ಅಪ್ಪು ಕಳೆದುಕೊಂಡ ನೋವಿನಿಂದ ಹೊರಬಂದು ರಾಜಿಯಾಗಲು ಮುಂದಾದ ರಾಘಣ್ಣ. ಚೇತರಿಸಿಕೊಳ್ಳುತ್ತಿದ್ದೆ ದೊಡ್ಮನೆ ಕುಟುಂಬ, ವಿಷಯ ಏನು ಗೊತ್ತೇ??

171

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಕಳೆದುಕೊಂಡು ಹಲವಾರು ಸಮಯಗಳೇ ಕಳೆದುಹೋದರೂ ಕೂಡ ಇನ್ನು ಕೂಡ ನಾವು ಮಾತ್ರವಲ್ಲದೆ ಕರ್ನಾಟಕದ ಯಾವೊಬ್ಬ ಕನ್ನಡಿಗನು ಕೂಡ ಆ ಗುಂಗಿನಿಂದ ಇನ್ನೂ ಕೂಡ ಹೊರಬಂದಿಲ್ಲ. ಇನ್ನು ಅಪ್ಪು ಅವರನ್ನು ಕಳೆದುಕೊಂಡಾಗ ದೊಡ್ಡ ಮನೆಯವರನ್ನು ಸಂತೈಸಿದವರು ನಮ್ಮ ರಾಘವೇಂದ್ರ ರಾಜಕುಮಾರ್ ರವರು.

ಸ್ವತಹ ರಾಘಣ್ಣ ನವರು ಕೂಡ ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದರು ಕೂಡ ಮನೆಯವರೆಲ್ಲರೂ ಧೈರ್ಯವಾಗಿರುವಂತೆ ಸಮಾಧಾನಪಡಿಸಿದ್ದು ಅವರೇ. ಇನ್ನು ಈಗಾಗಲೇ ಪುನೀತ್ ರಾಜಕುಮಾರ್ ರವರ 11ನೇ ಹಾಗೂ 12 ದಿನದ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದ್ದವು. ಪ್ರತಿಯೊಂದು ಹೆಜ್ಜೆಯಲ್ಲಿ ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಬೆಂಬಲವಾಗಿ ನಿಂತಿದ್ದು ರಾಘಣ್ಣನವರು. ಇನ್ನೀಗ ಪುನೀತ್ ರವರು ಮರಣ ಹೊಂದಿದ ಮೇಲೆ ರಾಜಿ ಆಗಲು ಹೊರಟಿದ್ದಾರೆ ರಾಘಣ್ಣನವರು.

ಇದೇನಪ್ಪ ರಾಜಿ ಆಗೋಕೆ ಹೊರಟಿದ್ದಾರೆ ಏನು ವಿಷಯ ಅಂತ ಕನ್ಫ್ಯೂಸ್ ಆದ್ರಾ. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನದ ನಂತರ ಮೊದಲ ಬಾರಿಗೆ ರಾಜಿ ಎನ್ನುವ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ರವರ ನಟಿಸಲು ಹೊರಟಿದ್ದಾರೆ. ಇನ್ನು ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಪುನೀತ್ ರಾಜಕುಮಾರ್ ರವರು ಬಂದು ಕ್ಲಾಪ್ ಮಾಡಬೇಕಾಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಇನ್ನು ಚಿತ್ರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು ಕ್ಲಾಪ್ ಮಾಡಿದ್ದು ನಟಿ ಹರ್ಷಿಕಾ ಪೂಣಚ್ಚ ಕ್ಯಾಮರಾಕ್ಕೆ ಚಾಲನೆ ನೀಡಿದ್ದಾರೆ. ಇನ್ನು ಈ ಚಿತ್ರದಿಂದ ನನಗೆ ಒಳ್ಳೆಯ ಹೆಸರು ಅಥವಾ ಪ್ರಶಸ್ತಿ ಬಂದರೆ ನನ್ನ ಮೂರು ಹೆಣ್ಣು ಮಕ್ಕಳಿಗೆ ಅದನ್ನು ಅರ್ಪಿಸುತ್ತೇನೆ ಎಂಬುದಾಗಿ ರಾಘಣ್ಣ ಹೇಳಿದ್ದಾರೆ. ಇನ್ನು ಆ 3 ಹೆಣ್ಣುಮಕ್ಕಳು ಯಾರೆಂದರೆ ನಮ್ಮ ಪುನೀತ್ ರಾಜಕುಮಾರ್ ರವರ ಪತ್ನಿಯಾಗಿರುವ ಅಶ್ವಿನಿ ಮತ್ತು ಮಕ್ಕಳಾಗಿರುವ ವಂದಿತ ಹಾಗೂ ದೃತಿ.