ತನ್ನ ತಮ್ಮನ ಮದುವೆಯಾಗಿದ್ದರೂ ಕೂಡ ದೊಡ್ಮನೆ ವಿಜಯ್ ರಾಜ್ ಕುಮಾರ್ ಮದುವೆಯಾಗಿಲ್ಲ, ಇದರ ಹಿಂದಿರುವ ಕಾರಣವೇನು ಗೊತ್ತೇ??

964

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಮೇಲೆ ರಾಜಕುಟುಂಬ ಎನ್ನುವುದು ಸಾಕಷ್ಟು ದುಃಖದ ಮಡುವಿನಲ್ಲಿ ಮುಳುಗಿ ಹೋಗಿತ್ತು. ಸದ್ಯದ ಮಟ್ಟಿಗೆ ಕೊಂಚ ಸುಧಾರಿಸಿಕೊಂಡಿದ್ದು ಮತ್ತೆ ಸಾಮಾನ್ಯ ಜೀವನಕ್ರಮಕ್ಕೆ ಮರಳುತ್ತಿದ್ದಾರೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ರಾಜಕುಮಾರ್ ರವರು ರಾಘವೇಂದ್ರ ರಾಜಕುಮಾರ್ ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ರವರು ಎಲ್ಲರೂ ಕೂಡ ಮದುವೆ ಆದಮೇಲೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು.

ಇನ್ನು ಇದೇ ಸಾಲಿಗೆ ರಾಘವೇಂದ್ರ ರಾಜಕುಮಾರ್ ರವರ ಕಿರಿಯ ಪುತ್ರನಾಗಿರುವ ಯುವರಾಜ್ ಕುಮಾರ್ ಕೂಡ ಸೇರುತ್ತಾರೆ. ಇನ್ನು ಕೂಡ ಯುವ ರಾಜಕುಮಾರ್ ನಟನೆಯ ಚಿತ್ರ ಬಿಡುಗಡೆ ಆಗಬೇಕಾಗಿದೆ ಅಷ್ಟೇ. ಆದರೆ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಹಲವಾರು ಚಿತ್ರಗಳಲ್ಲಿ ನಟಿಸಿರುವ ವಿನಯ್ ರಾಜಕುಮಾರ್ ಅವರು ಇಂದಿಗೂ ಕೂಡ ಮದುವೆ ಆಗಿಲ್ಲ. ಇನ್ನು ಈಗಾಗಲೇ ತಮ್ಮ ಚಿಕ್ಕಪ್ಪ ಆಗಿರುವ ಪುನೀತ್ ರಾಜಕುಮಾರ್ ರವರ ತದ್ರೂಪಿ ಅಂತೆ ಇರುವ ವಿನಯ್ ರಾಜಕುಮಾರ್ ಅವರು ಅವರ ಮಕ್ಕಳಾಗಿರುವ ವಂದಿತ ಹಾಗೂ ದೃತಿ ಅವರ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ.

ಅಣ್ಣನಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ವಿನಯ ರಾಜಕುಮಾರ್ ನಟನೆಯ ಅಂದೊಂದಿತ್ತು ಕಾಲ ಹಾಗು ಗ್ರಾಮಾಯಣ ಚಿತ್ರದ ಚಿತ್ರೀಕರಣ ಗಳು ಭರದಿಂದ ಸಾಗುತ್ತಿದೆ. ಇನ್ನು ಇವೆಲ್ಲದರ ನಡುವೆ ವಿನಯ್ ರಾಜಕುಮಾರ್ ರವರು ಇನ್ನು ಯಾಕೆ ಮದುವೆ ಆಗಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತದೆ. ಇದಕ್ಕೆ ಅವರು ಹೇಳಿರುವ ಉತ್ತರವೇನೆಂದರೆ ಈಗಾಗಲೇ ಕುಟುಂಬದ ಜವಾಬ್ದಾರಿ ಹಿರಿಯ ಮಗನಾಗಿ ಇರುವುದರಿಂದಾಗಿ ಅವರ ಮೇಲೆ ಇದ್ದು ಅದನ್ನು ನಿಭಾಯಿಸುವ ಸಲುವಾಗಿ ಸದ್ಯಕ್ಕೆ ಮದುವೆ ಆಗಿಲ್ಲ ಎಂಬುದಾಗಿ ಹೇಳಿದ್ದಾರೆ. ಇನ್ನು ಅವರು ಹಾಗೂ ಪಾರ್ವತಿ ನಾಯರ್ ನಡುವೆ ಇದ್ದಂತಹ ಪ್ರೇಮ ಸಂಬಂಧದ ವಿಚಾರವನ್ನು ಅವರು ಅಲ್ಲಗಳೆದಿದ್ದಾರೆ. ಪುನೀತ್ ರಾಜಕುಮಾರ್ ಅವರಂತೆ ಅಣ್ಣಾವ್ರ ಕುಟುಂಬಕ್ಕೆ ಕೀರ್ತಿ ಹಾಗೂ ಯಶಸ್ಸನ್ನು ವಿನಯ್ ರಾಜಕುಮಾರ್ ರವರು ತಂದುಕೊಡಲಿ ಎಂಬುದೇ ಎಲ್ಲ ಕನ್ನಡಿಗರ ಹಾರೈಕೆ.