ಬಿಪಿನ್ ರವರು ಇಹಲೋಕ ತ್ಯಜಿಸಲು ಅವರು ಮಾಡಿದ ಆ ಒಂದು ತಪ್ಪೇ ಕಾರಣ, ಆ ತಪ್ಪು ಮಾಡಿಲ್ಲ ಅಂದ್ರೆ ಏನು ಆಗುತ್ತಾ ಇರಲಿಲ್ಲ. ಯಾವುದು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತದ ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಿಧನದಿಂದಾಗಿ ದೇಶಕ್ಕೆ ಅಪಾರ ನಷ್ಟವಾಗಿದೆ. ಬುಧವಾರ ಸಿಡಿಎಸ್ ಬಿಪಿನ್ ರಾವತ್ ಅವರು ದೆಹಲಿಯಿಂದ ತಮಿಳುನಾಡಿನ ಸೂಲೂರು ವಾಯು ನೆಲೆಗೆ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಗಮಿಸುತ್ತಿರುತ್ತಾರೆ. ಈ ಹೆಲಿಕ್ಯಾಪ್ಟರ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಊಟಿ ಕುನೂರು ಸಮೀಪ ಬರುತ್ತಿದ್ದಂತೆ ಏಕಾಏಕಿ ಹೆಲಿಕ್ಯಾಪ್ಟರ್ ಪತನ ವಾಗಿದೆ.
ಹೆಲಿಕ್ಯಾಪ್ಟರ್ ಪತನವಾಗುತ್ತಲೇ ಬೆಂಕಿ ಹೊತ್ತಿಕೊಂಡು ಉರಿದಿದೆ. ಈ ಹೆಲಿಕ್ಯಾಪ್ಟರ್ ರೆಕ್ಕೆಗಳು ನೆಲಕ್ಕಬ್ಬರಸಿ ಅಕ್ಕ ಪಕ್ಕದಲ್ಲಿದ್ದ ಮರಗಳನ್ನು ಕಟ್ ಮಾಡಿವೆ. ಇನ್ನು ಈ ಹೆಲಿಕ್ಯಾಪ್ಟರ್ ಪತನದಿಂದಾಗಿ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಸೇರಿ ಒಟ್ಟು ಹದಿ ಮೂರು ಜನರು ಸಾವನ್ನಪ್ಪಿದ್ದಾರೆ. ಒಬ್ಬರು ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜಿನ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು ಕೂಡ ಶೇಕಡ 80 ರಷ್ಟು ಬೆಂಕಿಗಾಹುತಿ ಆಗಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಅಷ್ಟಕ್ಕೂ ಬಿಪಿನ್ ರಾವತ್ ಅವರು ತಮ್ಮ ಪತ್ನಿ ಸಮೇತ ತಮಿಳುನಾಡಿಗೆ ಬರುತ್ತಿದ್ದದು ಊಟಿ ಬಳಿ ಇರುವ ವೆಲ್ಲಿಂಗ್ಟನ್ ನಲ್ಲಿರುವ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು.

ಸೂಲೂರು ವಾಯು ನೆಲೆಯಿಂದ ಬುಧವಾರ ಬೆಳಿಗ್ಗೆ 11.45 ರ ಸಮಯದಲ್ಲಿ ಹೆಲಿಕ್ಯಾಪ್ಟರ್ ಹೊರಡುತ್ತದೆ. ವೆಲ್ಲಿಂಗ್ಟನ್ ಮಾರ್ಗದ ನಡುವೆ ಹೋಗುತ್ತಿದ್ದಾಗ 12.20 ರ ಸಮಯದಲ್ಲಿ ಇದ್ದಿಕಿದ್ದಂತಿ ಹೆಲಿಕ್ಯಾಪ್ಟರ್ ಪತನಗೊಳ್ಳುತ್ತದೆ. ಹೆಲಿಕ್ಯಾಪ್ಟರ್ ಪತನವಾಗುವುದಕ್ಕೆ ಕಾರಣ ಏನು ಎಂಬುದು ಇನ್ನೂ ಕೂಡ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ತಮಿಳು ನಾಡು ಪೊಲೀಸರು ತಿಳಿಸುವ ಪ್ರಕಾರ ಬಿಪಿನ್ ರಾವತ್ ಅವರನ್ನ ನಾವು ರಸ್ತೆ ಮಾರ್ಗದ ಮೂಲಕವೇ ಕಾರಿನಲ್ಲಿ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜಿನ ಕಾರ್ಯಕ್ರಮಕ್ಕೆ ಕರೆದೊಯ್ಯುವ ಯೋಜನೆ ಹಾಕಿಕೊಂಡಿದ್ದೆವು.
ಅದಕ್ಕೆ ಪೂರಕವಾಗಿ ಜೀ಼ರೋ ಟ್ರಾಫಿಕ್ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದ್ದೆವು. ಆದರೆ ಬಿಪಿನ್ ರಾವತ್ ಅವರು ಅಂತಿಮ ಕ್ಷಣದಲ್ಲಿ ರಸ್ತೆ ಮಾರ್ಗದ ಮೂಲಕ ಹೋದರೆ ತಡವಾಗುತ್ತದೆ ಎಂದು ಹೆಲಿಕ್ಯಾಪ್ಟರ್ ಮೂಲಕ ಹೋಗವುದಾಗಿ ತಿಳಿಸಿದರು. ಅವರ ಸೂಚನೆಯಂತೆ ಹೆಲಿಕ್ಯಾಪ್ಟರ್ ಏರ್ಪಡಿಸಲಾಯಿತು ಎಂದು ತಮಿಳುನಾಡಿನ ಪೊಲೀಸರು ತಿಳಿಸಿದ್ದಾರೆ. ಇನ್ನು ಸೇನಾ ಪಡೆಯ ಮುಖ್ಯಸ್ಥರಾಗಿ ಬಿಪಿನ್ ಲಕ್ಷ್ಮಣ ಸಿಂಗ್ ರಾವತ್ ಅವರು ದೇಶಕ್ಕೆ ಸಲ್ಲಿಸಿದ ಸೇವೆ ಅಪಾರ. ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಭಾರತ ಮಾಡಿದ ಸರ್ಜಿಕಲ್ ಸ್ಟ್ರೈಕ್ ಯಶಸ್ಸಿನ ಹಿನ್ನೆಲೆಯಲ್ಲಿ ಬಿಪಿನ್ ರಾವತ್ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.