ಕೊನೆಗೂ ಬಯಲಾಯಿತು ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ವಂಶಿಕಾಗೆ ಸಿಗುವ ಸಂಭಾವನೆ, ಅಸಲಿಗೆ ಎಷ್ಟು ಗೊತ್ತೇ?? ಇಷ್ಟು ಕಡಿಮೇನಾ??

1,538

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ವಾಹಿನಿಗಳ ಸಂಖ್ಯೆ ಕಿರುತೆರೆಯಲ್ಲಿ ಜಾಸ್ತಿಯಾಗಿದೆ. ಹೀಗಾಗಿ ಪ್ರತಿ ವಾಹಿನಿಗಳು ಕೂಡ ಸ್ಪರ್ಧೆಗೆ ಬಿದ್ದವರಂತೆ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದ್ದಾರೆ. ಈಗಾಗಲೇ ನಿಮಗೆ ತಿಳಿದಿರುವಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಪ್ರಾರಂಭವಾದ ಎರಡೇ ವಾರಗಳಲ್ಲಿ ದೊಡ್ಡಮಟ್ಟದಲ್ಲಿ ಜನಮನ್ನಣೆಯನ್ನು ಗಳಿಸಲು ಯಶಸ್ವಿಯಾಗಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಅಮ್ಮ ಹಾಗೂ ಮಕ್ಕಳ ಸಂಬಂಧವನ್ನು ಹಾಗೂ ಪ್ರೀತಿ ವಾತ್ಸಲ್ಯಗಳನ್ನು ಜನರಿಗೆ ಈ ಕಾರ್ಯಕ್ರಮದ ಮೂಲಕ ತೋರಿಸಲು ಪ್ರಯತ್ನಿಸಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್ ರವರ ಮಗಳಾಗಿರುವ ವಂಶಿಕ ರವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದು ಅವರ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದು ವೈರಲ್ ಆಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ವಂಶಿಕ ಸೆಲೆಬ್ರಿಟಿ ಕಿಡ್ ಆಗಿ ಮಿಂಚುತ್ತಿದ್ದಾಳೆ. ಇನ್ನು ಹಲವಾರು ಪ್ರೇಕ್ಷಕರಿಗೆ ಈ ಕಾರ್ಯಕ್ರಮದಲ್ಲಿ ಎಷ್ಟು ಸಂಭಾವನೆಯನ್ನು ಪಡೆಯಬಹುದು ಎಂಬ ಗೊಂದಲ ಇರಬಹುದು. ಒಂದು ಕಾಲದಲ್ಲಿ ವಾಹಿನಿಗಳು ಕಡಿಮೆ ಇದ್ದವು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ದೊಡ್ಡ ಮಾತಾಗಿತ್ತು.

ಆದರೆ ಈಗ ಇಂತಹ ಕಾರ್ಯಕ್ರಮಗಳ ಜೊತೆಗೆ ವಾಹಿನಿಗಳ ನಡುವೆ ಸ್ಪರ್ಧೆಗಳು ಏರ್ಪಟ್ಟಿದ್ದು ತಮ್ಮ ಕಲಾವಿದರು ಹಾಗೂ ವ್ಯಕ್ತಿಗಳನ್ನು ತಮ್ಮೊಂದಿಗೆ ಉಳಿಸಿಕೊಳ್ಳಲು ವಾಹಿನಿಗಳು ಕೂಡ ದೊಡ್ಡಮಟ್ಟದ ಸಂಭಾವನೆಯನ್ನು ಕೂಡ ನೀಡುತ್ತಿವೆ. ಇನ್ನು ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲೂ ಕೂಡ ಕೇವಲ ಯಶಸ್ವಿನಿ ಹಾಗೂ ವಂಶಿಕ ಅಮ್ಮ ಮಗಳ ಜೋಡಿಗೆ ಮಾತ್ರವಲ್ಲದೆ ಎಲ್ಲರಿಗೂ ಕೂಡ ಒಂದೇ ತರಹದ ಸಂಭಾವನೆ ನೀಡಲಾಗುತ್ತದೆ. ವಾರದಲ್ಲಿ ಎರಡು ಸಂಚಿಕೆಯ ಒಂದು ದಿನದ ಚಿತ್ರೀಕರಣ ಮಾತ್ರ ಇರುತ್ತದೆ. ಇನ್ನು ಚಿತ್ರೀಕರಣಕ್ಕೆ ಒಮ್ಮೆಗೆ ಅಂದರೆ ಒಂದು ವಾರಕ್ಕೆ 20000 ಸಂಭಾವನೆಯನ್ನು ನೀಡಲಾಗುತ್ತದೆ. ಇನ್ನು ವಾರದ ಸಂಭಾವನೆ ಜೊತೆಗೆ ಮೊದಲ ಹಾಗೂ ಎರಡನೇ ಸ್ಥಾನ ಬಂದ ಅಭ್ಯರ್ಥಿಗಳಿಗೂ ಕೂಡ ವಿಶೇಷವಾದ ನಗದು ಬಹುಮಾನವಿರುತ್ತದೆ.