ಪ್ರೀತಿ ಎಂಬುದು ಹಾಗೆ ಕುರುಡು ಯಾಕೆ ಗೊತ್ತೇ?? ಕತ್ರಿನಾ ಮದುವೆಯಾಗುತ್ತಿರುವ ವಿಕ್ಕಿ ಕೌಶಲ್ ಆಸ್ತಿ ಎಷ್ಟು ಗೊತ್ತಾ.?? ಇಷ್ಟೇನಾ??
ನಮಸ್ಕಾರ ಸ್ನೇಹಿತರೇ ಇದೇ ಡಿಸೆಂಬರ್ 9ರಂದು ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ರವರು ಮದುವೆಯಾಗುವುದರ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಿದ್ದರಾಗಿದ್ದಾರೆ. ಇನ್ನು ಇವರಿಬ್ಬರು ಇನ್ನು ಕೆಲವೇ ದಿನಗಳಲ್ಲಿ ರಾಜಸ್ಥಾನದಲ್ಲಿ ಮದುವೆಯಾಗಲಿದ್ದು ಈಗ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಹಾಗೂ ಆಸ್ತಿಯ ಲೆಕ್ಕಚಾರದ ಕುರಿತಂತೆ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಹಾಗಿದ್ದರೆ ಈ ಎರಡು ಗೊಂದಲಗಳನ್ನು ಕೂಡ ನಾವು ನಿಮಗೆ ಪರಿಹರಿಸಿಕೊಳ್ಳಲು ಹೊರಟಿದ್ದೇವೆ.
ಕತ್ರಿನಾ ಕೈಫ್ ರವರು 18 ವರ್ಷಗಳ ಕಾಲ ಬಾಲಿವುಡ್ ಚಿತ್ರರಂಗದಲ್ಲಿ ಇಂದು ಅವರು ಹೊಂದಿರುವ ಸ್ಥಾನಕ್ಕೆ ಬರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಇಂದು ಬಾಲಿವುಡ್ ಚಿತ್ರರಂಗದ ನಂಬರ್ ಒನ್ ನಟಿ ಆಗಲು ಕತ್ರಿನಾ ಕೈಫ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇನ್ನು ಪ್ರತಿ ಸಿನಿಮಾಗೆ ಸಂಭಾವನೆಯಾಗಿ ಕತ್ರಿನಾ ಕೈಫ್ ರವರು ಈಗ ಸದ್ಯಕ್ಕೆ 11 ಕೋಟಿ ರೂಪಾಯಿಯನ್ನು ಪಡೆಯುತ್ತಾರೆ. ಇನ್ನು ಜಾಹೀರಾತು ಮೂಲೆಗಳಿಂದಲೂ ಕೂಡ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹೀಗಾಗಿ ಕತ್ರಿನಾ ಕೈಫ್ ಬಳಿ ಬರೋಬ್ಬರಿ 225 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಅಂದಾಜಿಸಲಾಗಿದೆ. ಇನ್ನು ನಟ ವಿಕ್ಕಿ ಕೌಶಲ್ ಕೂಡ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಬಂದಿದ್ದರು.

ನ್ನು ಉರಿ ಚಿತ್ರದ ನಂತರ ಅವರ ಮಾರುಕಟ್ಟೆ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡಮಟ್ಟದಲ್ಲಿ ವಿಸ್ತರಣೆಯಾಯಿತು. ಇನ್ನು ವಿಕ್ಕಿ ಕೌಶಲ್ ರವರು ಪ್ರತಿ ಚಿತ್ರಕ್ಕೆ ಮೂರರಿಂದ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇತ್ತೀಚಿಗೆ ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇವರಿಬ್ಬರ ಒಟ್ಟು ಆಸ್ತಿ ಬರೋಬ್ಬರಿ 250 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇನ್ನು ಇವರಿಬ್ಬರ ವಯಸ್ಸಿನ ಅಂತರದ ಬಗ್ಗೆ ಹೇಳುವುದಾದರೆ ಕತ್ರಿನಾ ಕೈಫ್ ಅವರಿಗಿಂತ ವಿಕ್ಕಿ ಕೌಶಲ್ 5ವರ್ಷ ಚಿಕ್ಕವರು. ವಿಕ್ಕಿ ಕೌಶಲ್ ಅವರಿಗಿಂತ ವಯಸ್ಸಿನಲ್ಲಿ ಹಾಗೂ ಹಣದಲ್ಲಿ ಕತ್ರಿನಾ ಕೈಫ್ ಶ್ರೀಮಂತಳಾಗಿದ್ದರೂ ಕೂಡ ಅವರನ್ನು ಮದುವೆಯಾಗಲು ಹೊರಟಿರುವುದು ನಿಜವಾದ ಪ್ರೀತಿಯ ಕುರುಹು ಎಂದು ಹೇಳಲಾಗುತ್ತಿದೆ.