ಡಾ.ವಿಷ್ಣುವರ್ಧನ್ ಬಗ್ಗೆ ಪುನೀತ್ ಅದೆಂಥಾ ಮಾತಾಡಿದ್ದರು ಗೊತ್ತಾ?? ಇದಕ್ಕೇನಾ ಹೇಳೋದು ದೊಡ್ಮನೆ ಮಗ ಅಂತ??

18,948

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದ ಗೌರವ ಹಾಗೂ ಅಭಿಮಾನಿ ಬಳಗವಿದೆ. ಅವರು ಪ್ರತಿಯೊಬ್ಬರಿಗೂ ನೀಡುತ್ತಿದ್ದಂತ ಪ್ರೀತಿ ವಾತ್ಸಲ್ಯಗಳು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಉನ್ನತ ಸ್ಥಾನ ಇರುವಂತೆ ಮಾಡಿದೆ.

ಇನ್ನು ಯಾರೇನೇ ಎಷ್ಟೇ ಸುಳ್ಳು ಸುದ್ದಿಗಳನ್ನು ಹಬ್ಬಿಸಲು ರಾಜಕುಮಾರ್ ಕುಟುಂಬಕ್ಕೂ ವಿಷ್ಣುವರ್ಧನ್ ಕುಟುಂಬಕ್ಕೂ ಮೊದಲಿನಿಂದಲೂ ಕೂಡ ಅವಿನಾಭಾವ ಸಂಬಂಧ ಉಳಿದುಕೊಂಡು ಬಂದಿದೆ. ಈ ಕುರಿತಂತೆ ಎರಡು ಕುಟುಂಬಗಳು ಕೂಡ ಹೆಚ್ಚಿನ ಮಾತನ್ನು ಆಡದಿದ್ದರೂ ಕೂಡ ಒಳ್ಳೆಯ ಸಂಬಂಧವನ್ನು ಇಂದಿಗೂ ಕೂಡ ಇಟ್ಟುಕೊಂಡು ಬಂದಿದ್ದಾರೆ. ಇನ್ನು ಇತ್ತೀಚಿಗಷ್ಟೇ ವಿಷ್ಣುವರ್ಧನ್ ಅವರ ಕುರಿತಂತೆ ತೆಲುಗಿನ ನಟ ವಿಜಯ ರಂಗರಾಜು ಕೆಟ್ಟದಾಗಿ ಮಾತನಾಡಿದ್ದ.

ಈ ಸಂದರ್ಭದಲ್ಲಿ ಇಡೀ ಕನ್ನಡ ಚಿತ್ರರಂಗವೇ ವಿಜಯ ರಂಗರಾಜ್ ವಿಷ್ಣುವರ್ಧನ್ ರವರ ಕ್ಷಮೆ ಕೇಳುವವರಿಗೂ ಕೂಡ ಬಿಟ್ಟಿರಲಿಲ್ಲ. ನಂತರ ಕನ್ನಡಿಗರ ಕಡು ಕೋಪವನ್ನರಿತ ವಿಜಯರಂಗ ರಾಜ ವಿಷ್ಣುವರ್ಧನ ರವರ ಕ್ಷಮೆ ಕೇಳಿದ್ದ. ಇದು ಇಂದಿಗೂ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಉಳಿಸಿಕೊಂಡು ಬಂದಂತಹ ಗೌರವ. ಈ ಸಂದರ್ಭದಲ್ಲಿ ವಿಷ್ಣುವರ್ಧನ್ ರವರ ಪರವಾಗಿ ಕನ್ನಡ ಚಿತ್ರರಂಗದ ಹಲವಾರು ನಟರು ಮಾತನಾಡಿದ್ದರು ಅದರಲ್ಲಿಯೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮಾತನಾಡಿರುವುದು ಸಾಕಷ್ಟು ಗಮನ ಸೆಳೆದಿತ್ತು.

ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರು, ನಮ್ಮ ನಾಡಿನ ಮೇರು ನಟರಲ್ಲಿ ವಿಷ್ಣು ಸರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆ ಕಲಾವಿದ ಸಮ ಕೇಳಿ ತನ್ನ ಮಾತುಗಳನ್ನು ಹಿಂಪಡೆಯಬೇಕು ಭಾರತೀಯ ಚಿತ್ರರಂಗ ನಮ್ಮ ಮನೆ ಕಲಾವಿದರು ಒಂದು ಕುಟುಂಬ ಕಲೆಗೆ ಕಲಾವಿದರಿಗೆ ಗೌರವ ನೀಡುವುದು ನಮ್ಮ ಮೊದಲ ಕರ್ತವ್ಯ ಮೊದಲು ಮಾನವನಾಗು ಎಂಬುದಾಗಿ ಎಚ್ಚರಿಕೆ ನೀಡಿದ್ದರು.

ಅಪ್ಪಾಜಿ ಅಣ್ಣಾವ್ರು ಹೇಳಿದಂತೆ ಪ್ರತಿಯೊಬ್ಬ ಕಲಾವಿದರಿಗೂ ಕೂಡ ಗೌರವ ನೀಡುವುದೇ ಅವರಿಗೆ ನಾವು ನೀಡುವಂತಹ ದೊಡ್ಡ ಸನ್ಮಾನ ಎಂಬುದನ್ನು ಪುನೀತ್ ರಾಜಕುಮಾರ್ ರವರು ತಮ್ಮ ಜೀವಿತಾವಧಿಯಲ್ಲಿ ಅಕ್ಷರಶಃ ಪಾಲಿಸಿಕೊಂಡು ಬಂದಿದ್ದರು. ಇನ್ನು ಕೇವಲ ಈ ಸಮಯದಲ್ಲಿ ಮಾತ್ರವಲ್ಲದೆ ಇತ್ತೀಚಿಗಷ್ಟೇ ವಿಷ್ಣುವರ್ಧನ್ ರವರ 70ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಕೂಡ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಇಬ್ಬರು ಜೊತೆಗಿರುವ ಫೋಟೋವನ್ನು ಹಂಚಿಕೊಂಡು ವಿಷ್ಣುವರ್ಧನ್ ಅವರನ್ನು ಸ್ಮರಿಸಿಕೊಂಡಿದ್ದಾರೆ.

ಮೊದಲಿನಿಂದಲೂ ಕೂಡ ವಿಷ್ಣುವರ್ಧನ್ ರವರೊಂದಿಗೆ ಪುನೀತ್ ರಾಜಕುಮಾರ್ ರವರು ಆತ್ಮೀಯ ಸಂಬಂಧವನ್ನು ಹೊಂದಿದ್ದು ಅವರ ಕುರಿತಂತೆ ಅಪಾರವಾದ ಗೌರವವನ್ನು ಹೊಂದಿದ್ದರು. ಆದರೆ ಕನ್ನಡ ಚಿತ್ರರಂಗದ ಈ ಇಬ್ಬರೂ ಮಹಾನ್ ಕಲಾವಿದರು ಈಗ ನಮ್ಮೊಂದಿಗೆ ಇಲ್ಲ ಎನ್ನುವುದೇ ಎಲ್ಲರ ದುಃಖ ಪಡಬೇಕಾದ ವಿಷಯ. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.