ಕತ್ರಿನಾ ಒಬ್ಬರೇ ಅಲ್ಲಾ, ಮದುವೆಗೆ ದುಬಾರಿ ಲೆಹೆಂಗಾ ತೊಟ್ಟ ಸೆಲೆಬ್ರೆಟಿಗಳು ಯಾರ್ಯಾರು ಗೊತ್ತೇ?? ಒಬ್ಬೊರರು ತೊಟ್ಟ ಲೆಹೆಂಗಾ ಎಷ್ಟು ಲಕ್ಷಗಳು ಗೊತ್ತೇ??

459

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಮಂದಿಗೆ ಈಗಾಗಲೇ ಸಂತೋಷ ನೀಡುವ ವಿಚಾರವನ್ನು ನಿನ್ನೆ ರಾತ್ರಿಯಷ್ಟೆ ನಡೆದಿದೆ. ಸಾಕಷ್ಟು ಸಮಯ ಗಳಿಂದಲೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಗುಸುಗುಸು ಸುದ್ದಿ ಆಗಿದ್ದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆ ನಿನ್ನೆ ನಡೆದು ಹೋಗಿದೆ. ಈ ಕೆಲವು ಸಮಯಗಳ ಹಿಂದೆಯಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ನಡುವೆ ಪ್ರೇಮ ಸಂಬಂಧವಿದೆ ಎಂಬುದಾಗಿ ಸುದ್ದಿ ಹರಡಿತ್ತು. ಆದರೆ ಇಷ್ಟೊಂದು ಗಂಭೀರವಾಗಿ ಯಾರು ಕೂಡ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ.

ಆದರೆ ನಿನ್ನೆ ನಡೆದ ದಿಡೀರ್ ಮದುವೆ ಇದಕ್ಕೆ ಸಾಕ್ಷಿಯಾಗಿದೆ. ಅದೇನೇ ಇರಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದು ಬಾಲಿವುಡ್ ಮಂದಿಗೆ ಹಾಗೂ ಅವರ ಅಭಿಮಾನಿಗಳಿಗೆ ಸಾಕಷ್ಟು ಸಂತೋಷವನ್ನು ಉಂಟು ಮಾಡಿದೆ. ಇನ್ನು ನಿನ್ನೆ ರಾಜಸ್ಥಾನದ ಕೋಟೆಯೊಂದರಲ್ಲಿ ನಡೆದಂತಹ ಈ ಮದುವೆ ಸಾಕಷ್ಟು ಭದ್ರತೆಯಲ್ಲಿ ನಡೆದಿತ್ತು. ಆದರೂ ಕೂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಸೆಲೆಬ್ರೆಟಿಗಳ ಮದುವೆ ಎಂದರೆ ಅದರಲ್ಲಿ ಮುಖ್ಯವಾಗಿ ಚರ್ಚೆಗೆ ಬರುವ ವಿಷಯವೆಂದರೆ ಮದುಮಗಳು ಹುಟ್ಟಿರುವ ವಸ್ತ್ರದ ಕುರಿತಂತೆ ಹಾಗೂ ಅದರ ಬೆಲೆಯ ಕುರಿತಂತೆ. ಇನ್ನು ನಿನ್ನೆ ಮದುವೆಗೆ ಕತ್ರಿನಾ ಕೈಫ್ ರವರು ಸಬ್ಯಸಾಚಿ ರವರು ಡಿಸೈನ್ ಮಾಡಿರುವ ಕೆಂಪು ಹಾಗೂ ಗೋಲ್ಡನ್ ಕಲರ್ ಲೆಹೆಂಗಾ ವನ್ನು ಧರಿಸಿದ್ದರು. ಇನ್ನು ಲೆಹಂಗಾ ದ ಬೆಲೆ ಬರೋಬ್ಬರಿ 17 ಲಕ್ಷ ರೂಪಾಯಿ. ಇನ್ನು ಈ ಮದುವೆಯಲ್ಲಿ ಕತ್ರಿನಾ ಕೈಫ್ ರವರು ಧರಿಸಿರುವ ಪ್ಲಾಟಿನಮ್ ಉಂಗುರದ ಬೆಲೆ ಬರೋಬ್ಬರಿ 7.4 ಲಕ್ಷ ರೂಪಾಯಿ. ಇದೇ ದುಬಾರಿ ಮದುವೆಗಳ ಸಾಲಿನಲ್ಲಿ ನಮ್ಮ ಭಾರತೀಯ ಚಿತ್ರರಂಗದ ಇನ್ನೂ ಕೆಲವು ಸೆಲೆಬ್ರಿಟಿ ನಟಿಯರು ಬರುತ್ತಾರೆ ಅವರ ಕುರಿತಂತೆ ಕೂಡ ನಾವು ಹೇಳಲಿದ್ದೇವೆ.

ದೀಪಿಕಾ ಪಡುಕೋಣೆ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರ ಮದುವೆ ಕೂಡ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಇದರಲ್ಲಿ ಕೂಡ ಸಬ್ಯಸಾಚಿ ಡಿಸೈನ್ ಮಾಡಿದ್ದಾರೆಂದು ಹಾಗೂ ಗೋಲ್ಡನ್ ಕಲರ್ ಲೆಹೆಂಗಾ ವನ್ನು ದೀಪಿಕಾ ಪಡುಕೋಣೆ ಧರಿಸಿ ಮಿಂಚಿದ್ದರು. ಇದರ ಬೆಲೆ ಬರೋಬ್ಬರಿ 12 ಲಕ್ಷ ರೂಪಾಯಿ.

ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಮೂಲದ ನಿಕ್ ಜೋನಸ್ ರವರನ್ನು ಪ್ರಿಯಾಂಕ ಚೋಪ್ರಾ ರವರು ಕೂಡ ರಾಜಸ್ಥಾನದಲ್ಲಿ ಮದುವೆಯಾಗಿದ್ದರು. ಇನ್ನು ಇಲ್ಲಿ ಕೂಡ ಸಬ್ಯಸಾಚಿ ಡಿಸೈನ್ ಮಾಡಿರುವ ಕೆಂಪು ಕಲರ್ ಲೆಹೆಂಗಾ ವನ್ನು ಪ್ರಿಯಾಂಕ ಚೋಪ್ರಾ ರವರು ಉಟ್ಟಿದ್ದರು. ಇದರ ಬೆಲೆ ಬರೋಬ್ಬರಿ 18 ಲಕ್ಷ ರೂಪಾಯಿ ಆಗಿತ್ತು.

ಅನುಷ್ಕಾ ಶರ್ಮಾ ಅನುಷ್ಕ ಶರ್ಮ ಹಾಗೂ ವಿರಾಟ್ ಕೊಹ್ಲಿ ರವರ ಮದುವೆ ಇಟಲಿಯಲ್ಲಿ ನಡೆದಿತ್ತು. ಇದರಲ್ಲಿ ಕೂಡ ಅನುಷ್ಕಾ ಶರ್ಮಾ ರವರು ಪೇಸ್ಟಲ್ ಬಣ್ಣದ ಫ್ಲೋರಲ್ ಡಿಸೈನ್ ಉಳ್ಳ ಲೆಹೆಂಗಾ ವನ್ನು ಧರಿಸಿದ್ದರು ಇದರ ಬೆಲೆ ಬರೋಬ್ಬರಿ 8.75 ಲಕ್ಷ ರೂಪಾಯಿ. ಇದನ್ನು ಕೂಡ ಸಬ್ಯಸಾಚಿ ರವರೆ ಡಿಸೈನ್ ಮಾಡಿದ್ದರು. ಬಾಲಿವುಡ್ ಸೆಲೆಬ್ರಿಟಿಗಳ ಲೆಹಂಗಾ ಬೆಲೆ ಕೇಳಿದರೆ ಇಷ್ಟೊಂದು ದುಬಾರಿಯಾಗಿದೆ ಇನ್ನು ಮದುವೆ ಖರ್ಚು ಎಷ್ಟಿರಬೇಡ ಊಹಿಸಿ.