ಬಿಗ್ ನ್ಯೂಸ್: ಟ್ರೊಲ್ ಪೇಜ್ ಗಳನ್ನೂ ಅಣಕಿಸಲು ಹೋಗಿ, ದೊಡ್ಡ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡ ದಿವ್ಯ, ಬಿ ಟಿ ವಿ ನೀಡಿತು ಬಿಗ್ ಶಾಕ್. ಏನಂತೆ ಗೊತ್ತೇ??

510

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ಯಾರೆಂದರೆ ಬಿಟಿವಿ ನಿರೂಪಕಿ ದಿವ್ಯ ವಸಂತ. ಇನ್ನು ಅವರು ಸುದ್ದಿಯಾಗಿರುವುದು ಕೂಡ ಅಮೂಲ್ಯ ರವರು ತಾಯಿಯಾಗಿರುವ ವಿಚಾರ ಇಡೀ ರಾಜ್ಯವೇ ಸಂತೋಷಪಡುವ ವಿಚಾರ ಎಂಬುದಾಗಿ ಅನಗತ್ಯವಾಗಿ ಪ್ರಚಾರ ಪಡೆಯಲು ಯತ್ನಿಸಿದ್ದು.

ಇದರಿಂದಾಗಿ ದಿವ್ಯ ವಸಂತ ರವರು ಪ್ರಚಾರ ಪಡೆದ ಕ್ಕಿಂತ ಹೆಚ್ಚಾಗಿ ಟ್ರೋಲ್ ಆಗಿದ್ದೆ ಹೆಚ್ಚು. ಅಮೂಲ್ಯ ರವರು ತಾಯಿಯಾಗಿರುವ ವಿಚಾರ ಇಡೀ ರಾಜ್ಯದ ಸಂತೋಷಪಡುವ ವಿಚಾರ ಎಂಬುದಾಗಿ ವಿಜ್ರಂಭಣೆಯಿಂದ ಪ್ರಸಾರ ಮಾಡಿದ್ದು ನೋಡುಗರ ಕೆಂಗಣ್ಣಿಗೆ ಗುರಿಯಾಯಿತು. ಯಾಕೆಂದರೆ ಆಗತಾನೆ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖದಲ್ಲಿದ್ದ ಕನ್ನಡಿಗರಿಗೆ ಈ ವಿಚಾರವನ್ನು ಅಷ್ಟೊಂದು ಸಂತೋಷಪಡುವ ಅಗತ್ಯತೆ ಆದರೂ ಏನು ಎಂಬುದು ಅವರ ಅನಿಸಿಕೆಯಾಗಿತ್ತು.

ಇದಾದ ನಂತರ ಇದಕ್ಕೆ ಪ್ರತಿಯಾಗಿ ಬಿಟಿವಿ ನಿರೂಪಕಿ ಯಾಗಿರುವ ದಿವ್ಯ ವಸಂತ ರವರು ಟ್ರೋಲ್ ತಲೆಹರಟೆ ಹಾಗೂ ಬಿಟ್ಟಿ ನೆಟ್ ಎಂಬ ಕಾರ್ಯಕ್ರಮವನ್ನು ಮಾಡಿದ್ದು ಟ್ರೋಲಿಗರಿಗೆ ಇನ್ನಷ್ಟು ಕೋಪ ತರುವಂತೆ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ದಿವ್ಯ ವಸಂತವನ್ನು ಟ್ರೋಲ್ ಪೇಜ್ ನವರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ಉಗಿದು ಉಪ್ಪು ಹಾಕಿದರು. ಇದರಿಂದ ಮತ್ತಷ್ಟು ಪ್ರಚಾರವನ್ನು ಪಡೆಯಲೆತ್ನಿಸಿದ ದಿವ್ಯ ವಸಂತ ರವರು ಟ್ರೋಲ್ ಪೇಜ್ ಅವರೊಂದಿಗೆ ಲೈವ್ ಕಾರ್ಯಕ್ರಮವನ್ನು ಕೂಡ ಮಾಡಿ ಅಲ್ಲಿಯೂ ಕೂಡ ಅಸಮರ್ಪಕವಾದ ಉತ್ತರಗಳನ್ನು ನೀಡಿ ಪ್ರಚಾರವನ್ನು ಪಡೆಯಲು ಯತ್ನಿಸಿದರು.

ಇಲ್ಲಿ ಕೂಡ ತಾವು ಮಾಡಿದ್ದೇ ಸರಿ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ದಿವ್ಯ ವಸಂತ ರವರು ಬಿಟಿವಿ ಅವರು ಪೋಸ್ಟ್ ಮಾಡಿದ್ದ ಆರ್ಟಿಕಲ್ ಒಂದನ್ನು ಶೇರ್ ಮಾಡಿಕೊಂಡು ಬಿಲ್ಡಪ್ ನೀಡಿದ್ದರು. ಇದರಲ್ಲಿ ಪಬ್ಲಿಕ್ ಟಿವಿ ರಂಗಣ್ಣನ ಅವರಿಗಿಂತಲೂ ಹೆಚ್ಚಾಗಿ ಸಂಭಾವನೆ ಪಡೆಯುವ ನಿರೂಪಕಿ ಎಂಬುದಾಗಿ ತಮ್ಮ ಬಗ್ಗೆ ತಾವೇ ಕೊಚ್ಚಿಕೊಂಡಿದ್ದರು. ಇನ್ನು ಅದರಲ್ಲಿ ಅವರಿಗೆ ಸಂಭಾವನೆಯಾಗಿ 1ಲಕ್ಷ ರೂಪಾಯಿ ಹಾಗೂ ಇನ್ಸ್ಟಾಗ್ರಾಮ್ ನಿಂದ 1 ಲಕ್ಷ ರೂಪಾಯಿ ಒಟ್ಟಿಗೆ ಎರಡು ಲಕ್ಷಕ್ಕಿಂತ ಅಧಿಕ ಹಣವನ್ನು ಪಡೆಯುತ್ತಾರೆ ಎಂಬುದಾಗಿ ಬರೆಯಲಾಗಿತ್ತು. ಆದರೆ ಈಗ ನಡೆದಿರುವುದು ಬೇರೆಯಾಗಿದೆ.

ಹೌದು ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ದಿವ್ಯ ವಸಂತ ರವರನ್ನು ಭೇಟಿಯಿಂದ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇತ್ತೀಚಿಗಷ್ಟೇ ರವಿಚಂದ್ರನ್ ರವರನ್ನು ಸಂದರ್ಶನ ಮಾಡುವಾಗ ಕೂಡ ರಾಧಾ ಹಿರೇಗೌಡರ್ ರವರು ಕಾಣಿಸಿಕೊಂಡಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾದಾಗ ಕೂಡ ಬಿಟಿವಿ ಮುಖ್ಯಸ್ಥರೊಬ್ಬರು ಕಾಣಿಸಿಕೊಂಡಿದ್ದರು ದಿವ್ಯ ವಸಂತ ರವರು ಎಲ್ಲೂ ಕೂಡ ಕಾಣಿಸಿಕೊಂಡಿರಲಿಲ್ಲ.

ಕೆಲವರ ಪ್ರಕಾರ ಬಿಟಿವಿ ವಾಹಿನಿಗೆ ಬರುತ್ತಿರುವ ನಕಾರಾತ್ಮಕ ಪ್ರಚಾರದಿಂದಾಗಿ ದಿವ್ಯ ವಸಂತ ರವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಇನ್ನು ಕೆಲವರ ಪ್ರಕಾರ ಜನರು ಇದನ್ನು ಮರೆಯಲು ದಿವ್ಯ ವಸಂತ ರವರಿಗೆ ಕೊಂಚ ಬ್ರೇಕ್ ಅನ್ನು ನೀಡಿದ್ದಾರೆ ಮುಂದಿನ ದಿನಗಳಲ್ಲಿ ಮತ್ತೆ ಬರಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಆದರೆ ಯಾವುದರ ಕುರಿತು ಕೂಡ ಅಧಿಕೃತ ಮಾಹಿತಿ ಇಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏ ನೆಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.