ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ, ನಾಯಕತ್ವ ಕಳೆದುಕೊಂಡ ಬಳಿಕ ಮೊದಲ ಸರಣಿಯಲ್ಲಿಯೇ ಕಹಿ ನಿರ್ಧಾರ ಘೋಷಣೆ. ಏನು ಗೊತ್ತೇ??

4,858

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡದಲ್ಲಿ ನಾಯಕತ್ವ ವಿವಾದದಿಂದ ಭುಗಿಲೆದ್ದಿದ್ದ ಅಸಮಾಧಾನ ಈಗ ಬೇರೆಯದೇ ಸ್ವರೂಪ ಪಡೆಯುತ್ತಿದೆ. ಸದ್ಯ ರೋಹಿತ್ ಶರ್ಮಾ ಗಾಯದ ಸಮಸ್ಯೆಯ ಕಾರಣದಿಂದ ಟೆಸ್ಟ್ ಸರಣಿಯಿಂದ ದೂರವುಳಿಯಬೇಕಾಯಿತು. ಏಕದಿನ ಪಂದ್ಯದ ನಾಯಕತ್ವವನ್ನು ವಿರಾಟ್ ಕೊಹ್ಲಿಯವರಿಂದ ಕಿತ್ತು ರೋಹಿತ್ ಶರ್ಮಾಗೆ ನೀಡಿದ್ದು, ವಿರಾಟ್ ಬೇಸರಕ್ಕೆ ಕಾರಣವಾಗಿತ್ತು. ಆ ಕಾರಣಕ್ಕೆ ಏಕದಿನ ಸರಣಿಯಿಂದ ಹಿಂದೆ ಸರಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.

ಈಗ ಅದಕ್ಕೆ ಸ್ಪಷ್ಠೀಕರಣ ದೊರೆತಿದ್ದು, ಸ್ವತಃ ವಿರಾಟ್ ಕೊಹ್ಲಿಯವರೇ ಪ್ರತಿಕ್ರಿಯೇ ನೀಡಿ, ತಾವು ಏಕದಿನ ಸರಣಿಯಿಂದ ಹೊರಗುಳಿಯುವುದಾಗಿ ಘೋಷಿಸಿದ್ದಾರೆ. ಕಳೆದ ಭಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಚೊಚ್ಚಲ ಮಗುವಿನ ಜನನದ ಕಾರಣ, ಕೇವಲ ಒಂದು ಟೆಸ್ಟ್ ಆಡಿ, ನಂತರ ಭಾರತಕ್ಕೆ ವಾಪಸ್ ಬಂದಿದ್ದರು. ಅಜಿಂಕ್ಯಾ ರಹಾನೆ ನೇತೃತ್ವದಡಿ ಆಡಿದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ದ ಐತಿಹಾಸಿಕ ಟೆಸ್ಟ್ ಸರಣಿಯಲ್ಲಿ ಜಯಗಳಿಸಿತು. ವಿರಾಟ್ ಹಾಗೂ ಅನುಷ್ಕಾ ಶರ್ಮಾ ಜೋಡಿಯ ಮೊದಲ ಮಗು ಜನೇವರಿ 11 ರಂದು ಜನಿಸಿತು.

ಹಾಗಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಮುಗಿದು, ಜನೇವರಿ 19 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಆದರೇ ಮಗಳು ವಮಿಕಾಗೆ ಮೊದಲ ವರ್ಷ ತುಂಬಿದ್ದು, ಆಕೆಯ ಜನ್ಮದಿನ ಆಚರಿಸುವ ಕಾರಣ ಏಕದಿನ ಸರಣಿಯಿಂದ ಹಿಂದುಳಿಯುವುದಾಗಿ ವಿರಾಟ್ ಘೋಷಿಸಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿಯುವುದು ಪಕ್ಕಾ ಆಗಿದೆ. ಏಕದಿನ ಸರಣಿ ವೇಳೆ ರೋಹಿತ್ ಶರ್ಮಾ ಗುಣಮುಖರಾಗದಿದ್ದಲ್ಲಿ , ಕೆ.ಎಲ್.ರಾಹುಲ್ ರವರಿಗೆ ನಾಯಕತ್ವ ಒಲಿಯುವ ಸಾಧ್ಯತೆ ಇದೆ. ಕೋಚ್ ರಾಹುಲ್ ದ್ರಾವಿಡ್ ರವರಿಗೆ ದೊಡ್ಡ ಸವಾಲು ಎದುರಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.