ಧ್ರುವ ಸರ್ಜಾ ರವರ ಮುಂದಿನ ಸಿನಿಮಾಗೆ ಬೇರೆ ಭಾಷೆಯಿಂದ ಬಂದ ಅಪ್ಸರೆ. ನಾಯಕ ನಟಿಯಾಗಿ ಆಯ್ಕೆಯಾದ ಚೆಲುವೆ ಯಾರು ಗೊತ್ತೇ??

1,589

ನಮಸ್ಕಾರ ಸ್ನೇಹಿತರೇ ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಯಾಗಿದ್ದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿತ್ತು. ಅದಾದನಂತರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಅವರ ನಿರ್ದೇಶನದಲ್ಲಿ ನಟನೆ ಮಾಡುತ್ತಾರೆ ಇವರ ನಿರ್ಮಾಣದಲ್ಲಿ ನಟನೆ ಮಾಡುತ್ತಾರೆ ಎಂಬ ಗೊಂದಲಗಳು ಮೂಡಿದ್ದವು.

ಕೊನೆಗೆ ಎಪಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಾರ್ಟಿನ್ ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕನ್ಫರ್ಮ್ ಆಗಿತ್ತು. ಇನ್ನು ಈ ಚಿತ್ರವನ್ನು ಬಚ್ಚನ್ ಖ್ಯಾತಿಯ ನಿರ್ಮಾಪಕರಾಗಿರುವ ಉದಯ್ ಕೆ ಮೆಹ್ತಾ ರವರು ನಿರ್ಮಾಣ ಮಾಡಲಿದ್ದರು. ಈಗಾಗಲೆ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಗಳು ಕೂಡ ಬಿಡುಗಡೆಯಾಗಿದ್ದವು. ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಧ್ರುವ ಸರ್ಜಾ ರವರು ರಗಡ್ ಆಗಿ ಕಾಣಿಸಿಕೊಂಡಿದ್ದರು ಇದರಿಂದಾಗಿ ಚಿತ್ರದ ಕುರಿತಂತೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಇನ್ನು ಮಾರ್ಟಿನ್ ಚಿತ್ರ ಪಂಚ ಭಾಷೆಗಳಲ್ಲಿ ಮೂಡಿ ಬರಲಿದ್ದು ಈ ಚಿತ್ರಕ್ಕೆ ನಾಯಕ ನಟಿ ಯಾರಾಗಲಿದ್ದಾರೆ ಎಂಬ ಕುರಿತಂತೆ ಸಾಕಷ್ಟು ಗೊಂದಲಗಳು ಓಡಾಡಿಕೊಂಡಿದ್ದವು. ಅಭಿಮಾನಿಗಳ ಈ ಗೊಂದಲಕ್ಕೆ ಕೂಡ ಈಗ ತೆರೆಬಿದ್ದಿದೆ.

ಹೌದು ಗೆಳೆಯರೇ ಮರಾಠಿ ಹಾಗೂ ತೆಲುಗು ತಮಿಳು ಚಿತ್ರರಂಗಗಳಲ್ಲಿ ಈಗಾಗಲೇ ಹೆಸರನ್ನು ಸಾಧಿಸಿರುವ ವೈಭವಿ ಶಾಂಡಿಲ್ಯ ರವರು ಧ್ರುವ ಸರ್ಜಾ ರವರಿಗೆ ಮಾರ್ಟಿನ್ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ವೈಭವಿ ಶಾಂಡಿಲ್ಯ ರವರು ಈ ಹಿಂದೆಯೇ ರಾಜ್ ವಿಷ್ಣು ಚಿತ್ರದಲ್ಲಿ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ ನಟನೆಯ ಗಾಳಿಪಟ-2 ಚಿತ್ರದಲ್ಲಿ ಕೂಡ ಈಗಾಗಲೇ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ತೆರೆಮೇಲೆ ಹೇಗೆ ಮೂಡಿ ಬರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.