ಅಪ್ಪು ವಿಚಾರದಲ್ಲಿ ರಾಜಮೌಳಿಯಂತೆ ಮಾಡದ ಅಲ್ಲು ಅರ್ಜುನ್, ರಾಜಮೌಳಿ ಮಾಡಿದ ತಪ್ಪಿನಿಂದ ಎಚ್ಚರಗೊಂಡ ಅಲ್ಲು ಅರ್ಜುನ್. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಈಗಾಗಲೇ ಹಲವಾರು ಸಮಯಗಳು ಕಳೆದುಹೋಗಿದ್ದು ಅವರ ಅಂತಿಮ ದರ್ಶನವನ್ನು ಪಡೆಯಲು ಹಲವಾರು ಸೆಲೆಬ್ರಿಟಿಗಳು ಆಗಮಿಸಿದ್ದರು. ಇನ್ನು ಅವರ ಸಮಾಧಿಗೆ ದರ್ಶನ ಮಾಡಲು ಕೂಡ ಕೇವಲ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮಾತ್ರವಲ್ಲದೆ ಪರಭಾಷೆಯ ಸೆಲೆಬ್ರಿಟಿಗಳು ಕೂಡ ಸಾಲುಸಾಲಾಗಿ ಬಂದು ಹೋಗಿದ್ದರು. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ರವರು ಕುರಿತಂತೆ.
ಅಲ್ಲು ಅರ್ಜುನ್ ರವರು ಇಂದು ಬೆಂಗಳೂರಿಗೆ ಪುಷ್ಪ ಚಿತ್ರದ ಪ್ರಮೋಷನ್ ಕಾರ್ಯಕ್ಕಾಗಿ ಆಗಮಿಸಿದ್ದರು. ನಿಮಗೆಲ್ಲರಿಗೂ ತಿಳಿದಿರುವಂತೆ ಪುನೀತ್ ರಾಜಕುಮಾರ್ ರವರು ಅಲ್ಲು ಅರ್ಜುನ್ ರವರ ಜೊತೆಗೆ ಸಾಕಷ್ಟು ಒಳ್ಳೆಯ ರೀತಿಯ ಬಾಂಧವ್ಯವನ್ನು ಹೊಂದಿದ್ದಾರೆ. ಇನ್ನು ಇಂದು ಮಾಧ್ಯಮದ ಎದುರು ಅಲ್ಲು ಅರ್ಜುನ್ ರವರು ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವುಕರಾಗಿದ್ದರು. ಇನ್ನು ಇದೇ ಸಂದರ್ಭದಲ್ಲಿ ಅಲ್ಲುಅರ್ಜುನ್ ರವರು ಹೇಳಿರುವ ಮಾತೊಂದು ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದೆ. ಅದೇನೆಂದರೆ ನಾನು ಈಗ ಪುನೀತ್ ರಾಜಕುಮಾರ್ ರವರ ಮನೆಗೆ ಹೋಗುವುದಿಲ್ಲ ಎಂಬುದಾಗಿ ಅಲ್ಲು ಅರ್ಜುನ್ ರವರು ಹೇಳಿದ ಮಾತು.

ಹೌದು ಗೆಳೆಯರೇ ಅಲ್ಲು ಅರ್ಜುನ್ ರವರು ಹೀಗೆ ಹೇಳಿದ್ದಕ್ಕೆ ಎಲ್ಲರೂ ಕೂಡ ಆಶ್ಚರ್ಯ ಪಟ್ಟಿದ್ದರು. ಆದರೆ ಅದಕ್ಕೂ ಕೂಡ ಒಂದು ಸೂಕ್ತ ಕಾರಣವಿದೆ ಅದನ್ನು ಅಲ್ಲು ಅರ್ಜುನ್ ರವರೇ ಹೇಳಿದ್ದಾರೆ. ನಾನು ಈಗ ಪುಷ್ಪ ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದೇನೆ. ಈಗ ನಾನು ಪುನೀತ್ ರಾಜಕುಮಾರ್ ರವರ ಮನೆಗೆ ಭೇಟಿ ನೀಡಿದರೆ ಸಿನಿಮಾಗಾಗಿ ಅಲ್ಲು ಅರ್ಜುನ್ ಹೀಗೆ ಮಾಡಿದ್ದಾನೆ ಎಂಬುದಾಗಿ ಎಲ್ಲರೂ ಹೇಳುತ್ತಾರೆ ಎಂಬುದಾಗಿ ಅಲ್ಲು ಅರ್ಜುನ್ ಅವರು ಹೇಳಿಕೊಂಡಿದ್ದಾರೆ. ಪುಷ್ಪ ಚಿತ್ರದ ಚಟುವಟಿಕೆಗಳು ಮುಗಿದ ನಂತರ ನಾನು ಖಂಡಿತವಾಗಿಯೂ ಮತ್ತೆ ಬೆಂಗಳೂರಿಗೆ ಬಂದು ಪುನೀತ್ ರಾಜಕುಮಾರ್ ರವರ ಮನೆಗೆ ಭೇಟಿ ನೀಡುತ್ತೇನೆ ಎಂಬುದಾಗಿ ಕೂಡ ಇದೇ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅವರು ಹೇಳಿದ್ದಾರೆ. ಇನ್ನು ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಇದೇ ಡಿಸೆಂಬರ್ 17 ರಿಂದ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.