ಕೊಹ್ಲಿ ವಿರುದ್ಧ ಪ್ಲಾನ್ ಮಾಡಿದ್ದ, ದ್ರಾವಿಡ್, ಗಂಗೂಲಿ ಹಾಗೂ ಕುಂಬ್ಳೆ ಗೆ ಶಾಕ್ ನೀಡಲು ವಿರಾಟ್ ತಯಾರಿ. ಇದೀಗ ಅಸಲಿ ಆಟ ಆರಂಭ. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕ್ಯಾಪ್ಟನ್ಸಿಯಿಂದ ಕೆಳಗಿಸಿ ವಿರಾಟ್ ಕೊಹ್ಲಿಗೆ ಶಾಕ್ ನೀಡಿದ್ದ ಬಿಸಿಸಿಐ ಗೆ ವಿರಾಟ ಸ್ವರೂಪ ತೋರಿಸಲಿದ್ದಾರಾ ಕೊಹ್ಲಿ?? ಹೌದು ಸ್ನೇಹಿತರೇ ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಏಕದಿನ ಪಂದ್ಯದ ನಾಯಕತ್ವದಿಂದ ಕೆಳಗಿಳಿಯುವಂತೆ ವಿರಾಟ್ ಕೊಹ್ಲಿ ಅವರಿಗೆ ಮನವಿ ಮಾಡಿತ್ತು. ಆದರೆ ಇದಕ್ಕೆ ವಿರಾಟ್ ಕೊಹ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ.

ಬಿಸಿಸಿಐ ಈ ಕ್ಯಾಪ್ಟನ್ಸಿ ಸ್ಥಾನವನ್ನು ಬಿಟ್ಟುಕೊಡಲು ವಿರಾಟ್ ಕೊಹ್ಲಿ ಅವರಿಗೆ ನಲವತ್ತೆಂಟು ಗಂಟೆಗಳ ಕಾಲಮಿತಿಯನ್ನು ಕೂಡ ನೀಡಿದ್ದರು ಕೂಡ ಕೊಹ್ಲಿ ಅವರು ಇದಕ್ಕೆ ಯಾವುದೇ ರೀತಿಯ ರಿಯಾಕ್ಟ್ ಮಾಡದ ಕಾರಣ ಬಿಸಿಸಿಐ ಆಯ್ಕೆ ಸಮಿತಿಯೇ ನೇರವಾಗಿ ವಿರಾಟ್ ಕೊಹ್ಲಿ ಅವರನ್ನು ಏಕದಿನ ಕ್ರಿಕೆಟ್ ನಾಯಕತ್ವದಿಂದ ತೆಗೆದಾಕಿ ಅವರ ಸ್ಥಾನಕ್ಕೆ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿ ಘೋಷಣೆ ಮಾಡಿತು.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರು ಟಿ-ಟ್ವೆಂಟಿ ಕ್ರಿಕೆಟ್ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ತಿಳಿಸಿದಾಗ ಬಿಸಿಸಿಐ ನೀವು ರಾಜೀನಾಮೆ ನೀಡಬೇಡಿ ಎಂದು ಮನವಿ ಮಾಡಿತ್ತು. ಆದರೂ ಕೂಗ ವಿರಾಟ್ ಕೊಹ್ಲಿ ಅವರು ನಿರಂತರ ಪಂದ್ಯಗಳ ಒತ್ತಡದಿಂದ ಐಪಿಎಲ್ ಕ್ರಿಕೆಟ್ ನ ಆರ್ಸಿಬಿ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಅಂತೆಯೇ ಟಿ – ಟ್ವೆಂಟಿ ಕ್ರಿಕೆಟ್ ಕ್ಯಾಪ್ಟನ್ಸಿಯನ್ನು ಕೂಡ ರಿಸೈನ್ ಮಾಡಿದರು. ಇನ್ಮುಂದೆ ನಾನು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಮಾತ್ರ ಕ್ಯಾಪ್ಟನ್ ಜವಾಬ್ದಾರಿ ಹೊರುತ್ತೇನೆ ಎಂದೂ ಕೂಡ ಸ್ಪಷ್ಟನೆ ನೀಡಿದ್ದರು.ಆದರೆ ಕೊಹ್ಲಿ ಸ್ವತಃ ತಾವೇ ಏಕದಿನ ಕ್ರಿಕೆಟ್ ಪಂದ್ಯಗಳಿಗೆ ನಾನೇ ಕ್ಯಾಪ್ಟನ್ ಆಗಿರುತ್ತೇನೆ ಎಂದು ಹೇಳಿದ ನಂತರವೂ ಕೂಡ ಬಿಸಿಸಿಐ ಆಯ್ಕೆ ಸಮಿತಿ ಕೊಹ್ಲಿ ಅವರನ್ನ ಏಕದಿನ ಪಂದ್ಯ ನಾಯಕ ಸ್ಥಾನದಿಂದ ಕಿಕ್ ಔಟ್ ಮಾಡಿದೆ.
ಬಿಸಿಸಿಐ ಅವರ ಈ ನಿರ್ಧಾರ ವಿರಾಟ್ ಕೊಹ್ಲಿ ಅವರಿಗೆ ಭಾರಿ ಮುಖಭಂಗವಾದಂತಾಗಿದೆ. ಹೀಗಾಗಿ ಇದರಿಂದ ಅಸಮಾಧಾನಗೊಂಡಿರುವ ವಿರಾಟ್ ಕೊಹ್ಲಿ ಇದೇ ಡಿಸೆಂಬರ್ 26 ರಿಂದ ಆರಂಭವಾಗುವ ಸೌತ್ ಆಫ್ರಿಕಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಟವಾಡುತ್ತಾರಾ ಅಥವಾ ಈ ಏಕದಿನ ಕ್ರಿಕೆಟ್ ಪಂದ್ಯ ಮುಗಿದ ಬಳಿಕ ಕ್ರಿಕೆಟ್ ನಿಂದ ಅಂತರ ಕಾಯ್ದುಕೊಳ್ಳುತ್ತಾರಾ ಎಂಬೆಲ್ಲಾ ಪ್ರಶ್ನೆಗಳು ಕೇಳಿ ಬರುತ್ತಿವೆ.

ಇನ್ನು ವಿರಾಟ್ ಕೊಹ್ಲಿ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸುವುದಕ್ಕೆ ಬಿಸಿಸಿಐ ಆಯ್ಕೆ ಸಮಿತಿಯ ಕೆಲವು ಸದಸ್ಯರು ಕೂಡ ಅಸಮ್ಮತಿ ಸೂಚಿಸಲಾಗಿತ್ತಂತೆ. ಒಟ್ಟಾರೆಯಾಗಿ ಏಕದಿನ ಕ್ರಿಕೆಟ್ ಪಂದ್ಯದಿಂದ ವಿರಾಟ್ ಕೊಹ್ಲಿ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿರುವುದು ಅವರಿಗೆ ಬೇಸರ ತರಿಸಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.