ಇದ್ದಕಿದ್ದ ಹಾಗೆ ಕಣ್ಮರೆಯಾಗಿದ್ದ ಕಾಮಿಡಿ ಕಿಲಾಡಿ ಸಂಜು ಬಸಯ್ಯ ರವರು ಇದ್ದಕ್ಕಿದ್ದ ಹಾಗೆ ಬಂದು ನೀಡಿದ ಸಿಹಿ ಸುದ್ದಿ ಏನು ಗೊತ್ತೇ?? ಶುಭಾಶಯಗಳ ಮಹಾಪೂರವೇ ಹರಿಸಿದ ಜನರು.
ನಮಸ್ಕಾರ ಸ್ನೇಹಿತರೇ ಕನ್ನಡದ ರಿಯಾಲಿಟಿ ಶೋಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದ ರಿಯಾಲಿಟಿ ಶೋ ಅಂದರೇ ಅದು ಕಾಮಿಡಿ ಕಿಲಾಡಿಗಳು. ಕಾಮಿಡಿ ಕಿಲಾಡಿಗಳು ಹೊಸದಾಗಿ ಶುರುವಾದ ನಂತರ ಸೀಸನ್ ನ ಶಿವರಾಜ್ ಕೆ.ಆರ್.ಪೇಟೆ, ನಯನಾ, ಗೋವಿಂದೇಗೌಡ, ದಿವ್ಯಾ, ಅಪ್ಪಣ್ಣ ಹೀಗೆ ಎಲ್ಲರೂ ಸಾಕಷ್ಟು ಹೆಸರು ಮಾಡಿದರು. ಇನ್ನೂ ಅದರಲ್ಲಿಯೂ ಗಮನ ಸೆಳೆದ ಕಲಾವಿದರೆಂದರೇ ಸಂಜು ಬಸಯ್ಯ. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮುರಗೋಡಿನವರು.
ಒಂದು ಹಂತಕ್ಕೆ ಬಂದ ನಂತರ ಸಂಜು ಬಸಯ್ಯ ಎತ್ತರ ಮೇಲೆರಲೇ ಇಲ್ಲ. ಎಲ್ಲರೂ ಕುಳ್ಳ, ಕುಬ್ಜ ಎಂದು ಹೀಯಾಳಿಸತೊಡಗಿದರು. ಈ ವೇಳೆ ಆ ಹೀಗಳಿಕೆಗಳನ್ನೇ ಸ್ಪೂರ್ತಿಯಾಗಿ ಪಡೆದುಕೊಂಡು ಹಾಸ್ಯನಟರಾದರು. ಮೊದಮೊದಲು ಚಿಕ್ಕ ಚಿಕ್ಕ ನಾಟಕ ಕಂಪನಿಗಳಲ್ಲಿ ಅಭಿನಯಿಸುತ್ತಿದ್ದ ಸಂಜು ಬಸಯ್ಯ, ಮುಂದಿನ ದಿನಗಳಲ್ಲಿ ಉದಯ ಕಾಮಿಡಿ ಚಾನೆಲ್ ನ ಕಾರ್ಯಕ್ರಮಗಳಲ್ಲಿ ಕಾಣಿಸತೊಡಗಿದರು.

ಅವರ ಜೀವನದಲ್ಲಿ ದೊಡ್ಡ ಬ್ರೇಕ್ ಸಿಕ್ಕಿದ್ದು, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ. ಅಲ್ಲಿಂದ ಹಲವಾರು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸತೊಡಗಿದರು. ಸದ್ಯ ಸಂಜು ಬಸಯ್ಯರವರ ಜೀವನದಲ್ಲಿ ಹೊಸ ಬೆಳಕೊಂದು ಮೂಡುತಿದ್ದು, ಅವರು ತಮ್ಮ ಗೆಳತಿ ಪಲ್ಲವಿ ಬಳ್ಳಾರಿಯವರ ಜೊತೆ ಶೀಘ್ರದಲ್ಲಿಯೇ ಸಪ್ತಪದಿ ತುಳಿಯುತ್ತಿದ್ದಾರೆ. ಪಲ್ಲವಿ ಬಳ್ಳಾರಿ ಸಹ ನಾಟಕಗಳಲ್ಲಿ ಅಭಿನಯಿಸುತ್ತಾರೆ. ಎಂಟು ವರ್ಷಗಳ ಹಿಂದೆ ಶುರುವಾದ ಇವರ ಸ್ನೇಹ, ಪ್ರೀತಿಗೆ ತಿರುಗಿ, ಸದ್ಯ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಹಿಂದೊಮ್ಮೆ ಪಲ್ಲವಿ ಬಳ್ಳಾರಿ ಕಾಮಿಡಿ ಕಿಲಾಡಿ ಕಾರ್ಯಕ್ರಮಕ್ಕೆ ಬಂದಾಗ ನಟ ಜಗ್ಗೇಶ್ ರವರ ಮುಂದೆ ಈ ಪ್ರೇಮ ಪ್ರಕರಣ ಹೊರಗೆ ಬಂದಿತ್ತು. ನವರಸ ನಾಯಕ ಜಗ್ಗೇಶ್ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಈಗ ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.