ಮೊದಲ ವಾರದಲ್ಲಿಯೇ ಎಲ್ಲರ ಮನಗೆದ್ದಿದ್ದ ವಂಶಿಕ ಆನಂದ್, ಆದರೆ ಈ ವಾರ ಮಾಡಿರುವ ಕೆಲಸ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ ಎಂದು ಖಂಡಿತವಾಗಿಯೂ ತಪ್ಪಾಗಲಾರದು. ಪ್ರತಿಯೊಂದು ವಾಹಿನಿಗಳು ಕೂಡ ಸ್ಪರ್ಧೆಗೆ ಬಿದ್ದವರಂತೆ ಒಬ್ಬರಿಗಿಂತ ಒಬ್ಬರು ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರವನ್ನು ಮಾಡುತ್ತಿದ್ದಾರೆ. ಇನ್ನು ಮೊದಲು ಕೇವಲ ಕಿರುತೆರೆಯ ವಾಹಿನಿಗಳಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳೆಂದರೆ ಬಿಗ್ಬಾಸ್ ಹಾಡಿನ ಕಾರ್ಯಕ್ರಮ ಡ್ಯಾನ್ಸ್ ಕಾರ್ಯಕ್ರಮ ಹೀಗೆ ಕಾಮನ್ ಆಗಿತ್ತು. ಆದರೆ ಕಲರ್ಸ್ ಕನ್ನಡ ವಾಹಿನಿ ಇತ್ತೀಚಿನ ದಿನಗಳಲ್ಲಿ ವಿಶೇಷವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಲ್ಲಿ ತನ್ನ ವಿಶೇಷವಾದ ಪಾತ್ರವನ್ನು ವಹಿಸಿದೆ.
ಇದಕ್ಕೆ ದೊಡ್ಡ ಉದಾಹರಣೆ ಎಂಬಂತೆ ಜೋಡಿಗಳ ಕಾರ್ಯಕ್ರಮವಾಗಿದ್ದ ರಾಜ ರಾಣಿ ಹಾಗೂ ಈಗ ಅಮ್ಮ ಹಾಗೂ ಮಕ್ಕಳ ಸಂಬಂಧವನ್ನು ತಿಳಿಸುವಂತಹ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮವನ್ನು ನಾವು ಉದಾಹರಣೆಯಾಗಿ ತೆಗೆದುಕೊಳ್ಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತಿದೆ. ಕಾರ್ಯಕ್ರಮ ಪ್ರಾರಂಭವಾಗಿ ಎರಡು ವಾರಗಳಾದರೂ ಕೂಡ ಪ್ರೇಕ್ಷಕರು ಅತಿವೇಗವಾಗಿ ಈ ಕಾರ್ಯಕ್ರಮಕ್ಕೆ ಅಂಟಿಕೊಂಡು ಬಿಟ್ಟಿದ್ದಾರೆ. ಈಗಾಗಲೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳು ಹಾಗೂ ಅವರ ತಾಯಂದಿರ ವಿಚಾರದ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ.

ಇದರಲ್ಲಿ ಬಂದ ವಾರವೇ ಎಲ್ಲರ ಮನ ಗೆದ್ದವರು ಎಂದರೆ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಅವರ ಪುತ್ರಿ ವಂಶಿಕ. ಬಂದ ವಾರದಲ್ಲಿಯೇ ತನ್ನ ಲವಲವಿಕೆಯ ಮಾತುಗಳಿಂದ ಎಲ್ಲರ ಮುಖದಲ್ಲಿ ನಗುವನ್ನು ತರಿಸಿದ್ದಳು. ಈಗ ಈಕೆ ಎರಡನೇ ಮಾರ್ಗದಲ್ಲಿ ಮಾಡಿರುವ ಕೆಲಸವನ್ನು ನೋಡಿ ಎಲ್ಲರೂ ಬಾಯಿ ಮೇಲೆ ಬೆರಳನ್ನು ಇಟ್ಟಿದ್ದಾರೆ. ಹೌದು ಎರಡನೇ ವಾರದಲ್ಲಿ ನಡೆದಿರುವ ಟಾಸ್ಕ್ ನಲ್ಲಿ ವಂಶಿಕ ಹಾಗೂ ಆಕೆ ತಾಯಿ ಯಶಸ್ವಿನಿ ಅವರು ಆರ್ಯ ಹಾಗೂ ಆಕೆಯ ತಾಯಿ ಪುನೀತ ಆಚಾರ್ಯ ರವರ ಎದುರುಗಡೆ ಗೆದ್ದಿದ್ದರು. ಆಗ ವಂಶಿಕಾಳಿಗೆ ಚಾಕಲೇಟ್ ಪ್ರೈಸ್ ಆಗಿ ಸಿಕ್ಕಿತ್ತು. ಇದನ್ನು ನೋಡಿ ನನಗೂ ಕೂಡ ಪ್ರೈಸ್ ಬೇಕು ಎನ್ನುವುದಾಗಿ ಆರ್ಯ ಅಳುತ್ತಾಳೆ. ಆಗ ವಂಶಿಕ ಇದು ನನಗೂ ನಿನಗೂ ಇಬ್ಬರಿಗೂ ಸೇರಿಸಿ ಸಿಕ್ಕಿರುವ ಬಹುಮಾನ ಎಂದು ಆಕೆಯೊಂದಿಗೆ ಹಂಚಿಕೊಳ್ಳುತ್ತಾಳೆ. ಇದು ಎಲ್ಲರ ಮನ ಗೆಲ್ಲುವುದಕ್ಕೆ ಕಾರಣವಾಯಿತು.