ಮತ್ತೊಂದು ಅಚ್ಚೆ ಹಾಕಿಸಿಕೊಂಡ ಹರ್ಭಜನ್, ಈ ಬಾರಿ ಕನ್ನಡಿಗನ ಟ್ಯಾಟೂ ಹಾಕಿಸಿಕೊಂಡು ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಕ್ರಿಕೆಟ್ ತಂಡದ ನೆನಪಾದಾಗಲೆಲ್ಲ ನಾವು ಇಂದು ಹೇಳಹೊರಟಿರುವ ಕ್ರಿಕೆಟಿಗನ ನೆನಪು ಆಗಿಯೇ ಆಗುತ್ತದೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಟರ್ಬನೇಟರ್ ಹರ್ಭಜನ್ ಸಿಂಗ್ ರವರ ಕುರಿತಂತೆ. ಹರ್ಭಜನ್ ಸಿಂಗ್ ರವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಹಲವಾರು ವರ್ಷಗಳಿಂದ ಸ್ಪಿನ್ನರ್ ಹಾಗೂ ಕೆಳವರ್ಗದ ಬ್ಯಾಟ್ಸ್ಮನ್ ಆಗಿ ಕೂಡ ಮಿಂಚಿದ್ದಾರೆ. ಇನ್ನು ಈಗಾಗಲೇ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಹರ್ಭಜನ್ ಸಿಂಗ್ ರವರು ನಿವೃತ್ತಿಯನ್ನು ಘೋಷಿಸಿದ್ದಾರೆ.
ಇನ್ನು ಐಪಿಎಲ್ ನಲ್ಲಿ ಕೂಡ ಕೊಲ್ಕತ್ತಾ ತಂಡದ ಪರವಾಗಿ ಹರ್ಭಜನ್ ಸಿಂಗ್ ರವರು ಕಾಣಿಸಿಕೊಳ್ಳುತ್ತಿದ್ದರು. ಅದೆಷ್ಟೋ ಪಂದ್ಯಗಳಲ್ಲಿ ಭಾರತದ ಪರವಾಗಿ ಆಡಿ ತಂಡವನ್ನು ಸೋಲಿನ ದವಡೆಯಿಂದ ಬಚಾವ್ ಮಾಡಿದ್ದಾರೆ ಹರ್ಭಜನ್ ಸಿಂಗ್. ಅದರಲ್ಲೂ ಅವರ ದೂಸ್ರಾ ಎಲ್ಲರ ಅಚ್ಚುಮೆಚ್ಚಿನ ಮಿಸ್ಟರಿ ಸ್ಪಿನ್ ಬೌಲಿಂಗ್ ಆಗಿದೆ. ಇನ್ನು ಇತ್ತೀಚಿಗಷ್ಟೇ ಹರ್ಭಜನ್ ಸಿಂಗ್ ರವರು ತಮ್ಮ ಎದೆಯಮೇಲೆ ಕನ್ನಡಿಗ ಸೆಲೆಬ್ರಿಟಿ ಒಬ್ಬರ ಟ್ಯಾಟೂ ಹಾಕಿಸಿಕೊಂಡು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಹಾಗಿದ್ದರೆ ಹರ್ಭಜನ್ ಸಿಂಗ್ ರವರು ತಮ್ಮ ಎದೆಯ ಮೇಲೆ ಯಾರ ಟ್ಯಾಟೂ ಹಾಕಿಸಿಕೊಂಡಿದ್ದು ಎನ್ನುವುದನ್ನು ನಿಮಗೆ ಹೇಳುತ್ತೇವೆ ಬನ್ನಿ.

ಹೌದು ಇತ್ತೀಚಿಗಷ್ಟೇ ತೆಲುಗು ಚಿತ್ರ ರಂಗದ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ಅವರು ತಮ್ಮ 71ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ತಮ್ಮ ಎದೆಯ ಮೇಲಿರುವ ರಜನಿಕಾಂತ್ ಅವರ ಟ್ಯಾಟೂ ವನ್ನು ಪ್ರದರ್ಶಿಸಿ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಇನ್ನು ಈ ಟ್ಯಾಟುವನ್ನು ಹರ್ಭಜನ್ ಸಿಂಗ್ ರವರು ತಮಿಳು ಚಿತ್ರವೊಂದರ ನಾಯಕನಾಗಿ ನಟಿಸಿದಾಗ ಹಾಕಿಸಿಕೊಂಡಿದ್ದರು ಎನ್ನುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.