ಕಿರುತೆರೆಯ ಟಾಪ್ ನಟಿಗೆ ಕುಲಾಯಿಸಿದ ಅದೃಷ್ಟ, ಶಿವ ರಾಜ್ ಕುಮಾರ್ ರವರ ನಟನೆಯ ವೇದ ಚಿತ್ರಕ್ಕೆ ನಟಿಯಾಗಿ ಆಯ್ಕೆ. ಯಾರು ಗೊತ್ತೇ??

159

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಯಂಗ್ ಅಂಡ್ ಎವರ್ಗ್ರೀನ್ ನಟ ಯಾರು ಎಂದು ಕೇಳಿದಾಗ ಕೇಳಿಬರುವ ಮೊದಲ ಹೆಸರೇ ನಮ್ಮ ಕರುನಾಡ ಚಕ್ರವರ್ತಿ ಶಿವಣ್ಣನವರ ಹೆಸರು. ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 35 ವರ್ಷಗಳಿಗಿಂತಲೂ ಅಧಿಕವಾಗಿ ಶಿವಣ್ಣನವರು ನಟಿಸಿಕೊಂಡು ಬಂದಿದ್ದಾರೆ. ಇಂದಿಗೂ ಕೂಡ ಕನ್ನಡಚಿತ್ರರಂಗದಲ್ಲಿ ಲೀಡರ್ ಶಿವಣ್ಣ ಎಂಬುದಾಗಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇನ್ನು ಶಿವಣ್ಣ ನಟನೆಯ 125ನೇ ಚಿತ್ರವಾಗಿ ವೇದ ಚಿತ್ರ ಮೂಡಿಬರಲಿದೆ. ಇನ್ನು ಈ ಚಿತ್ರ ಹಲವಾರು ವಿಶೇಷತೆಗಳಿಂದಾಗಿ ಈಗಾಗಲೇ ಅಭಿಮಾನಿಗಳಲ್ಲಿ ಹಾಗೂ ಕನ್ನಡ ಸಿನಿಮಾ ರಸಿಕ ರಲ್ಲಿ ದೊಡ್ಡ ಸುದ್ದಿಯನ್ನು ಮಾಡಿದೆ.

ಇನ್ನು ಈ ಚಿತ್ರ ಗತಕಾಲದ ಇತಿಹಾಸ ದಲ್ಲಿ ನಡೆಯುವ ಕಥೆಯಾಗಿದ್ದು ಇದರಲ್ಲಿ ಶಿವಣ್ಣ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಜರಂಗಿ ಸರಣಿ ಚಿತ್ರಗಳ ನಂತರ ಮತ್ತೊಮ್ಮೆ ವೇದ ಚಿತ್ರಕ್ಕೆ ಕೂಡ ಹರ್ಷ ರವರೆ ನಿರ್ದೇಶನ ಮಾಡಲಿದ್ದಾರೆ. ಶಿವಣ್ಣ ಅಭಿಮಾನಿಗಳ ನೆಚ್ಚಿನ ನಿರ್ದೇಶಕರಾಗಿರುವ ಹರ್ಷ ರವರು ವೇದ ಚಿತ್ರದ ಮೂಲಕ ಯಾವ ಮ್ಯಾಜಿಕ್ ಮಾಡುತ್ತಾರೆ ಎಂಬುದನ್ನು ಕೂಡ ಕಾದುನೋಡಬೇಕಾಗಿದೆ. ಇನ್ನು ವೇದ ಚಿತ್ರವನ್ನು ಸ್ವತಹ ಶಿವಣ್ಣನವರ ಧರ್ಮಪತ್ನಿ ಆಗಿರುವ ಗೀತಕ್ಕ ನವರೇ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಹೀಗಾಗಿ ಈ ಚಿತ್ರದ ನಾಯಕಿಯ ಕುರಿತಂತೆ ಸಾಕಷ್ಟು ದೊಡ್ಡಮಟ್ಟದಲ್ಲಿ ಕುತೂಹಲ ಉದ್ಭವವಾಗಿತ್ತು. ಇನ್ನು ವೇದ ಚಿತ್ರಕ್ಕೆ ನಾಯಕಿಯಾಗಿ ಕಿರುತೆರೆಯ ನಟಿ ಆಯ್ಕೆಯಾಗಿದ್ದಾರೆ.

ಅವರು ಇನ್ಯಾರೂ ಅಲ್ಲ ಟಿ ಎನ್ ಸೀತಾರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಮಗಳು ಜಾನಕಿ ಧಾರವಾಹಿಯಲ್ಲಿ ನಟಿಸಿರುವ ಗಾನವಿ ಲಕ್ಷ್ಮಣ್ ರವರು ವೇದ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈಗಾಗಲೇ ಗಾನವಿ ಲಕ್ಷ್ಮಣ ರವರು ರಿಷಬ್ ಶೆಟ್ಟಿ ನಟನೆಯಲ್ಲಿ ಮೂಡಿಬಂದಿರುವ ಹೀರೋ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ತನ್ನ ನಟನೆಯ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ವೇದ ಚಿತ್ರ ಗಾನವಿ ಅವರ ಸಿನಿಮಾ ಜರ್ನಿಯ ಆರಂಭಿಕ ದಿನಗಳಲ್ಲಿ ಸಿಕ್ಕಿರುವ ದೊಡ್ಡ ಅವಕಾಶವಾಗಿದ್ದು ಈ ಚಿತ್ರದ ನಂತರ ಗಾನವಿ ಲಕ್ಷ್ಮಣ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವುದು ಖಂಡಿತ ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.