ಸ್ತ್ರೀಯರಿಗೆ ಎಡಗಣ್ಣು, ಆದರೆ ಪುರುಷರಿಗೆ ಬಲಗಣ್ಣು ಅದುರುವುದರ ಅರ್ಥವೇನು ಗೊತ್ತೇ?? ಇದರಿಂದ ಏನಾಗುತ್ತೆ ನೋಡಿ.

251

ನಮಸ್ಕಾರ ಸ್ನೇಹಿತರೇ ಪ್ರಕೃತಿ ಎನ್ನುವುದು ಹಲವಾರು ವಿಚಿತ್ರ ಹಾಗೂ ವಿಸ್ಮಯಗಳ ಆಗರವಾಗಿದೆ. ಒಲಿದರೆ ಹೇಗೆ ಮನುಷ್ಯನಿಗೆ ಲಾಭ ಸಿಗುತ್ತದೆಯೋ ಅದೇ ರೀತಿ ಮುನಿದರೆ ಕೂಡ ಪ್ರಕೃತಿಯಿಂದ ಮನುಷ್ಯಜೀವಿ ಸಾಕಷ್ಟು ನಷ್ಟ ಕಷ್ಟಗಳನ್ನು ಅನುಭವಿಸುತ್ತಾನೆ. ಇನ್ನು ನಮ್ಮ ಸುತ್ತಮುತ್ತಲು ಹಾಗೂ ನಮ್ಮಲ್ಲಿ ನಡೆಯುವ ಹಲವಾರು ಬದಲಾವಣೆ ಹಾಗೂ ಘಟನೆಗಳು ಕೂಡ ಸಾಕಷ್ಟು ಒಳಾರ್ಥ ಮರ್ಮಗಳನ್ನು ಕೂಡ ಹೊಂದಿರುತ್ತದೆ. ಇಂದಿನ ವಿಚಾರದಲ್ಲಿ ಕಣ್ಣು ಅದುರುವುದರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಜ್ಯೋತಿಷ್ಯ ಕವಾಗಿ ಇದರ ಕುರಿತಂತೆ ಹಲವಾರು ಉಲ್ಲೇಖಗಳನ್ನು ನಾವು ನೋಡಬಹುದಾಗಿದೆ. ಹಾಗಿದ್ದರೆ ಇದಕ್ಕೆ ಕಾರಣಗಳೇನು ಎಂಬುದರ ಕುರಿತಂತೆ ನಾವು ಸಂಪೂರ್ಣ ವಿವರವಾಗಿ ತಿಳಿಯಲು ಪ್ರಯತ್ನಿಸೋಣ ಬನ್ನಿ. ನಿಮಗೆಲ್ಲರಿಗೂ ತಿಳಿದಿರುವಂತೆ ಪಂಚೇಂದ್ರಿಯಗಳು ಮನುಷ್ಯ ಜೀವಿಯ ಜೀವನದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದರಲ್ಲಿಯೂ ಕಣ್ಣು ಈ ಸುಂದರ ಜಗತ್ತನ್ನು ಆಸ್ವಾದಿಸಲು ನಮಗೆ ಇರುವಂತಹ ಒಂದೇ ಒಂದು ಅಂಗ. ಇಂದಿನ ವಿಚಾರದಲ್ಲಿ ಕಣ್ಣು ಅದುರುವುದು ಯಾರಿಗೆ ಶುಭ ಯಾರಿಗೆ ಅಶುಭ ಎಂಬುದರ ಕುರಿತಂತೆ ಹೇಳಲು ಹೊರಟಿದ್ದೇವೆ.

ಮಹಿಳೆಯರಿಗೆ ಎಡಗಣ್ಣು ಅದುರಿದರೆ ಅದು ಅವರಿಗೆ ಶುಭ ಸೂಚಕ ಎಂದು ಅರ್ಥ. ಅವರಿಗೆ ಸದ್ಯದಲ್ಲೇ ಶುಭ ವಾರ್ತೆ ಕೇಳಿ ಬರಲಿದೆ ಎಂದು ಅಂದುಕೊಳ್ಳಬಹುದು. ಬಲಗಣ್ಣು ಅದುರಿದರೆ ಅದು ಅವರಿಗೆ ಮುಂದಿನ ಅನಾಹುತದ ಮುನ್ಸೂಚನೆಯಂದು ಹೇಳಬಹುದಾಗಿದೆ. ಪುರುಷರಿಗೆ ಬಲಗಣ್ಣು ಅದುರಿದರೆ ವೈವಾಹಿಕ ಹಾಗು ವೃತ್ತಿಜೀವನದಲ್ಲಿ ಮತ್ತು ಮುಂತಾದ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುತ್ತಾರೆ ಎಂಬ ಅರ್ಥವಿದೆ. ಒಂದು ವೇಳೆ ಪುರುಷರಿಗೆ ಎಡಗಣ್ಣು ಅದುರಿದರೆ ಅವರು ಹಿಡಿಯಲು ಹೊರಟಿರುವ ಹೆಜ್ಜೆಯಲ್ಲಿ ಖಂಡಿತವಾಗಿಯೂ ಸೋಲನ್ನು ಅನುಭವಿಸುತ್ತಾರೆ ಎಂಬ ಮುನ್ಸೂಚನೆಯಾಗಿದೆ.