ಬಿಗ್ ಬ್ರೇಕಿಂಗ್: ಶುರುವಾಯಿತು ಡ್ರಾಮಾ ಜೂನಿಯರ್ಸ್ ಹಾಗೂ ಸರಿಗಮಪ ಹೊಸ ಸೀಸನ್ ಆಡಿಶನ್, ಅದು ಕೇವಲ ಒಂದು ಷರತ್ತಿನೊಂದಿಗೆ. ಏನು ಗೊತ್ತೇ?

348

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆ ವಾಹಿನಿಯ ಕಾರ್ಯಕ್ರಮಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಂಡಿದೆ. ಪ್ರತಿಯೊಂದು ವಾಹಿನಿಗಳ ನಡುವೆ ಒಳ್ಳೆಯ ಹಾಗೂ ಸದಭಿರುಚಿಯ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುವುದರಲ್ಲಿ ದೊಡ್ಡ ಮಟ್ಟದ ಸ್ಪರ್ಧೆ ಏರ್ಪಟ್ಟಿದೆ.

ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಾಹಿನಿಯಲ್ಲಿ ಕೂಡ ಸಿನಿಮಾ ಹಾಗೂ ಧಾರಾವಾಹಿಗಳನ್ನು ಹೊರತು ಪಡಿಸಿ ಉತ್ತಮ ಕಾರ್ಯಕ್ರಮಗಳು ಕೂಡ ಪ್ರಸಾರವಾಗುತ್ತಿದೆ. ಇದರಲ್ಲಿ ಸರಿಗಮಪ ಹಾಗೂ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮಗಳು ಕೂಡ ಸಾಕಷ್ಟು ವಿಶೇಷ ಸ್ಥಾನದಲ್ಲಿ ಕಾಣಸಿಗುತ್ತದೆ. ಇನ್ನು ಈಗಾಗಲೇ ಎರಡು ಕಾರ್ಯಕ್ರಮಗಳು ಕೂಡ ಮುಕ್ತಾಯವಾಗಿದ್ದು ಹೊಸ ಸೀಸನ್ ಅತಿಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇನ್ನು ಹೊಸ ಸೀಸನ್ ಗಳಿಗೆ ನೀಡಲು ಹಲವಾರು ನಿಯಮಗಳನ್ನು ಕೂಡ ಈ ಬಾರಿ ಲಗತ್ತಿಸಲಾಗಿದೆ. ಹಾಗಿದ್ದರೆ ಈ ಎರಡು ಕಾರ್ಯಕ್ರಮಗಳಿಗೂ ಆಡಿಶನ್ ನೀಡಲು ಇರುವ ನಿಯಮಗಳು ಏನು ಎಂಬುದರ ಕುರಿತಂತೆ ನಾವು ನಿಮಗೆ ಹೇಳಲು ಹೊರಟಿದ್ದೇವೆ ತಪ್ಪದೇ ಕೊನೆಯವರೆಗೂ ಓದಿ.

ಈ ಬಾರಿ ಡ್ರಾಮಾ ಜೂನಿಯರ್ಸ್ ಹಾಗೂ ಸರಿಗಮಪ ಕಾರ್ಯಕ್ರಮದಲ್ಲಿ ಕೇವಲ ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂಬುದಾಗಿ ಹೇಳಿದ್ದಾರೆ. ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಿಂದ ಇಲ್ಲಿಯವರೆಗೆ ಅದೆಷ್ಟೋ ಒಳ್ಳೆಯ ಕಲಾವಿದರು ಹಾಗೂ ಸರಿಗಮಪ ಕಾರ್ಯಕ್ರಮದಿಂದಾಗಿ ಉತ್ತಮ ಗಾಯಕರು ನಾಡಿಗೆ ಪರಿಚಿತರಾಗಿದ್ದಾರೆ. ಸರಿಗಮಪ ಸೀಸನ್ 19 ರಲ್ಲಿ ಪಾಲ್ಗೊಳ್ಳುವವರ ವಯಸ್ಸು 4ರಿಂದ 16 ವರ್ಷದ ಒಳಗೆ ಇರಬೇಕು. ಇನ್ನು ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು 4ರಿಂದ 14 ವರ್ಷದ ಒಳಗೆ ಇರಬೇಕು. ಇನ್ನು ಆಡಿಶನ್ ನೀಡುವ ವಿಧಾನ ಹೇಗೆಂದರೆ ಸರಿಗಮಪ ಕ್ಕೆ ಆಡಿಶನ್ ನೀಡುವವರು ಪರ್ಫಾರ್ಮೆನ್ಸ್ ವಿಡಿಯೋವನ್ನು 9513516200 ಗೆ ಹಾಗೂ ಡ್ರಾಮಾ ಜೂನಿಯರ್ ಗೆ ಆಡಿಶನ್ ನೀಡುವವರು 9513134434 ವಾಟ್ಸಾಪ್ ಗೆ ತಮ್ಮ ಪರ್ಫಾರ್ಮೆನ್ಸ್ ವಿಡಿಯೋಗಳು ಕಳುಹಿಸಬೇಕು.