ಇರಲಾರದೆ ಇರುವ ಬಿಟ್ಟಿಕೊಂಡ ಅಂಕಲ್, ಪತ್ನಿ ಕಳೆದುಕೊಂಡ 7 ತಿಂಗಳಿಗೆ ಮದುವೆಯಾಗಲು ಹೊರಟ 60 ವರ್ಷದ ಅಂಕಲ್, ಮದುವೆಗೆ ಒಪ್ಪಿಕೊಂಡಿದ್ದ ಆಂಟಿ ಮಾಡಿದ್ದೇನು ಗೊತ್ತೇ??

8,083

ನಮಸ್ಕಾರ ಸ್ನೇಹಿತರೇ ನೀವು ಎಂತೆಂಥದೋ ಸುದ್ದಿಗಳನ್ನು ಕೇಳಿ ನಕ್ಕಿರುತ್ತೀರಿ. ಆದರೆ ಇಂದು ನಾವು ಹೇಳುತ್ತಿರುವ ಸುದ್ದಿಯನ್ನು ಕೇಳಿದರೆ ಖಂಡಿತವಾಗಿ ಬಿದ್ದು ಬಿದ್ದು ನಗೋದಂತೂ ಗ್ಯಾರಂಟಿ. ಯಾಕೆಂದರೆ ಇದು 60ರ ಹರೆಯದ ಮುದುಕನೊಬ್ಬ ಮದುವೆ ಆಗಲು ಹೋಗಿ ನಂತರ ಯಾಮಾರಿದ ಕಥೆ. ಕೇಳೋಕೆ ನಮಗೆ ಕಾಮಿಡಿ ಆಗಿರಬಹುದು ಆದರೆ ಆತನಿಗೆ ಮಾತ್ರ ಇದು ಖಂಡಿತವಾಗಿ ಕಷ್ಟವಾಗಿರುತ್ತದೆ. ಹೌದು ಗೆಳೆಯರೇ ಇದು ನಡೆದಿರುವುದು ಶಿವಮೊಗ್ಗದಲ್ಲಿ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ನಿವಾಸಿಯಾಗಿರುವ 60 ವರ್ಷದ ಅಂಕಲ್ ಕುರಿತಂತೆ. ಕಳೆದ ಏಳು ತಿಂಗಳ ಹಿಂದೆಯಷ್ಟೇ ತಮ್ಮ ಪತ್ನಿಯನ್ನು ಅನಾರೋಗ್ಯದಿಂದಾಗಿ ಕಳೆದುಕೊಂಡಿದ್ದರು.

ಇನ್ನು ಈತನಿಗೆ ಒಂದು ಗಂಡು ಹಾಗೂ ಎರಡು ಹೆಣ್ಣುಮಕ್ಕಳಿದ್ದು ಇವರೆಲ್ಲರಿಗೂ ಕೂಡ ಈಗಾಗಲೇ ಮದುವೆಯಾಗಿ ಸಂಸಾರ ನಡೆಸಿಕೊಂಡು ಅವರ ಪಾಡಿಗೆ ಅವರು ಇದ್ದಾರೆ. ಇನ್ನು ಇಳಿವಯಸ್ಸಿನಲ್ಲಿ ಪತ್ನಿಯನ್ನು ಕಳೆದುಕೊಂಡಿರುವುದರಿಂದ ಆಗಿ ಒಂಟಿತನವನ್ನು ಅನುಭವಿಸುತ್ತಿದ್ದ ಇವರು ಕನ್ನಡ ಮ್ಯಾಟ್ರಿಮೋನಿ ಗೆ 3000 ಹಣಕೊಟ್ಟು ನೊಂದಾವಣೆ ಮಾಡಿಕೊಂಡಿದ್ದರು. ಈ ಇಳಿವಯಸ್ಸಿನಲ್ಲಿ ಅವರಿಗೆ ಜೀವನಕ್ಕೆ ಜೊತೆಯಾಗಿರಲು ಒಬ್ಬ ಮಹಿಳೆಯನ್ನು ಹುಡುಕುತ್ತಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ನಿವಾಸಿಯಾಗಿರುವ ಚಂದ್ರಿಕಾ ಎನ್ನುವ ಆಂಟಿ ಮದುವೆ ಆಗಲು ಗ್ರೀನ್ ಸಿಗ್ನಲ್ ನೀಡಿದ್ದಳು.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ನವೆಂಬರ್ 15ರಂದು ಸಿಗಂದೂರು ದೇವಸ್ಥಾನದಲ್ಲಿ ಮದುವೆ ಆಗಬೇಕಾಗಿತ್ತು. ಆದರೆ ಸಿಗಂದೂರಿನಲ್ಲಿ ಮದುವೆ ಆಗಲು ಅವಕಾಶ ನೀಡಿರಲಿಲ್ಲ. ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಅಂದು ಇವರು ಬೈಕ್ ತರ್ತೀನಿ ಎಂದು ಹೊರಟಿದ್ದ. ಈ ಕಡೆ ಚಂದ್ರಿಕಾ ಊಟ ಮಾಡಿ ಬರ್ತೀನಿ ಎಂಬುದಾಗಿ ಹೇಳಿ ಹೋಗಿದ್ದಳು. ಆದರೆ ಹೋದವಳು ಮತ್ತೆ ವಾಪಸ್ ಬರಲೇ ಇಲ್ಲ. ಕೇವಲ ಹೋಗೋದು ಮಾತ್ರವಲ್ಲದೆ ನೀಡಿದ್ದ ಚಿನ್ನದ ತಾಳಿ 4 ಬೆಳ್ಳಿ ಕಾಲುಂಗುರ ಎರಡು ಬೆಳ್ಳಿ ಕಾಲು ಚೈನ್ ಎರಡು ಬೆಳ್ಳಿ ಬಳೆ ಹಾಗೂ ದುಬಾರಿ ರೇಷ್ಮೆ ಸೀರೆಯೊಂದಿಗೆ ಕಾಲ್ಕಿತ್ತಿದ್ದಾಳೆ. ಅಂತೂ-ಇಂತೂ ಇವರು ಇಳಿವಯಸ್ಸಿನಲ್ಲಿ ಮದುವೆ ಆಗೋಕೆ ಹೋಗಿ ಸರಿಯಾಗಿ ಯಾಮಾರಿದ್ದಾರೆ.