ಮದುವೆಯಾದ ವರ್ಷಕ್ಕೆ ಜೀವ ಕಳೆದುಕೊಂಡ ಮಹಿಳಾ ಟೆಕ್ಕಿ ಸಂಗೀತಾಳ ಪ್ರಕರಣಕ್ಕೆ ಹೊಸ ಟ್ವಿಸ್ಟ್, ಯಾರು ಊಹಿಸಿದ ರೀತಿ ಏನಾಗಿದೆ ಗೊತ್ತೇ??

1,027

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರು ಬೇರೆ ಬೇರೆ ಊರುಗಳಿಂದ ಹಾಗೂ ರಾಜ್ಯಗಳಿಂದ ಬರುವ ಜನರಿಗೆ ಉದ್ಯೋಗವನ್ನು ನೀಡಿ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಸಹಕಾರಿಯಾಗಿರುವ ಸ್ಥಳವಾಗಿದೆ. ಇಂದಿಗೂ ಕೂಡ ಲಕ್ಷಾಂತರ ಜನರು ಬೇರೆ ಬೇರೆ ಭಾಗಗಳಿಂದ ಬೆಂಗಳೂರಿಗೆ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬಂದು ನೆಲೆಸುತ್ತಾರೆ.

ಆದರೆ ಇತ್ತೀಚೆಗಷ್ಟೇ ನಡೆದಿರುವ ಒಂದು ಘಟನೆ ಸಾಕಷ್ಟು ಹೃದಯವಿದ್ರಾವಕವಾಗಿತ್ತು. ಇಂದು ಅದೇ ವಿಚಾರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಇತ್ತೀಚೆಗಷ್ಟೇ ಬೆಂಗಳೂರಿನ ಅಮೃತ ಹಳ್ಳಿಯ ವೀರಣ್ಣ ಪಾಳ್ಯದಲ್ಲಿ ಟೆಕ್ಕಿ ಸಂಗೀತ ರವರು ಜೀವ ಕಳೆದುಕೊಂಡಿರುವ ವಿಚಾರ ಈಗ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಂಗೀತ ಹಾಗೂ ವಿನಯ್ ಇಬ್ಬರೂ ಕೂಡ ಇಂಜಿನಿಯರಿಂಗ್ ಮಾಡಿದವರು.

ಸಂಗೀತ ರವರು ಕೆಲಸಕ್ಕೆ ಕೂಡ ಸೇರಿ ನಂತರ ಮದುವೆ ಆಗಬೇಕೆನ್ನುವ ನಿಟ್ಟಿನಲ್ಲಿ ಮ್ಯಾಟ್ರಿಮೋನಿಯಲ್ಲಿ ವಿನಯ ರವರ ಪರಿಚಯವಾಗುತ್ತದೆ. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರು 4 ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗುತ್ತಾರೆ. ಇನ್ನು ಈಗ ನಾವು ಹೇಳುವುದಾದರೆ ಸಂಗೀತ ಅವರು ಜೀವ ಕಳೆದುಕೊಳ್ಳುವ ಮುನ್ನ ತನಗೆ ಗಂಡ ಕಷ್ಟವನ್ನು ನೀಡಿದ್ದಾನೆ ಎಂಬುದನ್ನು ಬರೆದುಕೊಂಡಿದ್ದರು. ಇನ್ನು ಮನೆಯಲ್ಲಿ ಕೂಡ ಸಂಗೀತ ರವರನ್ನು ಒಬ್ಬಳೇ ಮಗಳು ಎಂದು ಅವಳಿಷ್ಟ ಪಟ್ಟಂತಹ ಹುಡುಗನ ಜೊತೆಗೆ 5ಲಕ್ಷ ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿ ಚಿನ್ನಾಭರಣಗಳನ್ನು ಕೂಡ ಕೊಟ್ಟಿದ್ದರು.

ಇನ್ನು ಇದರ ಕುರಿತಂತೆ ಸಂಗೀತ ತಾಯಿಯ ಬಳಿ ಕೇಳಿದಾಗಲೂ ಕೂಡ ಅಳಿಯ ನನ್ನ ಮಗಳಿಗೆ ಕಷ್ಟವನ್ನು ಕೊಡುತ್ತಿದ್ದ ಇದರಿಂದಾಗಿಯೇ ಆಕೆ ಜೀವವನ್ನು ಕಳೆದುಕೊಂಡಿದ್ದಾರೆ ಎಂಬ ಮಾತು ಹೇಳಿದ್ದಾರೆ. ಆದರೆ ಈಗ ಈ ಪ್ರಕರಣಕ್ಕೆ ಊಹಿಸಿರದಂತಹ ತಿರುವು ಕಂಡುಬಂದಿದೆ. ಇತ್ತೀಚಿಗಷ್ಟೇ ಸಂಗೀತಾಳ ಪತಿ ಆಗಿರುವ ವಿನಯ್ ಪೊಲೀಸರ ಮುಂದೆ ಬಂದು ಕಣ್ಣೀರಿಟ್ಟಿದ್ದಾನೆ. ನಾನು ನನ್ನ ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ನಾವಿಬ್ಬರು ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು ಸರ್.

ಅವಳ ಹೆಸರನ್ನು ನನ್ನ ಕೈಮೇಲೆ ಕೂಡ ಹಚ್ಚೆ ಕೂಡ ಹಾಕಿಸಿಕೊಂಡಿದ್ದೇನೆ. ಅಷ್ಟೊಂದು ಅವಳನ್ನು ಪ್ರೀತಿಸುತ್ತಿದ್ದೆ. ಒಂದು ವೇಳೆ ನನ್ನ ಅತಿಯಾದ ಪ್ರೀತಿ ಅವಳಿಗೆ ಮುಳುವಾಯಿತು ಎಂದು ಅನಿಸುತ್ತದೆ. ಏನಾದರೂ ಸಮಸ್ಯೆ ಇದ್ದಿದ್ದರೆ ನನ್ನ ಬಳಿ ಹೇಳಬೇಕಾಗಿತ್ತು ಆದರೆ ಅವಳಿಗೆ ಮಾಡಿಕೊಂಡಿದ್ದು ನನಗೆ ತುಂಬಾನೇ ಬೇಸರವಾಗುತ್ತಿದೆ ಸರ್ ಎಂಬುದಾಗಿ ಹೇಳಿಕೊಂಡಿದ್ದಾರೆ. ವಿನಯ್ ಹೇಳುತ್ತಿರುವುದು ನಿಜವೇ ಇಲ್ಲ ನಾಟಕವು ಎಂಬುದು ಮುಂದಿನ ದಿನಗಳ ತನಿಖೆಯ ನಂತರ ತಿಳಿದು ಬರಬೇಕಾಗಿದೆಯಷ್ಟೇ.

ಆದರೆ ವಿನಯ್ ರವರ ಈ ಹೇಳಿಕೆಯಿಂದಾಗಿ ಪೊಲೀಸರು ಈಗ ಹೊಸ ಆಯಾಮದಲ್ಲಿ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ. ಆದರೂ ಕೂಡ ಮದುವೆಯಾದ ಒಂದೇ ವರ್ಷದಲ್ಲಿ ಸಂಗೀತ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದು ಖಂಡಿತವಾಗಿಯೂ ಎಲ್ಲರಿಗೂ ಕಣ್ಣೀರನ್ನು ತರಿಸುವಂತಿದೆ. ಜೀವನದಲ್ಲಿ ಇಷ್ಟಪಟ್ಟ ಹುಡುಗನನ್ನು ಮದುವೆ ಆದರೂ ಕೂಡ ಸಂಸಾರ ಎನ್ನುವುದು ಸಂಗೀತಾಳಿಗೆ ಹೇಳಿಮಾಡಿಸಿದ್ದಾಗಿರಲಿಲ್ಲ ಎನ್ನುವುದನ್ನು ಈ ಪ್ರಕರಣದಿಂದ ತಿಳಿಯಬಹುದಾಗಿದೆ.