ಪುಷ್ಪ ಟ್ರೈಲರ್ ಗೆ ಗಂಧದ ಗುಡಿ ಪೈಪೋಟಿ ನೀಡುವ ಸಮಯದಲ್ಲಿ ಅಲ್ಲೂ ಅರ್ಜುನ್ ರವರ ಹೇಳಿದ್ದೇನು ಗೊತ್ತೇ?? ಇದಪ್ಪ ಗಂಡಸ್ತನದ ಮಾತು ಅಂದ್ರೆ.

12,879

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇದೀಗ ರಾಜ್ಯವೇ ಕಣ್ಣೀರು ಹಾಕುತ್ತಿದೆ ಎಂದರೆ ತಪ್ಪಾಗಲಾರದು. ಪುನೀತ್ ರಾಜಕುಮಾರ್ ರವರು ಯಾರಿಗೂ ತಿಳಿಯದೆ ಮಾಡುತ್ತಿದ್ದ ಸಾಮಾಜಿಕ ಕಳಕಳಿಯನ್ನು ಮೆರೆಯುವಂತಹ ಕಾರ್ಯಗಳು ತಿಳಿದ ಮೇಲಂತೂ ಯಾರೊಬ್ಬರೂ ಕೂಡ ಪುನೀತ್ ರವರು ಇಂದು ನಮ್ಮ ಜೊತೆಗಿಲ್ಲ ಎಂಬುದನ್ನು ನಂಬಲು ತಯಾರಾಗಿಲ್ಲ. ಆದರೆ ಕಟುಸತ್ಯ ಏನು ಎಂದರೇನು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಒಂದು ತಿಂಗಳು ಮುಗಿದು ಹೋಗಿದೆ.

ಇನ್ನು ಜೀವನದಲ್ಲಿ ಹಲವಾರು ಕನಸುಗಳನ್ನು ಹೊಂದಿದ್ದ ಪುನೀತ ರಾಜಕುಮಾರ್ ರವರು ತಮ್ಮ ಜೀವನದ ಹಾದಿಯಲ್ಲಿ ನಿಜಕ್ಕೂ ಕೋಟ್ಯಂತರ ಜನ ತಮ್ಮನ್ನು ಸ್ಪೂರ್ತಿ ತೆಗೆದುಕೊಳ್ಳುವಂತಹ ಬದುಕನ್ನು ಬದುಕಿದ್ದಾರೆ ಎಂದರೆ ತಪ್ಪಾಗಲಾರದು. ಪ್ರತಿ ವಿಚಾರಗಳ ಕುರಿತು ಬಹಳ ಗಮನ ಹರಿಸುತ್ತಿದ್ದ ಪುನೀತ್ ರಾಜಕುಮಾರ್ ಅವರು ಭಾಷೆ ಗಡಿ ಎಲ್ಲವನ್ನೂ ಮೀರಿ ಎಲ್ಲ ರೀತಿಯ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ರವರ ಜೀವನದ ಬಹುದೊಡ್ಡ ಕನಸಾದ ಗಂಧದಗುಡಿ ಟ್ರೈಲರ್ ಕೂಡ ಇದೀಗ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಬಹಳ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಕೊಂಡಿದೆ.

ಇಂತಹ ಸಮಯದಲ್ಲಿ ತೆಲುಗಿನ ಟಾಪ್ ನಟರಾಗಿರುವ ಅಲ್ಲು ಅರ್ಜುನ್ ರವರ ಪುಷ್ಪ ಸಿನಿಮಾ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು 2 ಟ್ರೈಲರ್ ಗಳ ನಡುವೆ ಉತ್ತಮ ಪೈಪೋಟಿ ಕಾಣಿಸುತ್ತಿದೆ, ಈ ಕುರಿತು ಅಭಿಮಾನಿಗಳು ಮಾಡಿದ ಪೋಸ್ಟನ್ನು ನೋಡಿದ ಅಲ್ಲು ಅರ್ಜುನ್ ನಾನು ಕೂಡ ಗಂಧದಗುಡಿ ಟ್ರೈಲರ್ ನೋಡಿದ್ದೇನೆ ಪುಷ್ಪ ಸಿನಿಮಾ ಗಂಧದಗುಡಿ ಗೆ ಹೋಲಿಕೆ ಬೇಡ, ಗಂಧದಗುಡಿ ನನ್ನ ನೆಚ್ಚಿನ ಸಹೋದರನಂತೆ ಇದ್ದ ಸ್ನೇಹಿತ ಪುನೀತ್ ರವರ ಕನಸು, 2 ಟ್ರೈಲರ್ ಗಳ ನಡುವೆ ಯಾವುದೇ ಪೈಪೋಟಿ ಇಲ್ಲ. ಗಂಧದಗುಡಿ ಟ್ರೈಲರ್ ನೋಡಿದವರು ಪುಷ್ಪ ನೋಡುತ್ತಾರೆಯೋ ಇಲ್ಲವೋ ತಿಳಿದಿಲ್ಲ ಆದರೆ ದಯವಿಟ್ಟು ಎಲ್ಲರೂ ಕೂಡ ಗಂಧದಗುಡಿ ಟ್ರೈಲರ್ ಅನ್ನು ನೋಡುವುದನ್ನು ಮಿಸ್ ಮಾಡಬೇಡಿ, ಪುಷ್ಪ ಟ್ರೈಲರ್ ನೋಡಿದರೂ ಕೂಡ ಗಂಧದಗುಡಿ ಯನ್ನು ನೋಡಲು ಮರೆಯದಿರಿ ಎಂದು ಹೇಳಿಕೆ ನೀಡಿದ್ದಾರೆ.