ಬಿಗ್ ನ್ಯೂಸ್: ಹುಟ್ಟು ಹಬ್ಬದ ದಿನವೇ ಮದುವೆಯ ಕುರಿತು ಮಾತನಾಡಿದ ಅರವಿಂದ್, ಬಿಗ್ ಬಾಸ್ ದಿವ್ಯ ಉರುದುಗ ಜೊತೆ ಮದುವೆಗೆ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ರನ್ನರ್ ಅಪ್ ಆಗಿದ್ದವರು ಅರವಿಂದ್ ಕೆ ಪಿ. ಇನ್ನು ಇವರು ಬೈಕ್ ರೇಸಿಂಗ್ ಹಿನ್ನಲೆಯಿಂದ ಬಂದವರಾಗಿದ್ದರು. ಇನ್ನು ಬಿಗ್ ಬಾಸ್ ಮೂಲಕ ಅರವಿಂದ್ ರವರ ಸಾಧನೆ ಕುರಿತಂತೆ ಜನರಿಗೆ ತಿಳಿಯುತ್ತದೆ. ಬಿಗ್ ಬಾಸ್ ನಲ್ಲಿ ಇದ್ದಾಗ ಅರವಿಂದ್ ಹಾಗೂ ದಿವ್ಯ ಉರುಡುಗ ನಡುವೆ ಪ್ರೀತಿಯ ಸಮಾಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು.

ಇನ್ನು ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಕೂಡ ಅರವಿಂದ್ ಹಾಗೂ ದಿವ್ಯ ರವರು ಮದುವೆಯಾಗುತ್ತಾರೆ ಎಂಬ ಸುದ್ದಿಗಳು ದೊಡ್ಡದಾಗಿ ಹರಡಿದ್ದವು. ಇನ್ನು ಇತ್ತೀಚಿಗಷ್ಟೇ ಅರವಿಂದ್ ಅವರು ತಮ್ಮ ಜನ್ಮದಿನವನ್ನು ದಿವ್ಯ ಸೇರಿದಂತೆ ಹಲವಾರು ಗೆಳೆಯರೊಂದಿಗೆ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅರವಿಂದ್ ರವರ ಜನ್ಮದಿನಾಚರಣೆಯಲ್ಲಿ ಬ್ರೋ ಗೌಡ ಕೂಡ ಭಾಗವಹಿಸಿದ್ದಾರೆ. ಜನ್ಮದಿನಾಚರಣೆಯ ಸಂಭ್ರಮಾಚರಣೆಯಲ್ಲಿ ಅರವಿಂದ್ ಹಾಗೂ ದಿವ್ಯ ಇಬ್ಬರೂ ಕೂಡ ಹಳದಿ ವಸ್ತ್ರದಲ್ಲಿ ಕಂಗೊಳಿಸುತ್ತಿದ್ದರು. ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇನ್ನು ಈ ಸಂದರ್ಭದಲ್ಲಿ ಅರವಿಂದ್ ಅವರು ತಮ್ಮ ಹಾಗೂ ದಿವ್ಯ ರವರ ಮದುವೆ ಕುರಿತಂತೆ ಕೂಡ ಮಾತನಾಡಿದ್ದಾರೆ. ಆದಷ್ಟು ಬೇಗ ಅಂದರೆ ಮುಂದಿನ ವರ್ಷದ ಅಕ್ಟೋಬರ್ ತಿಂಗಳಲ್ಲಿ ಮದುವೆ ಆಗೋದಾಗಿ ಹೇಳಿದ್ದಾರೆ. ಅರವಿಂದ್ ಅವರ ಮನೆಯಲ್ಲಿ ಒಪ್ಪಿಗೆ ನೀಡಿದ್ದು ಇನ್ನು ದಿವ್ಯ ರವರ ಮನೆಯಲ್ಲಿ ಚರ್ಚೆ ನಡೆಯುತ್ತಿದೆ. ಆದಷ್ಟು ಬೇಗ ಅರವಿಂದ್ ಹಾಗೂ ದಿವ್ಯ ಅವರ ಮದುವೆ ನಡೆಯಲಿ ಎಂದು ಆಶಿಸಿದ್ದ ಅಭಿಮಾನಿಗಳಿಗೆ ಈ ಸುದ್ದಿ ಸಾಕಷ್ಟು ಸಂತೋಷದಾಯಕವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.