೇ ಸಿಗಬೇಕಾಗಿದೆ.

ಹೀಗಾಗಿ ಮಾಧ್ಯಮದವರು ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ರವರು ಸಾರ್ವಜನಿಕ ಸ್ಥಳಗಳಲ್ಲಿ ಸಿಗುವುದನ್ನೇ ಕಾಯುತ್ತಿದ್ದಾರೆ. ಇನ್ನು ಈಗ ಡಿಸೆಂಬರ್ 9ರಂದು ಮದುವೆಯಾದ ನಂತರ ನವಜೋಡಿಗಳು ಇಬ್ಬರೂ ಕೂಡ ಹನಿಮೂನ್ ಆಚರಿಸಲು ಮಾಲ್ಡೀವ್ಸ್ ಗೆ ತೆರಳಿದ್ದರು. ಆದರೆ ಹನಿಮೂನ್ ಗೆ ತೆರಳಿರುವ ನಾಲ್ಕು ದಿನಗಳಲ್ಲೇ ಮತ್ತೆ ಈಗ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ಕೇ ದಿನದಲ್ಲಿ ಹನಿಮೂನ್ ಮುಗಿಸಿ ಬರಲು ಕಾರಣವೇನು ಎಂಬುದರ ಕುರಿತಂತೆ ಈಗ ಎಲ್ಲರಿಗೂ ಕುತೂಹಲ ಏರ್ಪಟ್ಟಿದೆ.

ಹೌದು ಗೆಳೆಯರೇ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರು ಹಲವಾರು ಚಿತ್ರದ ಚಿತ್ರೀಕರಣ ಗಳಲ್ಲಿ ಬ್ಯುಸಿಯಾಗಿದ್ದರು. ಇದರ ನಡುವೆ ರಜಾ ತೆಗೆದುಕೊಂಡು ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡಿದ್ದರು. ಈಗ ಅದೇ ಕಾರಣಕ್ಕಾಗಿ ಹನಿಮೂನ್ ಅನ್ನು ಕೇವಲ ನಾಲ್ಕೇ ದಿನಗಳಲ್ಲಿ ಮುಗಿಸಿ ಮತ್ತೆ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ. ಕತ್ರಿನಾ ಕೈಫ್ ರವರಿಗೆ ಜೀ ಲೆ ಜರ ಹಾಗೂ ಫೋನ್ ಬೂತ್ ಮುಂತಾದ ಸಿನಿಮಾಗಳ ಚಿತ್ರೀಕರಣ ಕಾರ್ಯಕ್ರಮ ಬಾಕಿ ಉಳಿದಿದೆ ಹಾಗೂ ವಿಕ್ಕಿ ಕೌಶಲ್ ರವರಿಗೆ ಸ್ಯಾಮ್ ಬಹದ್ದೂರ್ ಹಾಗೂ ಮುಂತಾದ ಸಿನಿಮಾಗಳ ಚಿತ್ರೀಕರಣ ಬಾಕಿ ಉಳಿದಿದ್ದು ಇಬ್ಬರೂ ಕೂಡ ಈಗ ಚಿತ್ರೀಕರಣವನ್ನು ಮುಗಿಸಲು ಕೆಲಸಕ್ಕೆ ಹಾಜರಾಗಿದ್ದಾರೆ. ಇವರಿಬ್ಬರ ಸಿನಿಮಾ ಪ್ರೀತಿಗೆ ನಮ್ಮ ಸಲಾಂ.