ಅಪ್ಪುಗಾಗಿ ಬರೆದ ಕಥೆಗೆ ನಾಯಕನಾಗಿ ಆಯ್ಕೆಯಾದ ನಟ ಯಾರು ಗೊತ್ತೆ?? ಅಪ್ಪು ಅಭಿಮಾನಿಗಳು ಫುಲ್ ಖುಷ್ ಆಗಿದ್ದು ಯಾಕೆ ಗೊತ್ತು??

1,265

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗಾಗಿ ಹಲವಾರು ಕಥೆಗಳು ಸಿದ್ಧವಾಗಿದ್ದವು. ಆದರೆ ಅವುಗಳನ್ನೆಲ್ಲಾ ಪುನೀತ್ ರಾಜಕುಮಾರ್ ರವರು ನಟನೆ ಮಾಡಿ ಸಿನಿಮಾ ರೂಪದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮುನ್ನವೇ ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿದ್ದಾರೆ.

ಹೌದು ಗೆಳೆಯರೇ ಲಾಕ್ಡೌನ್ ನಂತರ ಪುನೀತ್ ರಾಜಕುಮಾರ್ ಅವರಿಗಾಗಿ ಹಲವಾರು ಚಿತ್ರಗಳು ಅರಸಿಕೊಂಡು ಬಂದು ಪುನೀತ್ ರಾಜಕುಮಾರ್ ಅವರು ಕೂಡ ಅವುಗಳಲ್ಲಿ ನಟಿಸುವುದಾಗಿ ಒಪ್ಪಿಕೊಂಡಿದ್ದರು. ಆದರೆ ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 29ರಂದು ಮರಣ ಹೊಂದುವ ಮೂಲಕ ಎಲ್ಲಾ ಕಥೆಗಳಿಗೂ ಕೂಡ ನಾಯಕನಾಗುವ ಕನಸಾಗಿ ಉಳಿದುಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗಾಗಿ ಬರೆದಿರುವ ಎಲ್ಲಾ ಕಥೆಗಳನ್ನು ಅವರ ಕುಟುಂಬದ ಕುಡಿ ಯಾಗಿರುವ ಯುವರಾಜ್ ಕುಮಾರ್ ರವರಿಗೆ ಸಿನಿಮಾ ಮಾಡಿ ಎಂಬುದಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಎಲ್ಲರ ಬಳಿಯೂ ಕೂಡ ಕೇಳಿಕೊಂಡಿದ್ದರು.

ಇನ್ನು ಈಗ ಅಪ್ಪು ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದು ಸಿಕ್ಕಿದೆ. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ರಾಜಕುಮಾರ ಹಾಗೂ ಯುವರತ್ನ ಚಿತ್ರಗಳನ್ನು ಮಾಡಿದ್ದ ಸಂತೋಷ್ ಆನಂದ್ ರಾಮ್ ರವರು ಮೂರನೆಯ ಕಥೆಯನ್ನು ಕೂಡ ಅಪ್ಪು ಅವರಿಗಾಗಿ ಬರೆದು ಅದನ್ನು ಅಪ್ಪು ಕೂಡ ನಟಿಸುವುದಾಗಿ ಒಪ್ಪಿಕೊಂಡಿದ್ದರು. ಆದರೆ ಅದರಲ್ಲಿ ನಟಿಸುವ ಮುನ್ನವೇ ಅಪ್ಪು ಕಾಲವಾಗಿದ್ದಾರೆ. ಈಗ ಅಭಿಮಾನಿಗಳ ಅಪೇಕ್ಷೆಯ ಮೇರೆಯಂತೆ ಸಂತೋಷ್ ಆನಂದ್ ರಾಮ್ ರವರು ಆ ಕಥೆಯನ್ನು ಯುವರಾಜ್ ಕುಮಾರ್ ಅವರಿಗಾಗಿ ಸಿನಿಮಾ ಮಾಡಲು ಒಪ್ಪಿದ್ದಾರೆ. ಇನ್ನು ಬಲ್ಲ ಮೂಲಗಳ ಪ್ರಕಾರ ಯುವರಾಜ್ ಕುಮಾರ್ ರವರು ಇದೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಲಿದ್ದಾರೆ ಎಂಬುದಾಗಿ ಕೇಳಿಬರುತ್ತಿದೆ. ಪಪ್ಪು ಅವರ ಸ್ಥಾನವನ್ನು ತುಂಬಿಸ ಬಲ್ಲ ಏಕೈಕ ಅರ್ಹತೆ ಇರುವುದು ಯುವರಾಜ್ ಕುಮಾರ್ ರವರಿಗೆ ಮಾತ್ರ ಎಂಬುದಾಗಿ ಅಪ್ಪು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.