ವಿಚ್ಚೇದನ ತೆಗೆದುಕೊಂಡ ಬಳಿಕ ನಾನು ಇರುವುದು ನೋಡಿ ಹೆಮ್ಮೆಯಾಗುತ್ತಿದೆ ಎಂದ ಸಮಂತಾ. ಯಾಕಂತೆ ಗೊತ್ತೇ??ಮೊದಲ ಬಾರಿಗೆ ವಿಚ್ಚೇದನ ಕುರಿತು ಸಂದರ್ಶನದಲ್ಲಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಟಿ ಸಮಂತಾ ರವರು ನಾಗಚೈತನ್ಯ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿರುವ ಸುದ್ದಿ ನಿಮಗೆಲ್ಲಾ ತಿಳಿದೇ ಇದೆ. ಇಬ್ಬರು ಕೂಡ ಹಲವಾರು ವರ್ಷಗಳ ಕಾಲ ಪ್ರೀತಿಸಿ ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ಕೂಡ ಜೊತೆಯಾಗಿ ಸಂತೋಷದಿಂದ ನಡೆಸಿದ್ದರು. ಆದರೆ ಈಗ ಇಬ್ಬರೂ ಕೂಡ ಬೇರೆಯಾಗಿದ್ದಾರೆ. ಸಮಂತ ರವರು ತಮ್ಮ ವಿವಾಹ ವಿಚ್ಛೇದನದ ಸುದ್ದಿಯನ್ನು ಹೇಳುವುದಕ್ಕಿಂತ ಮುಂಚೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿರುವ ಅಕ್ಕಿನೇನಿ ಎಂಬ ಪದನಾಮವನ್ನು ತಮ್ಮ ಹೆಸರಿನಿಂದ ತೆಗೆದು ಹಾಕಿದ್ದರು.
ಇದರಿಂದಾಗಿ ಸಮಂತ ಹಾಗೂ ನಾಗಚೈತನ್ಯ ರವರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ಹರಿದಾಡುವ ಸಂದರ್ಭದಲ್ಲೇ ಹಠಾತ್ತನೆ ತಾನು ಹಾಗೂ ನಾಗಚೈತನ್ಯ ವೈವಾಹಿಕ ಜೀವನದಿಂದ ದೂರವಾಗುತ್ತಿದ್ದೇವೆ ಎಂಬ ಆಶ್ಚರ್ಯಕರ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹೊರಹಾಕಿದರು. ಇದನ್ನು ಕೇಳಿದ ನಂತರ ಅಭಿಮಾನಿಗಳ ದುಃಖ ಎನ್ನುವುದು ನೂರ್ಮಡಿಯಷ್ಟು ಹೆಚ್ಚಾಗುತ್ತದೆ. ಸಮಂತ ರವರು ಕೂಡ ಸಾಕಷ್ಟು ದುಃಖದಲ್ಲಿದ್ದರು ಆದರೆ ಯಾವತ್ತೂ ಕೂಡ ತನ್ನ ವೈವಾಹಿಕ ಜೀವನದ ವಿಚ್ಛೇದನದ ಕುರಿತಂತೆ ಎಲ್ಲಿಯೂ ಕೂಡ ಮಾತನಾಡಿರಲಿಲ್ಲ.

ಈಗ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಇದರ ಕುರಿತಂತೆ ಸಂಬಂಧ ಅವರು ಹೇಳಿಕೊಂಡಿದ್ದಾರೆ. ಫಿಲಂ ಫೇರ್ ಸಮಾರಂಭದ ಸಂದರ್ಶನವೊಂದರಲ್ಲಿ ನಟಿ ಸಮಂತಾ ರವರು ನಾನು ಕೂಡ ವಿವಾಹ ವಿಚ್ಛೇದನದ ನಂತರ ಕುಗ್ಗಿ ಹೋಗುತ್ತೇನೆ ನನ್ನ ಜೀವನವನ್ನು ತಾನು ಮುಗಿಸಿ ಕೊಳ್ಳುತ್ತೇನೆ ಎಂಬುದಾಗಿ ಭಾವಿಸಿದ್ದೆ. ಆದರೆ ಈಗ ನಾನು ಎಲ್ಲವನ್ನು ನಿಯಂತ್ರಿಸಿ ಕೊಂಡಿರುವ ಪರಿಯನ್ನು ನೋಡಿ ನನ್ನ ಮೇಲೆ ನನಗೆ ಹೆಮ್ಮೆಯಾಗುತ್ತಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು ನಿನ್ನ ಎಷ್ಟೇ ಸಂಬಂಧ ಅವರವರ ಹೊಸ ಚಿತ್ರವಾಗಿರುವ ಯಶೋಧ ಚಿತ್ರೀಕರಣ ಪುಣೆ ಯಲ್ಲಿ ಪ್ರಾರಂಭವಾಗಿದ್ದು ಚಿತ್ರತಂಡದೊಂದಿಗೆ ಚಿತ್ರೀಕರಣದಲ್ಲಿ ಸೇರಿಕೊಂಡಿದ್ದಾರೆ.