ಇನ್ನು ಒಂದು ವಾರದಲ್ಲಿ ಆರಂಭವಾಗಲಿರುವ ಪ್ರೊ ಕಬ್ಬಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ತಂಡದ ನಾಯಕ ಯಾರಂತೆ ಗೊತ್ತೇ??

275

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಕೇವಲ ಐಪಿಎಲ್ ಕ್ರಿಕೆಟ್ ಮಾತ್ರ ಮಿಂಚುತ್ತಿದ್ದ ಕಾಲದಲ್ಲಿ ಪ್ರೊ ಕಬಡ್ಡಿ ಲೀಗ್ ಆಗಮಿಸಿ ಭಾರತೀಯ ಪ್ರೇಕ್ಷಕರನ್ನು ಕಬ್ಬಡಿಯ ಕುರಿತಂತೆ ಹೆಚ್ಚುವಂತೆ ಮಾಡಿತ್ತು. ಭಾರತೀಯ ನೆಲದ ಕಬಡ್ಡಿ ಕ್ರೀಡೆಗೆ ಪ್ರೊ ಕಬಡ್ಡಿ ಲೀಗ್ ಹೊಸ ಹೊಳಪನ್ನು ತಂದುಕೊಡುತ್ತದೆ. ಭಾರತದ ಮಣ್ಣಿನ ಗಂಡು ಕ್ರೀಡೆಯಾಗಿರುವ ಕಬಡ್ಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಜನಪ್ರಿಯತೆ ಪಡೆಯಲು ಪ್ರೊ ಕಬಡ್ಡಿ ಲೀಗ್ ಕಾರಣವಾಯಿತು ಎಂದರೆ ತಪ್ಪಾಗಲಾರದು. 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ ಚಾಂಪಿಯನ್ ಆಗಿದ್ದ ಬೆಂಗಳೂರು ಬುಲ್ಸ್ ಈ ಬಾರಿಯ ಸೀಸನ್ ಎಂಟರ ಚಾಂಪಿಯನ್ ಆಗಲು ಕೂಡ ಸಾಕಷ್ಟು ಪ್ರಬಲವಾದ ತಂಡವನ್ನು ಒಟ್ಟುಗೂಡಿಸಿದೆ.

ಇನ್ನು ತಂಡದಲ್ಲಿ ಸೌತ್ ಕೊರಿಯಾದ ಡೋಂಗ್ ಗಿಯೋನ್ ಲೀ ಹಾಗೂ ಇರಾನ್ ದೇಶದ ಅಬುಲ್ ಫಝಲ್ ಬಲಿಷ್ಠ ಆಟಗಾರರು ಈ ಬಾರಿ ಬೆಂಗಳೂರು ಬುಲ್ಸ್ ತಂಡದಲ್ಲಿದ್ದಾರೆ. ಚಂದ್ರನ್ ರಂಜಿತ್ ಜಿಬಿ ಮೋರೆ ಹೀಗೆ ಹಲವಾರು ಆಟಗಾರರು ಕೂಡ ಈ ಬಾರಿ ಬೆಂಗಳೂರು ಬುಲ್ಸ್ ತಂಡವನ್ನು ಸೇರಿದ್ದಾರೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ಹಿಂದಿನ ಆವೃತ್ತಿಗಳನ್ನು ರೋಹಿತ್ ಕುಮಾರ್ ರವರು ಬೆಂಗಳೂರು ಬುಲ್ಸ್ ತಂಡದ ಕಪ್ತಾನನಾಗಿ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದರು. ಇನ್ನು ಈ ಬಾರಿಯಿಂದ ಬೆಂಗಳೂರು ಬುಲ್ಸ್ ತಂಡದ ಕಪ್ತಾನನಾಗಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಕುರಿತಂತೆ ಸಾಕಷ್ಟು ಕುತೂಹಲಗಳು ಹಾಗೂ ಚರ್ಚೆಗಳು ಮೂಡಿದ್ದವು.

ಇನ್ನು ಈ ಎಲ್ಲಾ ಗೊಂದಲಗಳಿಗೆ ಕೂಡ ತಂಡ ತೆರೆ ಎಳೆದಿದೆ. ಹೌದು ಗೆಳೆಯರೇ ಈ ಬಾರಿ ಬೆಂಗಳೂರು ಬುಲ್ಸ್ ತಂಡವನ್ನು ಪವನ್ ಕುಮಾರ್ ಸೆಹ್ರಾವತ್ ರವರು ನಾಯಕನಾಗಿ ಮುನ್ನಡೆಸಲಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಅತ್ಯಂತ ಹೆಚ್ಚು ರೈಡಿಂಗ್ ಪಾಯಿಂಟ್ ಪಡೆದಂತಹ ಆಟಗಾರ ಪವನ್ ಆಗಿದ್ದರು. ಆಕ್ರಮಕ ಆಟಕ್ಕೆ ಪವನ್ ರವರು ಹೆಸರುವಾಸಿಯಾಗಿದ್ದರು. ಒಂದು ಲೆಕ್ಕದಲ್ಲಿ ಹೇಳುವುದಾದರೆ ಕಳೆದ ಎರಡು ಆವೃತ್ತಿಗಳಲ್ಲಿ ಕೂಡ ಬೆಂಗಳೂರು ಬುಲ್ಸ್ ತಂಡ ಸಂಪೂರ್ಣವಾಗಿ ಪವನ್ ರವರ ಪ್ರದರ್ಶನದ ಮೇಲೆ ಅವಲಂಬಿತವಾಗಿತ್ತು. ಇನ್ನು ಈ ಬಾರಿ ಕೂಡ ಅದೇ ರೀತಿಯ ಒನ್ ಮ್ಯಾನ್ ಶೋ ಮಾಡಲಿದ್ದಾರೆ ಎಂಬುದಾಗಿ ಪವನ್ ಅವರ ಮೇಲೆ ಬೆಂಗಳೂರು ಬುಲ್ಸ್ ತಂಡದ ಸಮರ್ಥಕರು ಆಶಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಾರಿಯ ಪ್ರೊ ಕಬ್ಬಡಿ ಲೀಗ್ ಇದೆ ಡಿಸೆಂಬರ್ 22 ರಿಂದ ಪ್ರಾರಂಭವಾಗಲಿದೆ.