ಬಿಗ್ ನ್ಯೂಸ್: ಕಲರ್ಸ್ ಕನ್ನಡದಲ್ಲಿ ಒಂದು ಜಿ ಕನ್ನಡದಲ್ಲಿ ಒಂದು ಧಾರವಾಹಿ ಅಂತ್ಯ ಖಚಿತ. ಕೊನೆಗೊಳ್ಳುತ್ತಿರುವ ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ??

2,495

ನಮಸ್ಕಾರ ಸ್ನೇಹಿತರೇ ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಜನರಿಗೆ ಮನೋರಂಜನೆಯನ್ನು ನೀಡುವಂಥ ಬಹುದೊಡ್ಡ ಮಾಧ್ಯಮಗಳು. ಪ್ರತಿದಿನವೂ ಯಾವ ಧಾರಾವಾಹಿಯಲ್ಲಿ ಏನಾಗಿದೆ, ಇಂದು ಯಾರು ಹೇಗೆ ಮಾತನಾಡುತ್ತಾರೆ, ಅಭಿನಯಿಸುತ್ತಾರೆ, ತಮಗಿಷ್ಟವಾದ ಪಾತ್ರದ ಸ್ಥಿತಿಗತಿ ಇವೆಲ್ಲವನ್ನೂ ಕಾತುರದಿಂದ ಕುಳಿತು ನೋಡುತ್ತಾರೆ ಧಾರಾವಾಹಿ ಅಭಿಮಾನಿಗಳು. ಕನ್ನಡದಲ್ಲಿ ಇತ್ತೀಚಿಗೆ ಅಂದರೆ ಕರೊನಾ ಸಮಯದಿಂದ ಡಬ್ಬಿಂಗ್ ಧಾರಾವಾಹಿಗಳು ಹೆಚ್ಚಾಗಿವೆ. ಜೊತೆಗೆ ಹೊಸ ಹೊಸ ಧಾರಾವಾಹಿಗಳೂ ಕೂಡ ತಲೆಎತ್ತುತ್ತಿವೆ.

ಈ ನಡುವೆ ಕಳೆದ ೨-೩ ವರ್ಷಗಳಿಂದ ಪ್ರಸಾರವಾಗುತ್ತಿದ್ದ ಧಾರಾವಾಹಿಗಳೆರಡು ಕೊನೆಯಾಗುತ್ತಿವೆ ಎನ್ನುವ ಮಾತು ಕೇಳಿಬರುತ್ತಿತ್ತು. ಇದಕ್ಕೆ ಕಾರಣ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿಗಳ ಪ್ರೋಮೋಗಳೂ ಕೂಡ ಹೌದು. ಆದರೆ ಇದುವರೆಗೆ ಉತ್ತಮ ಟಿಆಪ್ ಪಿ ಉಳಿಸಿಕೊಂಡು ಬಂದಿರುವ ಈ ಎರಡು ಧಾರಾವಾಹಿಗಳು ಮುಗಿಯುತ್ತಿರುವುದು ನಿಜವಾ? ನಿಜವಾಗಿದ್ದರೆ ಯಾಕೆ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಕಾಡಿತ್ತು. ಆದರೆ ಧಾರಾವಾಹಿಗಳ ತಡ ಇದಕ್ಕೆ ಉತ್ತರ ನೀಡಿದೆ.

ಹೌದು, ಕಲರ್ಸ್ ಕನ್ನಡದ ಮಂಗಳ ಗೌರಿ ಮದುವೆ ಹಾಗೂ ಜೀ ಕನ್ನಡದ ಕಮಲಿ ಧಾರಾವಾಹಿ ಸಧ್ಯದಲ್ಲೇ ಮುಗಿಯಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಪುಟ್ತಗೌರಿ ಮದುವೆ ಧಾರಾವಾಹಿಯ ಮುಂದುವರೆದ ಭಾಗವಾಗಿ ಮಂಗಳ ಗೌರಿ ಮದುವೆ ಆರಂಭವಾಗಿ ಮೂರು ವರ್ಷಗಳೇ ಕಳೆದಿವೆ. ಈ ಧಾರಾವಾಹಿಗೆ ಅಭಿಮಾನಿಗಳು ಹಾಗೂ ಟ್ರೋಲ್ ಮಾಡುವವರೂ ಸಹ ಅಷ್ಟೇ ಇದ್ದಾರೆ. ಎಲ್ಲವನ್ನೂ ಮರೆತ ರಾಜೀವಪ್ಪ ಆತನ ಪೋಲೀಸ್ ಕೆಲಸವನ್ನು ಮರೆಯಲಿಲ್ಲ ಯಾಕೆ ಎಂದು ಜನ ಟ್ರೋಲ್ ಮಾಡಿದ್ದರೂ ಮಂಗಳ ಪಾತ್ರವನು ಮೆಚ್ಚಿಕೊಂಡವರೂ ಅಷ್ಟಿಷ್ಟಲ್ಲ! ಸದ್ಯ ರಾಜೀವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಗಗನ್ ಚೆನ್ನಪ್ಪ ಧಾರಾವಾಹಿಯಿಂದ ಹೊರನಡೆದಿದ್ದಾರೆ.

ಇನ್ನು ಕಮಲಿ ಧಾರಾವಾಹಿ ಹಳ್ಳಿಯಲ್ಲಿ ಶುರುವಾಗಿ ಪೇಟೆಗೆ ಬಂದು ಈಗ ಕಮಲಿ ಮದುವೆಯಾಗಿ ಅತ್ತೆಯ ಮನೆಯಲ್ಲಿ ಕಷ್ಟ ಅನುಭವಿಸುವವರೆಗೆ ಬಂದು ನಿಂತಿದೆ. ಇದಕ್ಕೂ ಕೂಡ ವೀಕ್ಷಕರ ಸಂಖ್ಯೆಯೇನೂ ಕಡಿಮೆ ಇಲ್ಲ. ಅಂದಹಾಗೆ ಸದ್ಯ ಈ ಎರಡೂ ಧಾರಾವಾಹಿಗಳೂ ಉತ್ತಮ ಟಿ ಆರ್ ಪಿ ರೇಟಿಂಗ್ ಹೊಂದಿದ್ದು, ಈ ಧಾರಾವಾಹಿಗಳನ್ನು ಮುಗಿಸುವ ಯೋಚನೆ ಇಲ್ಲ ಎಂದು ಮೂಲಗಳಿಂದ ತಿಳಿದುಬಂದಿವೆ. ಇದು ವೀಕ್ಷಕರಿಗೆ ಸಂತೋಷದ ವಿಷಯವಾದ್ರೆ, ಇದೀಗ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪ್ರೋಮೋ ಕುತೂಹಲವನ್ನೂ ಹುಟ್ಟುಹಾಕಿದೆ.