ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಒಂದಾಗಿರುವ ನಿಖಿಲ್ ಹಾಗೂ ರೇವತಿ ರವರ ನಿಜವಾದ ವಯಸ್ಸಿನ ಅಂತರ ಎಷ್ಟು ಗೊತ್ತೇ??

683

ನಮಸ್ಕಾರ ಸ್ನೇಹಿತರೇ ಚಂದನವನದ ಕ್ಯೂಟ್ ಜೋಡಿಗಳಲ್ಲಿ ನಿಖಿಲ್ ಕುಮಾರ್ ಹಾಗೂ ರೇವತಿ ಕೂಡ ಒಬ್ಬರು. ಇವರಿಬ್ಬರ ಕುರಿತಂತೆ ಹೇಳುವಾಗ ರಾಜಕೀಯ ಕ್ಷೇತ್ರದ ಯಾವುದೇ ವಿಚಾರಗಳು ಕೂಡ ಬರುವುದಿಲ್ಲ. ಯಾಕೆಂದರೆ ಜನರು ಈ ಜೋಡಿಯನ್ನು ರಾಜಕೀಯ ಹಾಗೂ ಸಿನಿಮಾರಂಗ ಗಳಿಗಿಂತ ಮಿಗಿಲಾಗಿ ಇಷ್ಟಪಡುತ್ತಾರೆ.

ಕಳೆದ ಲಾಕ್ಡೌನ್ ನಲ್ಲಿ ನಿಖಿಲ್ ಕುಮಾರ್ ಹಾಗೂ ರೇವತಿ ಅವರು ಮದುವೆಯಾಗುವುದರ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಲಾಕ್ ಡೌನ್ ಆದ ಕೂಡಲೇ ಇವರಿಬ್ಬರು ರಾಮನಗರದ ಫಾರ್ಮ್ ಹೌಸ್ ನಲ್ಲಿ ಸಂಸಾರವನ್ನು ನಡೆಸುತ್ತಾರೆ. ಜೊತೆಯಾಗಿ ಕೃಷಿ ಮಾಡುವುದು ಹಾಗೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯವನ್ನು ಕಳೆಯುವುದು ಕೂಡ ಇವರಿಬ್ಬರ ಪ್ರೀತಿಯನ್ನು ಹೆಚ್ಚಿಸಲು ಕಾರಣವಾಯಿತು. ಇನ್ನು ಇವರಿಬ್ಬರ ಜೊತೆಯಾಗಿರುವ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆಯನ್ನು ಪಡೆದು ವೈರಲ್ ಆಗಿವೆ.

ಇನ್ನು ಇತ್ತೀಚಿಗಷ್ಟೇ ರೇವತಿ ಅವರು ಗಂಡುಮಗುವಿಗೆ ಜನ್ಮ ನೀಡಿರುವುದು ಎಲ್ಲರಿಗೂ ಕೂಡ ಗೊತ್ತಿರುವ ವಿಚಾರವಾಗಿದೆ. ಇನ್ನು ನಿಖಿಲ್ ಕುಮಾರ್ ಅವರ ಜವಾಬ್ದಾರಿ ಕೂಡ ಇದರಿಂದ ಹೆಚ್ಚಿದೆ. ಇನ್ನು ಹಲವಾರು ಜನರಿಗೆ ನಿಖಿಲ್ ಕುಮಾರ್ ಹಾಗೂ ರೇವತಿ ಅವರ ನಡುವಿನ ವಯಸ್ಸಿನ ಅಂತರದ ಕುರಿತಂತೆ ತಿಳಿಯಬೇಕೆಂಬ ಕುತೂಹಲವಿದೆ. ಅವರ ಕುತೂಹಲವನ್ನು ಇಂದಿನ ಲೇಖನಿಯಲ್ಲಿ ಬಗೆಹರಿಸೋಣ. ನಿಖಿಲ್ ಕುಮಾರ್ ರವರು ರೇವತಿ ಅವರಿಗಿಂತ ವಯಸ್ಸಿನಲ್ಲಿ ನಾಲ್ಕು ವರ್ಷ ದೊಡ್ಡವರು. ನಿಖಿಲ್ ಕುಮಾರ್ ಅವರ ವಯಸ್ಸು 31 ಆದರೆ ರೇವತಿ ಅವರ ವಯಸ್ಸು 27. ಇನ್ನು ಸದ್ಯಕ್ಕೆ ನಿಖಿಲ್ ಕುಮಾರ್ ರವರು ನಟನೆ ಹಾಗೂ ರಾಜಕೀಯ ಎರಡು ಕ್ಷೇತ್ರದಲ್ಲಿ ಕೂಡ ಸಾಕಷ್ಟು ಸಕ್ರಿಯರಾಗಿದ್ದು ಅಭಿಮಾನಿಗಳು ಅವರನ್ನು ರಾಜಕೀಯ ಕ್ಷೇತ್ರದಲ್ಲಿ ನೋಡಲು ಇಷ್ಟಪಡುತ್ತಿದ್ದಾರೆ.