ಸತ್ತ ನಂತರವೂ ಕೂಡ ಮತ್ತೊಂದು ದಾಖಲೆ ಬರೆದ ಅಪ್ಪು, ಯಾರು ಮಾಡಲಾಗದ ಸಾಧನೆಯನ್ನು ಮಾಡಿ ತೋರಿಸಿದ್ದು ಹೇಗೆ ಗೊತ್ತೇ??

1,163

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ದೈಹಿಕವಾಗಿ ಬಿಟ್ಟು ಹೋಗುವ ಮುನ್ನ ಯಾರು ಮಾಡಬಾರದಂತಹ ಸಾಧನೆಯನ್ನು ಮಾಡಿದ್ದಾರೆ. ಕೇವಲ ಹಣವನ್ನು ಮಾತ್ರವಲ್ಲ ಜನರನ್ನು ಕೂಡ ಸಂಪಾದಿಸಬೇಕು ಎಂಬುದನ್ನು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಸಂದೇಶವನ್ನು ನೀಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತಾನೊಬ್ಬ ಸ್ಟಾರ್ ನಟನಾಗಿದ್ದರು ಕೂಡ ಸಾಮಾನ್ಯರಲ್ಲಿ ಸಾಮಾನ್ಯರು ಜೊತೆಗೂ ಕೂಡ ಸಾಮಾನ್ಯನಂತೆ ಇರುತ್ತಿದ್ದರು.

ಇದೇ ಕಾರಣಕ್ಕೆ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಯುವ ಅಭಿಮಾನಿಗಳನ್ನು ಹೊಂದಿರುವ ನಟ ಎಂಬುದಾಗಿ ಕರೆಯಲ್ಪಡುತ್ತಾರೆ. ಪುನೀತ್ ರಾಜಕುಮಾರ್ ಅವರು ಸಾವಿರಾರು ಮಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ. ಆದರೆ ಅದನ್ನು ಎಲ್ಲೂ ಕೂಡ ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳದೆ ಅವರಿಗೆ ಸಹಾಯವಾಯಿತಲ್ಲ ಎಂಬ ಸಾರ್ಥಕ ಭಾವನೆಯನ್ನು ಹೊಂದಿದ್ದರು. ಇದಕ್ಕಾಗಿ ಬೇರೆ ಎಲ್ಲಾ ನಟರಿಗಿಂತ ಪುನೀತ್ ರಾಜಕುಮಾರ್ ಅವರು ವಿಶೇಷವಾಗಿ ನಿಲ್ಲುತ್ತಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಮೇಲೆ ಕೂಡ ಅವರ ಕಂಠೀರವ ಸ್ಟುಡಿಯೋದ ಸಮಾಧಿಗೆ ದಿನಕ್ಕೆ ಸಾವಿರಾರು ಮಂದಿ ಸಾಲಿನಲ್ಲಿ ಬಂದು ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ.

ಮರಣದ ಸಂದರ್ಭದಲ್ಲಿ ಕೂಡ ಪುನೀತ್ ರಾಜಕುಮಾರ್ ಅವರು ತಮ್ಮ ನೇತ್ರದಾನವನ್ನು ಮಾಡಿ ಸಮಾಜಕ್ಕೆ ಸದಾಕಾಲ ಅಜರಾಮರರಾಗಿ ಇರುವಂತೆ ಮಾಡಿ ಹೋದರು. ಇನ್ನು ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ ನಮ್ಮ ಅಪ್ಪು. ಹೌದು ಗೆಳೆಯರೇ ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಗೂಗಲ್ ಗೆ ಅವಲಂಬಿತರಾಗಿದ್ದಾರೆ. ಇನ್ನು ಗೂಗಲ್ನಲ್ಲಿ ವಿಕಿಪೀಡಿಯಾ ಎನ್ನುವುದು ಮಾಹಿತಿಗಳ ಬಂಡಾರ ಎಂದು ಕರೆಯುತ್ತಾರೆ. ಇನ್ನು ಈ ಸಾಲಿನ ವಿಕಿಪೀಡಿಯಾದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಗಾದಂತಹ ಭಾರತ ದೇಶದ ಸೆಲೆಬ್ರಿಟಿ ನಟ ಎಂದರೆ ಪುನೀತ್ ರಾಜಕುಮಾರ್ ಅವರು ಆಗಿದ್ದಾರೆ. ಮರಣದ ಮೇಲೂ ಕೂಡ ಪುನೀತ್ ರಾಜಕುಮಾರ್ ರವರು ಭಾರತೀಯರ ಮನಸ್ಸಿನಲ್ಲಿ ಕಂಗೊಳಿಸುತ್ತಿದ್ದಾರೆ.