ಕೊನೆಗೂ ಮದುವೆಯಾಗಿ ಇಷ್ಟು ವರ್ಷಗಳ ಬಳಿಕ ಶೋಯಬ್ ಮಲಿಕ್ ಯಾಕೆ ಮದುವೆಯಾದೆ ಎಂದು ತಿಳಿಸಿದ ಸಾನಿಯಾ. ಕಾರಣ ಏನಂತೆ ಗೊತ್ತೇ??

9,220

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಭಾರತೀಯ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ರವರ ಬಗ್ಗೆ ಗೊತ್ತಿದೆ. ಭಾರತ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಬಾರಿ ಪ್ರತಿನಿಧಿಸಿರುವ ಹೆಗ್ಗಳಿಕೆ ಸಾನಿಯಾ ಮಿರ್ಜಾ ಅವರಿಗಿದೆ. ಆದರೆ ಅವರು ಇಂದಿಗೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಕೂಡ ಆಗುತ್ತಿದ್ದಾರೆ. ದೇಶಕ್ಕಾಗಿ ಇಷ್ಟೆಲ್ಲ ಸಾಧನೆ ಮಾಡಿದರೂ ಕೂಡ ಅವರು ಟ್ರೋಲ್ ಆಗುತ್ತಿರುವುದು ಯಾಕೆ ಗೊತ್ತಾ.

ಹೌದು ಸಾನಿಯಾ ಮಿರ್ಜಾರವರು ಇಷ್ಟೊಂದು ಸಾಧನೆ ಮಾಡಿದ್ದರು ಕೂಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಟ್ರೋಲ್ ಹಾಗೂ ತೆಗಳಿಕೆಗೆ ಗುರಿಯಾಗುತ್ತಿರುವುದು ಯಾಕೆಂದರೆ ಅವರು 2010 ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಅವರನ್ನು ಮದುವೆಯಾಗಿರುವುದು. ಶೊಯೆಬ್ ಮಲ್ಲಿಕ್ ಅವರನ್ನು ಸಾನಿಯಾ ಮಿರ್ಜಾರವರು ಮದುವೆಯಾಗಿದ್ದ ಮೇಲಿಂದ ಇಲ್ಲಿಯವರೆಗೂ ಕೂಡ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ತೆಗಳಲಾಗುತ್ತಿದೆ.

ಇನ್ನು ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನವೊಂದರಲ್ಲಿ ಇದರ ಕುರಿತಂತೆ ಎಲ್ಲರಿಗೂ ಮನದಟ್ಟಾಗುವಂತೆ ಮಾತನಾಡಿದ್ದಾರೆ ಸಾನಿಯಾ ಮಿರ್ಜಾರವರು. ಇತ್ತೀಚಿಗಷ್ಟೇ ಪಾಕಿಸ್ತಾನದ ಮೀಡಿಯಾ ಒಂದರಲ್ಲಿ ಸಂದರ್ಶನ ನೀಡಬೇಕಾದರೆ ತಮ್ಮ ಮದುವೆಯ ಕಹಾನಿಯನ್ನು ಸಾನಿಯಾ ಮಿರ್ಜಾರವರು ಹೇಳಿಕೊಂಡಿದ್ದಾರೆ. ಹಲವಾರು ವರ್ಷಗಳ ಹಿಂದೆ ಶೋಯಬ್ ಮಲಿಕ್ ಅವರೊಂದಿಗೆ ಹಲವಾರು ಸಮಯಗಳ ಕಾಲ ಡೇಟಿಂಗ್ ನಡೆಸುತ್ತಿದ್ದರು ಸಾನಿಯಾ ಮಿರ್ಜಾರವರು.

ಒಂದು ದಿನ ಶೋಯೆಬ್ ಮಲ್ಲಿಕ್ ರವರು ನಾನು ನಿಮ್ಮನ್ನು ಮದುವೆಯಾಗಲು ಬಯಸುತ್ತಿದ್ದೇನೆ ನಿಮ್ಮ ಉತ್ತರ ಕೂಡ ಹೌದು ಎಂದಾದರೆ ಭಾರತಕ್ಕೆ ಬಂದು ನಾನು ನಿಮ್ಮ ಮನೆಯವರೊಂದಿಗೆ ಮಾತನಾಡುತ್ತೇನೆ ಎಂಬುದಾಗಿ ಹೇಳುತ್ತಾರೆ.

ಅಂದು ಸಿನಿಮಾ ಶೈಲಿಯಂತೆ ಮೊಣಕಾಲಿನ ಮೇಲೆ ನಿಂತು ಶೋಯಬ್ ರವರು ನನಗೆ ಪ್ರೊಪೋಸ್ ಮಾಡಿರಲಿಲ್ಲ ಬದಲಾಗಿ ಪ್ರಾಮಾಣಿಕ ಹೃದಯದಿಂದ ಅವರು ನನಗೆ ಪ್ರೀತಿಯನ್ನು ನಿವೇದನೆ ಮಾಡಿಕೊಂಡಿದ್ದಾರೆ ಎಂಬುದಾಗಿ ಸಾನಿಯಾ ಮಿರ್ಜಾರವರು ಹೇಳಿಕೊಂಡಿದ್ದಾರೆ.

ಅವರ ಪ್ರಾಮಾಣಿಕ ಹೃದಯಕ್ಕಾಗಿ ನಾನು ಮೆಚ್ಚಿ ಅವರನ್ನು ಮದುವೆಯಾಗಿದ್ದೇನೆ ಎಂಬುದಾಗಿ ಹೇಳಿ ಎಲ್ಲಾ ಗೊಂದಲಗಳಿಗೂ ಕೂಡ ತೆರೆಯನ್ನು ಎಳೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಶೊಯೆಬ್ ಮಲ್ಲಿಕ್ ರವರ ವಿಚಾರದಲ್ಲಿ ಒಂದು ಮಾತ್ರ ನನಗೆ ಅವರ ಗುಣ ಇಷ್ಟ ಆಗುವುದಿಲ್ಲ ಎಂಬುದನ್ನು ಕೂಡ ಹೇಳಿದ್ದಾರೆ. ಅದೇನೆಂದರೆ ಶಿವಯೋಗ ಹಾಗೂ ಸಾನಿಯಾ ಮಿರ್ಜಾರವರು ನಡುವಿನ ಯಾವುದೇ ಜಗಳ ವಾದರೂ ಕೂಡ ಯಾವುದೇ ವಿಚಾರಗಳಿದ್ದರೂ ಅವರು ಎದುರುಗಡೆ ಹೇಳುವುದಿಲ್ಲ ಬದಲಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ.

ಇದು ಶೊಯೆಬ್ ಮಲ್ಲಿಕ್ ರವರಲ್ಲಿ ಸಾನಿಯಾ ಮಿರ್ಜಾ ರವರಿಗೆ ಇಷ್ಟವಾಗದ ಒಂದು ಗುಣ ಎಂದು ಹೇಳಬಹುದಾಗಿದೆ. ಸಾನಿಯಾ ಮಿರ್ಜಾರವರು ಪಾಕಿಸ್ತಾನದವರನ್ನೆ ಮದುವೆ ಆಗಿರಲಿ ಆದರೆ ಇಂದಿಗೂ ಕೂಡ ಆಕೆ ಭಾರತಕ್ಕಾಗಿ ಟೆನಿಸ್ ಕ್ರೀಡಾಕ್ಷೇತ್ರದಲ್ಲಿ ದೇಶವನ್ನು ಪ್ರತಿನಿಧಿಸುವಲ್ಲಿ ಎಂದಿಗೂ ಕೂಡ ಹಿಂದೆ ಸರಿದಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳಿ.