ದುಡ್ಡು ಇದೆ ಅಂತ ಹೀಗೆನಾ ಮಾಡೋದು?? ಯಪ್ಪಾ ಕತ್ರಿನಾ ಮದುವೆ ತೊಟ್ಟಿದ್ದ ಲೆಹೆಂಗಾ ಬೆಲೆ ಎಷ್ಟು ಲಕ್ಷ ಗೊತ್ತೇ? ಬಾಲಿವುಡ್ ನಟಿಯರಲ್ಲಿ ದುಬಾರಿ ಲೆಹೆಂಗಾ.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಮದುವೆ ಸಮಾರಂಭಗಳು ಸಾಕಷ್ಟು ಜೋರಾಗಿ ನಡೆಯುತ್ತಿವೆ. ಈ ಸಾಲಿಗೆ ಈಗ ಬಾಲಿವುಡ್ ಚಿತ್ರರಂಗದ ಸೂಪರ್ ಜೋಡಿ ಗಳಾಗಿರುವ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಕೂಡ ಸೇರಿದ್ದಾರೆ. ಹೌದು ಗೆಳೆಯರೇ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರು ನಿನ್ನೆಯಷ್ಟೇ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.
ಇವರ ಮದುವೆ ಕುರಿತಂತೆ ಹಲವಾರು ಸಮಯಗಳಿಂದ ಕೂಡ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೂ ಅಧಿಕೃತವಾಗಿ ಇದರ ಬಗ್ಗೆ ಎಲ್ಲಿಯೂ ಕೂಡ ಇವರಿಬ್ಬರು ಮಾತನಾಡಿರಲಿಲ್ಲ. ಹೀಗಾಗಿ ಮದುವೆ ಕುರಿತಂತೆ ಜನಸಾಮಾನ್ಯರು ಯಾರೂ ಕೂಡ ಅಷ್ಟೊಂದು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ ನಿನ್ನೆ ರಾಜಸ್ಥಾನದ ಸಿಕ್ಸ್ ಸೆನ್ಸ್ ಪೋರ್ಟ್ ನಲ್ಲಿ ಇವರಿಬ್ಬರ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಮೇಲೆ ಎಲ್ಲರಿಗೂ ಕೂಡ ಇದರ ಕುರಿತಂತೆ ಅಧಿಕೃತವಾಗಿ ಮಾಹಿತಿ ಸಿಕ್ಕಿದೆ.

ಇನ್ನು ವಿಕ್ಕಿ ಕತ್ರಿನಾ ಮದುವೆ ಸಮಾರಂಭ ಸಾಕಷ್ಟು ದೊಡ್ಡ ಮಟ್ಟದಲ್ಲಿ ಅದ್ದೂರಿಯಾಗಿಯೇ ನಡೆದಿದೆ. ಇನ್ನು ಸೆಲೆಬ್ರಿಟಿಗಳ ಮದುವೆ ಎಂದಾಕ್ಷಣ ಮೊದಲಿಗೆ ಮಾತು ಬರೋದೇ ಮದುಮಗಳು ಉಟ್ಟಿರುವ ವಸ್ತ್ರದ ಕುರಿತಂತೆ ಹಾಗೂ ಅದರ ಬೆಲೆಯ ಕುರಿತಂತೆ. ಹೀಗಾಗಿ ಕತ್ರಿನಾ ಕೈಫ್ ಮದುವೆ ಸಮಾರಂಭದಲ್ಲಿ ಉಟ್ಟುಕೊಂಡಿರುವ ಲೆಹೆಂಗಾ ಕುರಿತಂತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಹೌದು ಗೆಳೆಯರೇ ಮದುವೆ ಸಮಾರಂಭದಲ್ಲಿ ಕತ್ರಿನಾ ಕೈಫ್ ಉಟ್ಟಿಕೊಂಡಿರುವ ಸಬ್ಯಸಾಚಿ ರವರಿಂದ ತಯಾರಾಗಿರುವ ಲೆಹೆಂಗಾ ದ ಬೆಲೆ ಬರೋಬ್ಬರಿ 17 ಲಕ್ಷ ರೂಪಾಯಿ. ಇದರ ಬೆಲೆಯನ್ನು ಕೇಳಿ ಎಲ್ಲರೂ ಒಂದು ಕ್ಷಣ ಅವಕ್ಕಾಗೋದು ಗ್ಯಾರಂಟಿ.