ಸರಿಗಮಪ ಶೋ ನಿಂದ ಹೊರಬಿದ್ದ ಹಂಸಲೇಖ?? ಅಸಲಿ ಕಾರಣ ತಿಳಿಸಿ ಸತ್ಯ ಬಿಚ್ಚಿಟ್ಟ ಮುಖ್ಯಸ್ಥ ರಾಘವೇಂದ್ರ ಹುಣಸೂರು. ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿಯಾದ ಜೀ಼ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಸಿಂಗಿಂಗ್ ಶೋ ನಲ್ಲಿ ಮುಖ್ಯ ತೀರ್ಪುಗಾರರಾಗಿದ್ದ ಕನ್ನಡ ಚಿತ್ರರಂಗದ ಸುಪ್ರಸಿದ್ದ ಸಾಹಿತಿ ಮತ್ತು ಸಂಗೀತ ನಿರ್ದೇಶಕರಾಗಿರುವ ನಾದಬ್ರಹ್ಮ ಹಂಸಲೇಖ ಅವರು ಇತ್ತೀಚೆಗೆ ಭಾಗವಹಿಸುತ್ತಿಲ್ಲ. ಇದಕ್ಕೆ ಅನೇಕ ಊಹಾಪೋಹ ಕಾರಣಗಳು ಸೃಷ್ಟಿಯಾಗಿ ಜೀ಼ ಕನ್ನಡ ವಾಹಿನಿ ವಿರುದ್ದ ಅನೇಕ ದಲಿತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ಒಂದಷ್ಟು ಸಾಮಾಜಿಕ ಸೇವಾ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು.
ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಬಹುತೇಕ ನೆಟ್ಟಿಗರು ಜೀ಼ ಕನ್ನಡ ವಾಹಿನಿಯ ನಡೆಯ ವಿರುದ್ದ ಅಸಮಾಧನಾ ವ್ಯಕ್ತಪಡಿಸಿದ್ದರು. ಅಷ್ಟಕ್ಕೂ ಆದದ್ದು ಏನು ಎಂಬುವುದನ್ನ ತಿಳಿಯುವುದಾದರೆ ನಾದ ಬ್ರಹ್ಮ ಹಂಸಲೇಖ ಅವರು ಮೈಸೂರು ವಿಶ್ವ ವಿಧ್ಯಾಲಯದ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಹೋಗಿದ್ದರು. ಅವರೊಂದಿಗೆ ಅವರ ಪತ್ನಿ ಲತಾ ಹಂಸಲೇಖ ಕೂಡ ಹೋಗಿದ್ದರು.

ಕಾರ್ಯಕ್ರಮದ ನಿಮಿತ್ತ ಮಾತನಾಡುತ್ತಾ ಹಂಸಲೇಖ ಅವರು ಜಾತ್ಯತೀತ ಮತ್ತು ಅಸ್ಪೃಶ್ಯತೆಯ ವಿಚಾರಗಳ ಬಗ್ಗೆ ಧ್ವನಿ ಎತ್ತಿದರು. ಇಲ್ಲಿ ದಲಿತರ ಮೇಲೆ ನಡೆಯುತ್ತಿರುವಂತಹ ಒಂದಷ್ಟು ಅಸಮಾನತೆ, ಅವರನ್ನ ರಾಜಕೀಯವಾಗಿ ಬಳಸಿಕೊಳ್ಳುವ ರೀತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಧರ್ಭದಲ್ಲಿ ಉಡುಪಿ ಶ್ರೀಕೃಷ್ಣ ಮಠದ ಪೇಜಾವರ ಶ್ರೀ ಅವರ ಹೆಸರನ್ನ ಪ್ರಸ್ತಾಪಿಸಿದರು.

ಪೇಜಾವರ ಶ್ರೀಗಳು ಇತ್ತೀಚೆಗೆ ದಲಿತರ ಬೀದಿಗಳಿಗೆ ಅವರ ಮನೆಗಳಿಗೆ ಭೇಟಿ ನೀಡಿದ್ದರು. ಕೇವಲ ದಲಿತರ ಮನೆಗೆ ಭೇಟಿ ನೀಡಿದರೆ ಸಮಾಜದಲ್ಲಿರುವ ಅಸಮಾನತೆ ಅಸ್ಪೃಶ್ಯತೆ ಹೋಗುತ್ತದೆಯೇ. ಒಂದು ವೇಳೆ ಪೇಜಾವರ ಶ್ರೀ ಗಳಿಗೆ ದಲಿತರು ತಮ್ಮ ಮನೆಯಲ್ಲಿ ಮಾಡುವ ಮಾಂಸಹಾರ ನೀಡಿದರೆ ತಿನ್ನಲು ಸಾಧ್ಯವೇ ಎಂದು ವ್ಯಂಗ್ಯದ ರೀತಿಯಲ್ಲಿ ಭಾಷಣ ಮಾಡಿದ್ದರು.
ಹಂಸಲೇಖ ಅವರ ಈ ಭಾಷಣದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಿಂದೂಪರ ಸಂಘಟನೆಗಳು ಸೇರಿದಂತೆ ಬ್ರಾಹ್ಮಣ ಸಮುದಾಯ ಸಂಘಟನೆಗಳು ಹಂಸಲೇಖ ಅವರ ವಿರುದ್ದ ಘೋಷಣೆ ಕೂಗಿ ತಕ್ಷಣ ಅವರು ಬೇಷರತ್ ಕ್ಷಮೆ ಕೇಳಬೇಕು ಎಂದು ಪ್ರತಿಭಟನೆ ನಡೆಸಿದರು. ಜೊತೆಗೆ ಅವರನ್ನ ಸರಿಗಮಪ ಶೋ ನಿಂದ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ತಮ್ಮ ತಪ್ಪಿನ ಅರಿವಾಗಿ ತಕ್ಷಣ ಹಂಸಲೇಖ ಅವರು ಕೂಡ ಕ್ಷಮೆ ಕೋರಿದರು.

ಇದಾದ ಬಳಿಕ ಸರಿಗಮಪ ಶೋ ನಲ್ಲಿ ಹಂಸಲೇಖ ಅವರು ಕಾಣಿಸಿಕೊಂಡಿರಲಿಲ್ಲ. ಇದು ಅನೇಕರಿಗೆ ಅನುಮಾನವಾಗಿ ಕಾಣಿಸಿತು. ಜೀ಼ ವಾಹಿನಿಯವರು ಹಂಸಲೇಖ ಅವರನ್ನ ಬೇಕು ಅಂತಾನೇ ಶೋ ನಿಂದ ಹೊರಗಿಟ್ಟಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳು ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಜೀ಼ ಕನ್ನಡ ವಾಹಿನಿಯನ್ನು ನೋಡಬಾರದು ಎಂಬ ಅಭಿಯಾನ ಶುರು ಮಾಡಿದ್ದರು.ಅನಗತ್ಯವಾಗಿ ಊಹಾಪೋಹ ಸುದ್ದಿ ಹರಿದಾಡುತ್ತಿದ್ದ ಕಾರಣ ಸ್ವತಃ ಜೀ಼ ಕನ್ನಡ ಕ್ರಿಯೆಟಿವ್ ಹೆಡ್ ಆಗಿರುವ ರಾಘವೇಂದ್ರ ಹುಣಸೂರು ಅವರು ವಾಸ್ತವಾಂಶವನ್ನು ತಿಳಿಸಿದರು. ಮಹಾಗುರುಗಳಾದ ಹಂಸಲೇಖ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವರು ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯುತ್ತಿದ್ದಾರೆ ಹೊರತು ಅವರನ್ನು ಸರಿಗಮಪ ಶೋ ನಿಂದ ಹೊರಗಿಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಿದ್ದಾರೆ.