ಪುನೀತ್ ರವರು ಖರ್ಚಿಗಾಗಿ ಧೃತಿ ರವರು ವಿದೇಶದಲ್ಲಿ ಇರುವಾಗ ಕಳುಹಿಸುತ್ತಿದ್ದ ಹಣವನ್ನು ಏನು ಮಾಡಿದ್ದಾರೆ ಗೊತ್ತೇ??

230

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನ್ನೆಲ್ಲಾ ದೈಹಿಕವಾಗಿ ಆಗಲಿ ಬಾರದ ಲೋಕದತ್ತ ಹೋದರು ಕೂಡ ಅವರು ಮಾಡಿರುವ ಸಮಾಜ ಸೇವೆಗಳ ಮೂಲಕ ಇಂದಿಗೂ ಕೂಡ ಪ್ರತಿಯೊಂದು ಕಣಕಣದಲ್ಲೂ ಕೂಡ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 29ರಂದು ನಮ್ಮನ್ನು ಅಕಾಲಿಕವಾಗಿ ಹೋಗುತ್ತಾರೆ ಎಂಬ ಕನಸನ್ನು ಕೂಡ ಒಬ್ಬ ಕನ್ನಡಿಗನು ಕೂಡ ಕಂಡಿರಲಿಲ್ಲ.

ಇನ್ನು ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳು ದೃತಿ ಅಮೆರಿಕದಲ್ಲಿ ಹಾಗೂ ಎರಡನೇ ಮಗಳು ವಂದಿತಾ ಬೆಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ರವರು ತಮ್ಮ ಇಬ್ಬರು ಮಕ್ಕಳನ್ನು ಎಷ್ಟು ಪ್ರೀತಿಯಿಂದ ಬೆಳೆಸಿದ್ದರೋ ಅಷ್ಟೇ ಶಿಸ್ತಿನಿಂದ ಕೂಡ ಬೆಳೆಸಿದ್ದರು. ಇನ್ನು ಪುನೀತ್ ರಾಜಕುಮಾರ್ ಅವರು ತಮ್ಮ ದೊಡ್ಡ ಮಗಳಾಗಿರುವ ದೃತಿ ಅವರಿಗೆ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕಾದರೆ ಖರ್ಚಿಗೆಂದು ಹಣವನ್ನು ಕಳುಹಿಸಿಕೊಡುತ್ತಿದ್ದರು.

ಶ್ರೀಮಂತರ ಮನೆ ಹೆಣ್ಣುಮಕ್ಕಳೆಂದರೆ ಕೊಟ್ಟ ಹಣದಿಂದ ತಮ್ಮ ಮನೋರಂಜನೆ ಹಾಗೂ ಮಸ್ತಿಗಾಗಿ ಹಣವನ್ನು ಖರ್ಚು ಮಾಡಿರುವುದು ನೀವು ಕೇಳಿರುತ್ತೀರಿ. ಆದರೆ ದೃತಿ ಈ ಹಣವನ್ನು ಉಪಯೋಗಿಸಿರುವ ರೀತಿ ನೀವು ಖಂಡಿತವಾಗಿಯೂ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಪುನೀತ್ ರಾಜಕುಮಾರ್ ರವರ ದೊಡ್ಡ ಮಗಳಾಗಿರುವ ದೃತಿ ಅವರು ಅಪ್ಪ ನೀಡಿರುವ ಹಣವನ್ನು ಒಟ್ಟುಗೂಡಿಸಿ ಅಪ್ಪ ನೋಡಿಕೊಳ್ಳುತ್ತಿದ್ದ ಶಕ್ತಿಧಾಮದ ಅನಾಥ ಮಕ್ಕಳ ಏಳಿಗೆಗಾಗಿ ಹಣವನ್ನು ಬಳಸಿಕೊಂಡಿದ್ದಾರೆ. ಇದು ಖಂಡಿತವಾಗಿಯೂ ಎಲ್ಲರೂ ಮೆಚ್ಚಲೇಬೇಕಾದಂತಹ ವಿಚಾರ. ಪುನೀತ್ ರಾಜಕುಮಾರ್ ಅವರು ನೋಡಿಕೊಳ್ಳುತ್ತಿದ್ದ ಎಲ್ಲಾ ಜನಸೇವೆ ಕಾರ್ಯಗಳನ್ನು ಅವರ ಮಕ್ಕಳಾಗಿರುವ ದೃತಿ ಹಾಗೂ ವಂದಿತ ಮತ್ತು ಪತ್ನಿಯಾಗಿರುವ ಅಶ್ವಿನಿ ಅವರು ನಡೆಸಿಕೊಂಡು ಹೋಗಲಿ ಎನ್ನುವುದೇ ಎಲ್ಲರ ಆಶಯ.