2021 ರ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಟಾಪ್ 10 ಕನ್ನಡ ಚಿತ್ರಗಳು ಯಾರ್ಯಾರು ಗೊತ್ತೇ?? ಈ ವರ್ಷದ ಕಿಂಗ್ ಯಾರು ಗೊತ್ತೇ??

2,042

ನಮಸ್ಕಾರ ಸ್ನೇಹಿತರೇ 2020 ರಲ್ಲಿ ಕನ್ನಡ ಚಿತ್ರರಂಗ ಎನ್ನುವುದು ಸಾಕಷ್ಟು ಸ್ತಬ್ಧವಾಗಿತ್ತು. ನಿಂತ ನೀರಿನಂತಿದ್ದ ಕನ್ನಡ ಚಿತ್ರರಂಗಕ್ಕೆ ಚಾಲನೆ ನೀಡಿದ್ದು 2021. ಹಾಗಿದ್ದರೆ ಈ ವರ್ಷದಲ್ಲಿ ಬಾಕ್ಸಾಫೀಸ್ ನಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಗಳಿಸಿದಂತಹ ಚಿತ್ರಗಳು ಯಾವುವು ಎಂಬುದನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ ತಪ್ಪದೆ ಈ ಲೇಖನಿಯನ್ನು ಕೊನೆಯವರೆಗೂ ಓದಿ.

10 ರತ್ನನ್ ಪ್ರಪಂಚ ಡಾಲಿ ಧನಂಜಯ್ ನಾಯಕನಟನಾಗಿ ಹಾಗೂ ರೆಬ ಮೋನಿಕಾ ನಾಯಕಿಯಾಗಿ ನಟಿಸಿರುವ ರತ್ನನ್ ಪ್ರಪಂಚ ಚಿತ್ರ ಓಟಿಟಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದರೂ ಕೂಡ ಉತ್ತಮ ರೆಸ್ಪಾನ್ಸ್ ಪಡೆಯಿತು. ಹಾಗೂ ಬರೋಬ್ಬರಿ 15 ಕೋಟಿ ರೂಪಾಯಿ ಗಳಿಸಿಕೊಂಡಿದೆ.

9 ಸಖತ್ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಸಖತ್ ಚಿತ್ರ ಇತ್ತೀಚಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಇನ್ನು ಕೂಡ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇನ್ನು ಇದು ಈಗಾಗಲೇ ಚಿತ್ರಮಂದಿರಗಳಲ್ಲಿ 25 ಕೋಟಿಗೂ ಅಧಿಕ ಕಲೆಕ್ಷನ್ ಕಂಡಿದೆ.

8 ಗರುಡ ಗಮನ ವೃಷಭ ವಾಹನ ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ ಕರಾವಳಿ ಹಿನ್ನೆಲೆಯುಳ್ಳಂತಹ ಗರುಡ ಗಮನ ವೃಷಭ ವಾಹನ ಚಿತ್ರ ಈಗಾಗಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಇನ್ನು ಈಗಾಗಲೇ 35 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ.

7 ಮದಗಜ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಆಶಿಕ ರಂಗನಾಥ್ ಪ್ರಮುಖ ನಟನೆಯಲ್ಲಿ ಮೂಡಿಬಂದಿರುವ ಮದಗಜ ಚಿತ್ರ ಬಿಡುಗಡೆಯಾಗಿ ಈಗಾಗಲೇ ಬಾಕ್ಸಾಫೀಸ್ ನಲ್ಲಿ 38 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

6 ಸಲಗ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಡಾಲಿ ಧನಂಜಯ್ ಹಾಗೂ ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪಕ್ಕಾ ಮಾಸ್ ಸಿನಿಮಾ ವಾಗಿರುವ ಸಲಗ ಚಿತ್ರ ಬಾಕ್ಸಾಫೀಸ್ ನಲ್ಲಿ ಭರ್ಜರಿಯಾಗಿ 45 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿತ್ತು.

5 ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಸೂಪರ್ ಹಿಟ್ ಯುವರತ್ನ ಚಿತ್ರ ಮೊದಲ ಎರಡು ವಾರಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಂಡ ನಂತರ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವನ್ನು ಕಂಡಿತ್ತು. ಇನ್ನು ಇದು ಬರೋಬ್ಬರಿ 55 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

4 ಭಜರಂಗಿ 2 ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಭಜರಂಗಿ 2 ಚಿತ್ರ ಫ್ಯಾಂಟಸಿ ಥ್ರಿಲ್ಲರ್ ವಿಭಾಗದಲ್ಲಿ ಎಲ್ಲಾ ವಿಧದ ಪ್ರೇಕ್ಷಕರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 60 ಕೋಟಿ ಗಳಿಸಿದೆ.

3 ಪೊಗರು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ನಲ್ಲಿ ನಂದಕಿಶೋರ ನಿರ್ದೇಶನದಲ್ಲಿ ಮೂಡಿ ಬಂದಿರುವ ಪೊಗರು ಚಿತ್ರ ಕರಾಬು ಹಾಡಿನ ಮೂಲಕ ವಲ್ಡ್ ಫೇಮಸ್ ಆಗಿತ್ತು. ಇನ್ನು ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

2 ಕೋಟಿಗೊಬ್ಬ 3 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಚಿತ್ರ ಲೇಟಾಗಿ ಬಿಡುಗಡೆಯಾದರೂ ಕೂಡ ಲೇಟೆಸ್ಟ್ ಆಗಿ ಬಾಕ್ಸಾಫೀಸ್ ಕಲೆಕ್ಷನ್ ರೆಕಾರ್ಡ್ ಮಾಡಿದೆ. ಕೋಟಿಗೊಬ್ಬ 3 ಚಿತ್ರ ಬಾಕ್ಸಾಫೀಸ್ ನಲ್ಲಿ 75 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದೆ.

1 ರಾಬರ್ಟ್ ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಈ ವರ್ಷದ ಸೂಪರ್ ಹಿಟ್ ಚಿತ್ರ ರಾಬರ್ಟ್ ಬಾಕ್ಸಾಫೀಸ್ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಾಗೂ 2021 ವರ್ಷದ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಕನ್ನಡ ಚಿತ್ರದ ಹಿರಿಮೆಗೆ ಪಾತ್ರವಾಗಿದೆ.